ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಅಂಬರೀಶ್ ಅವರ ಸ್ಮಾರಕಕ್ಕೆ ಸರ್ಕಾರವು ಒಂದು ಎಕರೆ 34 ಕುಂಟೆ ಭೂಮಿಯನ್ನು ನೀಡುವ ಮೂಲಕ ಅಂಬರೀಶ್ ಅವರ ಕೊಡುಗೆ ಮತ್ತು ಸೇವೆಗಳನ್ನು ಗೌರವಿಸಿದೆ.
ಸ್ಮಾರಕಕ್ಕೆ ಈ ವರ್ಷ ಮೊದಲ ಕಂತಾಗಿ ಐದು ಕೋಟಿ ರೂಪಾಯಿ ಕೊಡುವುದಾಗಿ ಅಂಬರೀಶ್ ಪ್ರತಿಷ್ಠಾನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಸಿನಿಮಾ ಮತ್ತು ಸಮಾಜಕ್ಕೆ ಅಂಬರೀಶ್ ಅವರ ಕೊಡುಗೆಗಳು ಸದಾ ಜನರ ಮನಸ್ಸಲ್ಲಿ ಉಳಿಯುವಂತಹ ಕೆಲಸವನ್ನು ಈ ಮೂಲಕ ಮಾಡಲಾಗುತ್ತದೆ ಎಂದು ಅಂಬರೀಶ್ ಸ್ಮಾರಕ ನಿರ್ಮಾಣ ಪ್ರತಿಷ್ಠಾನದ ನಿಯೋಗಕ್ಕೆ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಅಂಬರೀಶ್ ಪುತ್ರ ಅಭಿಷೇಕ್ ಪಾಲ್ಗೊಂಡಿದ್ದರು.
Get In Touch With Us info@kalpa.news Whatsapp: 9481252093
Discussion about this post