Read - 3 minutes
ಒಬ್ಬರು ನೊಬೆಲ್ ಶಾಂತಿ ಪ್ರಶಸ್ತ ವಿಜೇತೆ, ಇನ್ನೊಬ್ಬರು ಸಾಮಾಜಿಕ ನ್ಯಾಯ ಹಾಗೂ ಜಾತ್ಯತೀತತೆಯ(?)ನ್ನು ಹಾಸು ಹೊದ್ದಕೊಂಡಿರುವ ಪಕ್ಷದ ನಾಯಕಿ(?). ಆ ಇಬ್ಬರೂ ಮಹಿಳಾಮಣಿಗಳು ಸ್ವರ್ಗದ ಹೇಳಿಕೆ ನೀಡಿ ಇನ್ನೂ ತಿಂಗಳೂ ಸರಿಯಾಗಿ ಕಳೆದಿಲ್ಲ, ಆಗಲೇ ಆ ಸ್ವರ್ಗವಾಸಿಗಳ ಶಾಂತಿಯಿಂದ ಕೂಡಿದ ನರಕ ದರ್ಶನ ಜಮ್ಮು ಕಾಶ್ಮೀರದ ಉರಿಯಲ್ಲಿ ಕಾಣಿಸಿಕೊಂಡಿದೆ.
ನಿನ್ನೆ ಉರಿಯಲ್ಲಿ ನಡೆದ ಭೀಕರ ದಾಳಿಯಲ್ಲಿ 20 ಕ್ಕೂ ಹೆಚ್ಚು ಯೋಧರು ಹುತಾತ್ಮರಾದ ದುಃಖದ ಸಂದರ್ಭದಲ್ಲಿ, ಮೇಲೆ ಹೇಳಿದ ಇಬ್ಬರೂ ಶಾಂತಿ ಪಾಲಕರು ಹಾಗೂ ಬೋಧಕರು ಯಾಕೋ ಕಣ್ಮರೆಯಾಗಿದ್ದಾರೆ.
ಆ ಇಬ್ಬರು ಶಾಂತಿ ಪಾಲಕ(?)ರಲ್ಲಿ ಓರ್ವ ಶಾಂತಿಧೂತೆ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಯೂಸುಫ್ ಮಲಾಲಾ(ಆದರೆ ಈ ಹುಡುಗಿ ಎಂದು ನೊಬೆಲ್ ಪಡೆಯಲು ಅದೇನು ಶಾಂತಿ ಕಾಪಾಡಲು ಹೋರಾಡಿದಳೂ ಎನ್ನುವುದು ಇಂದಿಗೂ ಯಕ್ಷ ಪ್ರಶ್ನೆಯಾಗಿದೆ).
ಈಕೆ ಕೆಲವು ದಿನಗಳ ಹಿಂದೆ ಹೇಳಿಕೆಯೊಂದನ್ನು ನೀಡಿದ್ದಳು. “ಭಾರತೀಯ ಯೋಧರು ಗಡಿಯಲ್ಲಿ ಶಾಂತಿ ಕಾಪಾಡಬೇಕು, ಬಂದೂಕು ಕೆಳಗಿಡಬೇಕು. ಕಾಶ್ಮೀರ ಜನರಿಗೆ ಮೂಲಭೂತ ಹಕ್ಕುಗಳು ದೊರೆಯಬೇಕು. ಅವರು ಸ್ವತಂತ್ರ್ಯವಾಗಿ, ಯಾವುದೇ ಭಯ ಇಲ್ಲದೇ ಜೀವಿಸಬೇಕು. ಆದರೆ, ಆಕೆ ಈ ಮಾತನ್ನು ಹೇಳುವಾಗ ಭಾರತೀಯ ಯೋಧರನ್ನು ಉದ್ದೇಶಿಸಿ ಹೇಳಿದಳೇ ಹೊರತು, ನೂರಾರು ಭಾರತೀಯ ಯೋಧರನ್ನು ಕೊಂದ, ಸಾವಿರಾರು ಭಾರತೀಯ ಸೈನಿಕರನ್ನು ಗಾಯಾಳುಗಳನ್ನಾಗಿ ಮಾಡಿದ ನೀಚ ಪಾಕಿಸ್ಥಾನದ ಯೋಧರು ಹಾಗೂ ಪಾಕ್ ಸೇನೆಯ ಪ್ರಾಯೋಜಿತ ಉಗ್ರರ ಕೃತ್ಯಗಳು ಅವಳಿಗೆ ಕಾಣಲಿಲ್ಲ.
