ಕಲ್ಪ ಮೀಡಿಯಾ ಹೌಸ್ | ಅಯೋಧ್ಯೆ |
ಜ.22ರಂದು ಲೋಕಾರ್ಪಣೆಗೊಳ್ಳಲಿರುವ ಕೋಟ್ಯಂತರ ಹಿಂದೂಗಳ ಆರಾಧ್ಯ ದೈವ ರಾಮಮಂದಿರಕ್ಕೆ #RamaMandir ಸರ್ಕಾರ ಕಂಡು ಕೇಳರಿಯದ ರೀತಿಯ ಹೈಟೆಕ್ ಭದ್ರತೆಯನ್ನು #HighTechSecurity ಕಲ್ಪಿಸುತ್ತಿದ್ದು, ರಕ್ಷಣೆಯೇ ಒಂದು ಮೈಲುಗಲ್ಲಾಗಿದೆ.
ಈ ಕುರಿತಂತೆ ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಡಿಜಿ ಪ್ರಶಾಂತ್ ಕುಮಾರ್ ಮಾದ್ಯಮಗಳಿಗೆ ಮಾಹಿತಿ ನೀಡಿದ್ದು, ಬಹುತೇಕ ದೇಶದ ಯಾವುದೇ ದೇವಾಲಯಕ್ಕೆ ಈವರೆಗೂ ಕಲ್ಪಸದೇ ಇರುವ ಅತ್ಯಾಧುನಿಕ ಹೈಟೆಕ್ ಭದ್ರತಾ ವ್ಯವಸ್ಥೆ ಎಂಬ ಖ್ಯಾತಿಗೂ ಸಹ ಪಾತ್ರವಾಗಲಿದೆ.
ದೇಶದ ಮಾತ್ರವಲ್ಲ ವಿಶ್ವದ ಗಮನ ಸೆಳೆದಿರುವ ರಾಮಮಂದಿರ ನಿರ್ಮಾಣದ ಹಿಂದಿನ 500 ವರ್ಷಗಳ ಇತಿಹಾಸದ ಘಟನೆಗಳನ್ನು ಗಮನದಲ್ಲಿ ಇರಿಸಿಕೊಂಡು ಭವಿಷ್ಯದಲ್ಲಿ ಎಂತಹುದೇ ಸಂದರ್ಭ ಎದುರಾದರೂ ಅದನ್ನು ಮೆಟ್ಟಿನಿಲ್ಲುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಉತ್ತರ ಪ್ರದೇಶ ರಾಜಕೀಯ ನಿರ್ಮಾಣ ನಿಗಮ #UPRNN ಭದ್ರತಾ ಸಾಧನಗಳನ್ನು ಸ್ಥಾಪಿಸುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ 90 ಕೋಟಿ ರೂ. ಅನುದಾನ ನೀಡಿದೆ.
ಭದ್ರತಾ ವ್ಯವಸ್ಥೆಯ ಮೂಲಭೂತ ಸೌಕರ್ಯಗಳ ಅಳವಡಿಕೆ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಶೀಘ್ರದಲ್ಲೇ ಅವುಗಳು ಮುಕ್ತಾಯವಾಗಲಿದೆ.
ಇಲ್ಲಿದೆ ಭದ್ರತಾ ವ್ಯವಸ್ಥೆಯ ಪ್ರಮುಖಾಂಶಗಳು:
- ಮಂದಿರದ ಭದ್ರತಾ ವ್ಯವಸ್ಥೆಗಾಗಿ 90 ಕೋಟಿ ರೂ. ಮೌಲ್ಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ(ಹೈಟೆಕ್) ವ್ಯವಸ್ಥೆ
- ದಿನದ 24×7 ಸಮಯವೂ ರಾಮಮಂದಿರ ಹಾಗೂ ಸುತ್ತಲ ಪ್ರದೇಶದಲ್ಲಿ ಹೈಟೆಕ್ ಹದ್ದಿನ ಕಣ್ಣು
- 1000 ವರ್ಷಗಳಿಗೂ ಹೆಚ್ಚು ಕಾಲ ಬಾಳಿಕೆ ಬರುವ ರಾಮ ಜನ್ಮಭೂಮಿ ದೇವಸ್ಥಾನಕ್ಕೆ ದಾಳಿ ನಿರೋಧಕ ಭದ್ರತೆ
- ಯಾವುದೇ ದಾಳಿ ತಡೆಯಲು, ಅತಿಕ್ರಮಣ ವಿಫಲಗೊಳಿಸಲು ಭದ್ರತಾ ತಂಡ ಸಿದ್ದ
- ಯಾವುದೇ ವಾಹನದ ಮೂಲಕ ಹೇಗೇ ದಾಳಿ ನಡೆಸಿದರೂ ಅದನ್ನು ವಿಫಲಗೊಳಿಸಲು ಕ್ರಾಶ್ ರೇಟೆಡ್ ಬೋಲಾರ್ಡ್’ಗಳ ಅಳವಡಿಕೆ
- ಮಂದಿರ ಸಂಪರ್ಕಿಸುವ ಎಲ್ಲ ರಸ್ತೆಗಳ ಕೆಳಗೆ ಸ್ಕ್ಯಾನರ್ #Scanner ಅಳವಡಿಕೆ, ಪ್ರತಿ ವಾಹನದ ಸಂಪೂರ್ಣ ಸ್ಕ್ಯಾನಿಂಗ್
