ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಆಯೋಜನೆಗೊಂಡ ಮೂರನೆಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾದ ಭರ್ಜರಿ ಜಯಗಳಿಸಿದೆ.
ಅವರ ನೆಲದಲ್ಲೇ ಕಾಂಗರೂಗಳನ್ನು ಆಟದಲ್ಲಿ ಬಗ್ಗುಬಡಿದ ಭಾರತೀಯ ಆಟಗಾರರು 137 ರನ್ ಗಳ ಭರ್ಜರಿ ಜಯ ಸಾಧಿಸಿದ್ದಾರೆ.
ನಾಲ್ಕನೆಯ ದಿನಾಂತ್ಯಕ್ಕೆ 8 ವಿಕೆಟ್ ನಷ್ಟದೊಂದಿಗೆ 258 ರನ್ ಗಳನ್ನು ಕಲೆ ಹಾಕಿದ್ದ ಆಸ್ಟ್ರೇಲಿಯಾ ತಂಡಕ್ಕೆ ಪ್ಯಾಟ್ ಕಮಿನ್ಸ್ ಆಸರೆಯಾಗಿದ್ದರು. 63 ರನ್ ಗಳಿಸಿದ ಅವರು ನಿಜಕ್ಕೂ ಆಸಿಸ್ ತಂಡದ ಸೋಲನ್ನು ೫ನೆಯ ದಿನಕ್ಕೆ ಮುಂದೂಡಿದ್ದರು. ಆದರೆ ಇಂದು ಆಸ್ಟ್ರೇಲಿಯಾ ತಂಡ ಕೇವಲ 3 ರನ್ ಸೇರುಸುವಷ್ಟರಲ್ಲಿ ಬಾಕಿ ಉಳಿದಿದ್ದ 2 ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾಗೆ ಶರಣಾಗಿದೆ.
Incredible effort by #TeamIndia to take a 2-1 lead, especially @Jaspritbumrah93 who has played an instrumental role in this win. He has gone from strength to strength in all formats of the game. Definitely one of the best in the world today. #INDvAUS pic.twitter.com/vweoHd0nEE
— Sachin Tendulkar (@sachin_rt) December 30, 2018
Discussion about this post