ಆ ಹುಡುಗಿ ಹೇಳಿ ಇನ್ನೂ ಒಂದು ತಿಂಗಳೂ ಸಹ ಕಳೆದಿಲ್ಲ. ಆಗಲೇ ಆಕೆ ಹೇಳಿದ ಶಾಂತಿ ದೂತರು ಅಟ್ಟಹಾಸ ಮೆರೆದಿದ್ದಾರೆ. ಈಗ ಆಕೆಯನ್ನು ಕೇಳಬೇಕಿದೆ. ಭಾರತೀಯ ಗಡಿಯನ್ನು ಮುರಿದು, ಸೇನಾ ಮುಖ್ಯ ಕಚೇರಿಯ ಮೇಲೆ ದಾಳಿ ನಡೆಸಿ, ನಮ್ಮ ಸೈನಿಕರನ್ನು ಕೊಂದದ್ದು ಯಾರು? ಮಲಗಿದ್ದ ಯೋಧರ ಮೇಲೆ ದಾಳಿ ಮಾಡಿದ ನಪುಂಸಕರು ಯಾರು? ಇದೇ ಏನು ನೀನು ಹೇಳಿದ ಮೂಲಭೂತ ಹಕ್ಕುಗಳು? ಕೊಲ್ಲುವದೇ ನಿಮ್ಮ ಮೂಲಭೂತ ಹಕ್ಕೇ ಯೂಸುಫ್ ಮಲಾಲಾ?
ಈ ಅಪ್ರಭುದ್ದ ಹುಡುಗಿ ಅದಾವ ಲೆಕ್ಕಾಚಾರದಲ್ಲಿ ಸೇನೆಯ ಶಾಂತಿ ಕುರಿತು, ಪಾಕ್ ಸೇನೆಯ ಪರ ವಕಾಲತ್ತು ವಹಿಸಿದಳು? ನಿನ್ನೆ ನಡೆದ ದಾಳಿಯ ವೇಳೆ ಭಾರತೀಯ ಯೋಧರ ಮೇಲೆ ಗ್ರೆನೇಡ್ ಎಸೆದವರು, ಗುಂಡಿನ ಮಳೆಗರೆದವರು ಮುಗ್ದರೆ? ಶಾಂತಿಯಿಂದಿದ್ದ ಗಡಿಯಲ್ಲಿ, ಗಡಿ ಬೇಲಿಯನ್ನು ಮುರಿದು, ಭೀಕರ ದಾಳಿ ನಡೆಸಿ ಅಶಾಂತಿ ಮೂಡಿಸಿದ ಉಗ್ರರು ಶಾಂತಿಪ್ರಿಯರೇ ಮಲಾಲಾ? ಪಾಕ್ ಪರ ವಕಾಲತ್ತು ವಹಿಸುತ್ತೀಯಲ್ಲಾ ಮಲಾಲಾ ಭೇಟಿ.. ಬಲೂಚಿಸ್ಥಾನದಲ್ಲಿ ಭೀಕರವಾಗಿ ಜನರನ್ನು ಪಶುಗಳಿಗಿಂತಲೂ ಕ್ರೂರವಾಗಿ ಹತ್ಯೆ ಮಾಡುತ್ತಿರುವವರು ಯಾರು? 5 ವರ್ಷದ ಹೆಣ್ನು ಮಗುವಿನ ಮೇಲೆ ಅತ್ಯಾಚಾರ ಮಾಡಿದವರು ಮಾನವ ಹಕ್ಕು ರಕ್ಷಕರೇ? ಶಾಂತಿ ಹಾಗೂ ಮಾನವ ಹಕ್ಕು ಕುರಿತಾಗಿ ಮಾತನಾಡುವ ನಿನಗೆ ಪಾಕಿಸ್ಥಾನ ಸೇನೆಯಲ್ಲಿ ಹೆಣ್ಣುಮಕ್ಕಳನ್ನು ಭೋಗದ ವಸ್ತುವನ್ನಾಗಿ ಮಾಡಿಕೊಂಡಿರುವುದು ಕಾಣುವುದಿಲ್ಲವೇ?
