ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ಸಂಬಂಧಿತ ಜಿಲ್ಲಾಡಳಿತ ದೈನಂದಿನ ಬುಲೆಟಿನ್ ಬಿಡುಗಡೆ ಮಾಡಿದ್ದು, ತಾಲೂಕಿನಲ್ಲಿಂದು ಬರೋಬ್ಬರಿ 47 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆದರೆ, ತಾಲೂಕು ಮಟ್ಟದಲ್ಲಿ ದೊರೆತಿರುವ ಮಾಹಿತಿ ಮಾತ್ರ 29 ಮಂದಿಯದ್ದು.
ನಾಗತಿ ಬೆಳಗಲುವಿನ ಒಂದೇ ಕುಟುಂಬದ 60 ವರ್ಷದ ಮಹಿಳೆ, 10 ವರ್ಷದ ಬಾಲಕ, 14 ವರ್ಷದ ಬಾಲಕಿ ಹಾಗೂ 40 ವರ್ಷದ ಪುರುಷ, ಕೋಡಿಹಳ್ಳಿಯ 58 ವರ್ಷದ ಪುರುಷ, ಅರಬಿಳಚಿ ಕ್ಯಾಂಪ್ 30 ವರ್ಷದ ಪುರುಷ, ಅಂಧರ ಶಾಲೆ ಬಳಿಯ ಒಂದೇ ಕುಟುಂಬದ ಆರು ಮಂದಿ-29, 60 ವರ್ಷದ ಪುರುಷ, 50 ವರ್ಷದ ಮಹಿಳೆ, 13-14 ವರ್ಷದ ಬಾಲಕಿಯರು, 95 ವರ್ಷದ ವೃದ್ಧೆ, ಗುಪ್ತಾ ಸ್ಟೋರ್ ಬಳಿಯ 32 ವರ್ಷದ ಪುರುಷ, ಪೇಪರ್ ಟೌನ್’ನ 45 ವರ್ಷದ ಪುರುಷ, ಹೊಸ ಸಿದ್ದಾಪುರದ ಒಂದೇ ಕುಟುಂಬದ ಮೂರು ಮಂದಿ-60 ವರ್ಷದ ಪುರುಷ, 55, 26 ವರ್ಷದ ಮಹಿಳೆ, ಕಬ್ಬಳಿಕಟ್ಟೆಯ 70 ವರ್ಷದ ವೃದ್ಧ, ಡೈರಿ ಬಳಿಯ ಮಜ್ಜಿಗೇನಹಳ್ಳಿಯ 28 ವರ್ಷದ ಪುರುಷ, ಹೊಳೆಹೊನ್ನೂರು ವಿದ್ಯಾನಗರದ 14 ವರ್ಷದ ಬಾಲಕ, ಚಾಮೇಗೌಡ ಏರಿಯಾ 43 ವರ್ಷದ ಪುರುಷ, ಹೊಸಮನೆ 1ನೆಯ ತಿರುವು 54 ವರ್ಷದ ಮಹಿಳೆ, ಬೋವಿ ಕಾಲೋನಿ 5ನೆಯ ತಿರುವಿನ 24 ವರ್ಷದ ಯುವತಿ, ಹೊಸ ಸಿದ್ದಾಪುರದ 4ನೆಯ ಕ್ರಾಸ್’ನ 35 ವರ್ಷದ ಪುರುಷ, ಹಳೇ ಸಿದ್ದಾಪುರದ ಎಕೆ ಕಾಲೋನಿ 25 ವರ್ಷದ ಯುವಕ, ಕನಕ ನಗರ 1ನೆಯ ತಿರುವು 37 ವರ್ಷದ ಮಹಿಳೆ, ಸೀಗೆಬಾಗಿ 1ನೆಯ ತಿರುವಿನ 34 ವರ್ಷದ ಮಹಿಳೆ, ನಿದಿಗೆ 24 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ.

ಸೋಂಕಿತನ ನಿವಾಸದ ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ನಗರಸಭೆ ಆಯುಕ್ತ ಮನೋಹರ್, ಆರೋಗ್ಯ ಇಲಾಖೆಯ ನೀಲೇಶ್ ರಾಜ್ ಮುಂತಾದವರು ಭೇಟಿ ನೀಡಿದ್ದಾರೆ.
Get In Touch With Us info@kalpa.news Whatsapp: 9481252093