- ಪಟ್ಟಿ ಮಾಡಲಾಗಿರುವ ನಿರ್ಬಂಧಿತ ವಸ್ತುಗಳ ಕುರಿತು ಈ ಹಂತದಲ್ಲೇ ಪತ್ತೆ
- ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬೂಮ್ ಬ್ಯಾರಿಯರ್ಸ್ ಅಳವಡಿಕೆ
- ನಿರಂತರವಾಗಿ ಪ್ರತಿ ಆರು ತಿಂಗಳಿಗೊಮ್ಮೆ ಮಂದಿರದ ಭದ್ರತಾ ವ್ಯವಸ್ಥೆಯ ಇಂಚಿಂಚೂ ಸಂಬಂಧಿಸಿದ ಅಧಿಕಾರಿಗಳಿಂದ ಪರಿಶೀಲನೆ
- ಭವಿಷ್ಯದಲ್ಲಿ ಅಗತ್ಯ ಬಂದಾಗ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಉನ್ನತೀಕರಿಸಲು ಈಗಿನಿಂದಲೇ ಅವಕಾಶ
- 11 ಕೋಟಿ ರೂ. ವೆಚ್ಚದಲ್ಲಿ ಪ್ರತಿ ಆಯಾಮದಲ್ಲೂ ಸಿಸಿಟಿವಿ #CCTV ಕಣ್ಗಾವಲು ಹಾಗೂ ಭದ್ರತಾ ಉಪಕರಣಗಳು
- 8.56 ಕೋಟಿ ರೂ. ವೆಚ್ಚದಲ್ಲಿ ಭದ್ರತಾ ವ್ಯವಸ್ಥೆಯ ಭಾಗವಾಗಿ ಪ್ರವೇಶದ ನಿಯಂತ್ರಣ ವ್ಯವಸ್ಥೆ
- ಕ್ರಾಶ್-ರೇಟೆಡ್ ಬೋಲಾರ್ಡ್’ಗಳು, ಬುಲೆಟ್ ಪ್ರೂಫ್ ವೆಹಿಕಲ್’ಗಳು, ಭದ್ರತಾ ಸಿಬ್ಬಂದಿಗೆ ಬುಲೆಟ್ ಪ್ರೂಫ್ ಜಾಕೆಟ್’ಗಳು, ಆಂಟಿ ಡ್ರೋನ್
- ಸಿಸ್ಟಂ, ನೈಟ್ ವಿಷನ್ ಸಾಧನಗಳು, ಇಂಟಿಗ್ರೇಟೆಡ್ ಕಮಾಂಡ್ #IntegratedCommand ಮತ್ತು ಕಂಟ್ರೋಲ್ ಸಿಸ್ಟಮ್ ಡಿವೈಸ್’ಗಳು ಮತ್ತು ಇತರ ಹಲವು ಉಪಕರಣಗಳ ಅಳವಡಿಕೆ
- ಬೆದರಿಕೆ, ಆಸ್ತಿ ಹಾನಿ, ದೈಹಿಕ ಹಾನಿ, ಹತ್ಯೆ ಸೇರಿದಂತೆ ಯಾವುದೇ ರೀತಿಯ ದಾಳಿಗಳ ತಡೆಗೆ ಅತಿ ಹೆಚ್ಚು ಸುಧಾರಿತ ಭದ್ರತಾ ಸಾಧನವಾದ ಡಿ-ಆರ್ಮರ್ ಡಿಸ್ಟಪ್ಟರ್ #DeArmerDisruptor ಅಳವಡಿಕೆ
- ಆತ್ಮರಕ್ಷಣಾ ಕಾರ್ಯವನ್ನು ಪರಿಣಾಮಕಾರಿಯಾಗಿ ಎದುರಿಸಲು ಅತ್ಯಾಧುನಿಕ ಶಸ್ತ್ರಾಸ್ತ್ರ #weapon
- 1.2 ಕೋಟಿ ರೂ. ಮೌಲ್ಯದಲ್ಲಿ ಭದ್ರತಾ ಸಿಬ್ಬಂದಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ವಾಹನ
- ಬೂಮ್ ಬ್ಯಾರಿಯರ್, ಬೋಲಾರ್ಡ್ ಹಾಗೂ ಟೈರ್ ಕಿಲ್ಲರ್’ಗಳ ಅಳವಡಿಕೆ
- ಬೂಮ್ ಬ್ಯಾರಿಯರ್’ಗೆ ಯಾವುದೇ ವಾಹನ ಡಿಕ್ಕಿ ಹೊಡೆದರೆ, 3 ಸೆಕೆಂಡ್’ನಲ್ಲಿ ಟೈರ್ ಕಿಲ್ಲರ್ ತೆರೆದು ವಾಹನದ ಟೈರ್ ಪಂಕ್ಚರ್ ಆಗುತ್ತದೆ
- ಭದ್ರತಾ ವ್ಯವಸ್ಥೆಯನ್ನು ಉಲ್ಲಂಘಿಸಿ ಯಾವುದೇ ವಾಹನ ನುಗ್ಗಿದರೂ ಸ್ವಯಂಚಾಲಿತವಾಗಿ ಟೈರ್ ಕಿಲ್ಲರ್ 3 ಸೆಕೆಂಡ್’ನಲ್ಲಿ ತೆರೆದು ಪಂಕ್ಚರ್ ಆಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post