ಇಷ್ಟೆಲ್ಲಾ ನೀಚತನ, ರಾಕ್ಷಸೀ ಕೃತ್ಯಗಳು ನಿನ್ನ ಪಾಕಿಸ್ಥಾನದಲ್ಲಿ ಇಟ್ಟುಕೊಂಡು ನಮಗೆ ಬುದ್ಧಿ ಹೇಳುತ್ತೀಯ ನೀನು. ಆದರೆ, ನಿನಗೆ ಮಾತ್ರ ಆ ನಿನ್ನ ಶಾಂತಿದೂತರ ನಾಡಾದ ಪಾಕಿಸ್ತಾನದಲ್ಲಿ ನೆಲೆಸುವುದು ಸಾಧ್ಯವಾಗದೇ ನೆಮ್ಮದಿಯಾಗಿ ಲಂಡನ್ ನಲ್ಲಿದ್ದೀಯಾ. ಮಲಾಲಾ ಭೇಟಿ, ಇನ್ನೊಮ್ಮೆ ಭಾರತಕ್ಕೆ ಉಚಿತ ಸಲಹೆ ನೀಡುವ ಮುನ್ನ ಕೊಳೆತು ನಾರುತ್ತಾ, ರಾಕ್ಷಸರ ಕಾರ್ಖಾನೆಯಾಗಿರುವ ನಿನ್ನ ದೇಶದ ಕುರಿತಾಗಿ ಮೊದಲು ಚಿಂತಿಸು.
ಮತ್ತೊಬ್ಬ ಮಹಾನ್ ನಾಯಕಿ(?) ರಮ್ಯಾ ಎಂಬ ಶಾಂತಿದೂತೆ
ಮಲಾಲಾ ನಂತರ ಬಂದರೆ ನಮ್ಮ ಕರುನಾಡಿನ ಮಾಜಿಯಾಗುತ್ತಿರುವ ಚಿತ್ರನಟಿ, ಮಾಜಿಯಾಗಿರುವ ಸಾಂಸದೆ ಮಿಸ್ ರಮ್ಯಾ ಅವರ ಸರದಿ.
ಅಮ್ನೆಸ್ಟಿ ಇಂಟರ್ ನ್ಯಾಶನಲ್ ಎಂಬ ಸಂಸ್ಥೆಯ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ನಮಗೆ ಕಾಶ್ಮೀರದಲ್ಲಿ ಆಜಾದಿ ಬೇಕು ಎಂದು ಕೂಗಿ, ಭಾರತೀಯ ಸೇನೆಯ ವಿರುದ್ಧ ಮಾತನಾಡಿದ್ದರು ಕೆಲವು ದೇಶದ್ರೋಹಿಗಳು. ಅದೇ ವೇಳೆ ಹೇಳಿಕೆ ನೀಡಿದ್ದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪಾಕ್ ಗೆ ಹೋಗುವುದಕ್ಕಿಂತಲೂ ನರಕಕ್ಕೆ ಹೋಗುವುದು ಲೇಸು ಎಂದಿದ್ದರು.
ಆ ವೇಳೆ ಪ್ರತಿಕ್ರಿಯೆ ನೀಡಿದ್ದ ರಮ್ಯಾ, ಪಾಕಿಸ್ಥಾನ ನರಕ ಅಲ್ಲ. ಪಾಕಿಸ್ಥಾನ ಒಂದು ಶಾಂತಿ ಬಯಸುತ್ತಿರುವ ದೇಶ ಎನ್ನುವುದನ್ನು ನಾವು ತಿಳಿಯಬೇಕು. ನಾನು ಪಾಕಿಸ್ಥಾನಕ್ಕೆ ತೆರಳಿದ ವೇಳೆ ಅಲ್ಲಿನ ಜನ ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂಬ ಅಣಿಮುತ್ತನ್ನು ಉದುರಿಸಿದ್ದರು.
