ನವದೆಹಲಿ: ಮಾಲೆಗಾವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನಲ್ಲಿರುವ ವಿಶೇಷ ನ್ಯಾಯಾಲಯ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಇತರ ಐದು ಮಂದಿ ವಿರುದ್ಧ ಆರೋಪ ಪಟ್ಟಿ ಮಾಡಿದೆ.
ಪ್ರಕರಣ ಕುರಿತಂತೆ ಪಟ್ಟಿ ಮಾಡಿರುವ ಎನ್‌ಐಎ ನ್ಯಾಯಾಲಯದ ಅಧ್ಯಕ್ಷ ನ್ಯಾ.ವಿನೋದ್ ಪಾದಲ್ಕರ್ ಈ ಪಟ್ಟಿ ಮಾಡಿದ್ದು, ಈಗ ಯುಎಪಿಎ ಕಾಯ್ದೆ ಅಡಿಯಲ್ಲಿ, ಆರೋಪಿಗಳನ್ನು ಭಯೋತ್ಪಾದಕಕೃತ್ಯದ ಭಾಗವಾಗಿ ಆರೋಪಿಸಲಾಗಿದೆ ಮತ್ತು ಐಪಿಸಿ ಅಡಿಯಲ್ಲಿ ಕ್ರಿಮಿನಲ್ ಪಿತೂರಿ ಮತ್ತು ಕೊಲೆ ಆರೋಪವನ್ನು ದಾಖಲಿಸಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 2ರಂದು ನಡೆಯಲಿದೆ.
ಪುರೋಹಿತ್ ಮತ್ತು ಸಾಧ್ವಿ ಅವರಲ್ಲದೆ ಮೇರ್ಜ(ನಿವೃತ್ತ)ರಮೇಶ್ ಉಪಾಧ್ಯಾಯ, ಅಜಯ್ ರಹೀರ್ಕರ್, ಸುಧಾಕರ್ ದ್ವಿವೇದಿ, ಸುಧಕರ್ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿ ಅವರುಗಳು ಮಾಲೆಗಾಂವ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಸಿಲುಕಿದ್ದಾರೆ.
2008 ರ ಸೆ.29 ರಂದು ಮುಂಬೈನಿಂದ 200 ಕಿಮೀ ದೂರದಲ್ಲಿರುವ ಮಾಲೆಗಾವ್ ನಲ್ಲಿ ಬಾಂಬ್ ಸ್ಪೋಟಿಸಿದ ಪರಿಣಾಮ 6 ಜನರು ಮೃತಪಟ್ಟು ಸುಮಾರು 100 ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.
Discussion about this post