ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಹೊಳೆಹೊನ್ನೂರು ಸೇರಿದಂತೆ ತಾಲೂಕಿನಲ್ಲಿಂದು ಒಟ್ಟು 26 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಕಾಗದನಗರದ 28 ವರ್ಷದ ಮಹಿಳೆ, ಹೊಸಸಿದ್ದಾಪುರದ 36 ವರ್ಷದ ಮಹಿಳೆ, ಕಬಳಿಕಟ್ಟೆಯ 49 ವರ್ಷದ ಮಹಿಳೆ, 20 ವರ್ಷ ಹಾಗೂ 50 ವರ್ಷದ ಇಬ್ಬರು ಪುರುಷರು, ಹುತ್ತಾಕಾಲೋನಿಯ 44 ವರ್ಷದ ಪುರುಷ ಮತ್ತು 51 ವರ್ಷದ ಮಹಿಳೆ, ಖಾಜಿ ಮೊಹಲ್ಲಾದ 48 ವರ್ಷದ ಪುರುಷ, ಹೊಸಮನೆಯ 25 ವರ್ಷದ ಪುರುಷ, ಅನ್ವರ್ ಕಾಲೋನಿಯ 29 ವರ್ಷದ ಪುರುಷ, 23ವರ್ಷದ ಮಹಿಳೆ, ಗೋಲ್ಡನ್ ಜ್ಯೂಬಿಲಿ ಬಳಿಯ 55 ವರ್ಷದ ಮಹಿಳೆ, ತಾಲೂಕು ಕಚೇರಿ ರಸ್ತೆಯ 22 ವರ್ಷದ ಮಹಿಳೆ, ಹಾಲಪ್ಪ ಸರ್ಕಲ್ ಬಳಿಯ 37 ವರ್ಷದ ಮಹಿಳೆ, ಉಪ್ಪಾರಬೀಯ 53 ವರ್ಷದ ಮಹಿಳೆ, ಬಂಡಾರಹಳ್ಳಿಯ 49 ವರ್ಷದ ಪುರುಷ, ಹುತ್ತಾ ಕಾಲೋನಿಯ 6 ವರ್ಷದ ಬಾಲಕ, ಹಳದಮ್ಮನ ಬೀದಿಯ 25 ವರ್ಷದ ಪುರುಷ, ಹುಡ್ಕೋ ಕಾಲೋನಿಯ 28 ವರ್ಷದ ಪುರುಷ, ತಾಲೂಕು ಕಚೇರಿ ಹಿಂಭಾಗದ 40 ವರ್ಷದ ಮಹಿಳೆ, ಶಿವಮೊಗ್ಗ ಹೊಸಮನೆಯ 27 ವರ್ಷದ ಮಹಿಳೆ ಇವರಲ್ಲಿ ಪಾಸಿಟಿವ್ ಪತ್ತೆಯಾಗಿದೆ.

ಇನ್ನು, ಹೊಳೆಹೊನ್ನೂರಿನ ಹೊನ್ನೂರಮ್ಮ ಬೀದಿಯಲ್ಲಿ 21 ವರ್ಷದ ಪುರುಷ ಮತ್ತು 35 ವರ್ಷದ ಮಹಿಳೆ, ಕುಂಬಾರ ಬೀದಿಯಲ್ಲಿ 29 ವರ್ಷದ ಪುರುಷನಲ್ಲಿ ಪಾಸಿಟಿವ್ ಪತ್ತೆಯಾಗಿದೆ.
Get In Touch With Us info@kalpa.news Whatsapp: 9481252093

