ಈಗೆಲ್ಲಿ ಅಡಗಿ ಕುಳಿತಿದ್ದಾರೆ ಮಲಾಲಾ ಹಾಗೂ ರಮ್ಯಾ?
ಪಾಕಿಸ್ಥಾನ ಶಾಂತಿ ಬಯಸುವ ನಾಡು ಎಂದು ಹೇಳಿಕೆ ನೀಡಿ ಬಿಟ್ಟಿ ಪ್ರಚಾರ ಪಡೆದು, ಒಂದಷ್ಟು ವಿವಾದಗಳನ್ನೂ ಸೃಷ್ಠಿಸಿಕೊಂಡು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸುದ್ಧಿ ಮಾಡಿದ ಮಲಾಲಾ ಹಾಗೂ ರಮ್ಯಾ ಎಂಬ ಇಬ್ಬರು ಶಾಂತಿ ಪ್ರತಿಪಾದಕರು ಈಗೆಲ್ಲಿ ಹೋಗಿದ್ದಾರೆ.
ನೀವು ಹೇಳಿದ ಆ ಶಾಂತಿ ಬಯಸುವ ನಾಡಿನಿಂದ ಬಂದ ಕಲಿಯುಗ ರಾಕ್ಷಸರು ಭಾರತೀಯ ಸೇನೆಯ 20 ಯೋಧರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಈಗ ವಿಚಾರದಲ್ಲಿ ಮಾತನಾಡಲು, ಪಾಕ್ ನ ಕೃತ್ಯವನ್ನು ಖಂಡಿಸಲು ನಿಮ್ಮ ನಾಲಿಗೆಗಳು ಬಿದ್ದು ಹೋಗಿದೆವೆಯೇ?
ಕಡೆಯಪಕ್ಷ ಮೃತರಾದ ಭಾರತೀಯ ಯೋಧರ ಕುರಿತಾಗಿ ಒಂದು ಸಂತಾಪದ ಮಾತೂ ನಿಮ್ಮಗಳ ಬಾಯಿಂದ ಬಂದಿಲ್ಲ ಎಂದರೆ ನಿಮ್ಮ ನೈತಿಕತೆ, ನಿಮ್ಮ ನೀಚತನ ಎಂತಹದ್ದು ಎನ್ನುವುದು ತಿಳಿಯುತ್ತದೆ. ಮಾತ್ರವಲ್ಲ ಗೋಮುಖ ವ್ಯಾಘ್ರದ ಮುಖವಾಡ ಧರಿಸಿರುವ ನಿಮ್ಮ ಜಾತ್ಯತೀತತೆ ಹಾಗೂ ಕಪಟವೇಷ ಕಳಚುತ್ತಿದೆ.
ಕೇಳಮ್ಮಾ ಮಲಾಲಾ…
ನಾವೂ ಶಾಂತಿದೂತರು ಎಂದು ಬಿಂಬಿಸಿಕೊಳ್ಳಲು ಅಕಸ್ಮಾತ್ ಆಗಿ ನಿನಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಕೊಡಿಸಲಾಗಿದೆ. ಅಷ್ಟೇ ಹೊರತು ನೀನೇನು ಶಾಂತಿ ಪ್ರತಿಷ್ಠಾಪಿತಳಲ್ಲ. ಪ್ರಪಂಚದ ಶಾಂತಿಯನ್ನು ಬೇಡ, ನಿನ್ನ ದೇಶದಲ್ಲಿ ಶಾಂತಿಯನ್ನು ಕಾಪಾಡಲು ನಿನ್ನ ಕೊಡುಗೆಯೇನು ಎನ್ನುವುದನ್ನು ಮೊದಲು ಚಿಂತಿಸಿ. ಆ ಕುರಿತು ಚಿಂತಿಸಿದರೆ, ನೊಬೆಲ್ ಪ್ರಶಸ್ತಿ ಪಡೆದಿದ್ದು ಬಿಟ್ಟರೆ ನಿನ್ನ ಸಾಧನೆ ಶೇ.100 ರಷ್ಟು ಸೊನ್ನೆಯಷ್ಟೆ.. ನೀನು ನೊಬೆಲ್ ಪಡೆದುಕೊಂಡಾಗ ಯಾವ ವಯಸ್ಸಿನಲ್ಲಿ ಇದ್ದಯೋ, ಆ ವಯೋಮಾನದೊಳಗೆ ಪ್ರಪಂಚವೇ ತಿರುಗಿ ನೋಡುವಂತಹ ಸಾಧನೆ ಮಾಡಿದ ಮಕ್ಕಳಿದ್ದಾರೆ ನಮ್ಮ ಭಾರತದಲ್ಲಿ. ಅವರು ನಮ್ಮ ಹೆಮ್ಮೆ, ಅವರ ಮುಂದೆ ನೀನು ನಿಜಕ್ಕೂ ಸೊನ್ನೆ. ಅದೇ ರೀತಿ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಇಡಿಯ ಕಾಶ್ಮೀರ ನಮ್ಮ ದೇಶದ ಅವಿಭಾಜ್ಯ ಅಂಗ. ಇಲ್ಲಿ ಭಾರತೀಯರಿಗೆ ಉಪದೇಶ ನೀಡಿದ ಹಾಗಲ್ಲ. ಹೋಗಿ ನಿನ್ನ ಪಾಕ್ ಗೆ ಹೇಳು, ಕಾಶ್ಮೀರವನ್ನು ಭಾರತಕ್ಕೆ ಬಿಟ್ಟುಕೊಟ್ಟು ಮುಂದಾಗಬಹುದಾದ ಅನಾಹುತದಿಂದ ದೂರವಿರಿ ಎಂದು. ಹೇಳುವ ತಾಕತ್ತಿದೆಯೇ ಚಿಂತಿಸಿ ನೋಡು ಮಲಾಲಾ…
ಹಲೋ ರಮ್ಯಾ ಕೇಳಿ…
ದೇಶ, ಭಾಷೆ ಹಾಗೂ ದೇಶದ ಕುರಿತಾದ ಸೂಕ್ಷ್ಮ ವಿಚಾರಗಳ ಕುರಿತಾಗಿ ಮತ್ತೊಮ್ಮೆ ಹೇಳಿಕೆ ನೀಡುವಾಗ ಸಾವಿರ ಬಾರಿ ಯೋಚಿಸಿ. ಇಲ್ಲವಾದರೆ ನಮ್ಮ ಜನರಿಂದ ನಿಮಗೆ ತಕ್ಕ ಶಾಸ್ತಿ ಖಂಡಿತಾ. ದೇಶದಲ್ಲಿ ಬಗೆಹರಿಸಬೇಕಾದ ಸಮಸ್ಯೆಗಳು ಸಾವಿರಾರು ಇವೆ. ನಿಮ್ಮ ಕ್ಷೇತ್ರದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾವೇರಿ ಸಮಸ್ಯೆ ಭೀಕರವಾಗುತ್ತಿದೆ. ಹೋಗಿ ಅದರ ಹೋರಾಟದಲ್ಲಿ ಪಾಲ್ಗೊಳ್ಳಿ. ಎಲ್ಲಕ್ಕೂ ಮುಖ್ಯವಾಗಿ ಕಾಶ್ಮೀರ ಸಮಸ್ಯೆ ಕುರಿತಾಗಿ ಮಾತನಾಡುವ ನಿಮಗೆ, ಕಾಶ್ಮೀರ ಸಮಸ್ಯೆ ಉದ್ಭವವಾಗಲು ನಿಮ್ಮ ಕಾಂಗ್ರೆಸ್ ಪಕ್ಷವೇ ಮೂಲ ಕಾರಣ ಎನ್ನುವುದು ನೆನಪಿರಲಿ.
Discussion about this post