ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಉಡುಪಿ ಪೇಜಾವರ ಮಠದಿಂದ 5 ಲಕ್ಷ ರೂ.ಗಳ ಕಾಣಿಕೆ ನೀಡಲಾಗಿದೆ.
ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ನ ಮೊದಲ ಸಭೆ ನಡೆದಿದ್ದು, ಇದರಲ್ಲಿ ಪಾಲ್ಗೊಂಡ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು 5 ಲಕ್ಷ ರೂ.ಗಳ ಚೆನ್ ಅನ್ನು ಟ್ರಸ್ಟ್’ಗೆ ಹಸ್ತಾಂತರಿಸಿದರು.
ರಾಮಮಂದಿರ ವ್ಯಾಜ್ಯ ಇತ್ಯರ್ಥಕ್ಕಾಗಿ ದಶಕಗಳ ಕಾಲ ನ್ಯಾಯದ ಕಟಕಟೆಯಲ್ಲಿ ತಪಸ್ಸಿನಂತೆ ವಾದಮಾಡಿ ಗೆಲುವು ತಂದುಕೊಟ್ಟ ನ್ಯಾಯವಾದಿ ಕೆ ಪರಾಸರನ್ ಸಹಿತ ಎಲ್ಲ ವಿಶ್ವಸ್ಥರನ್ನೂ ರೇಷ್ಮೆ ಜರತಾರಿ ಶಾಲು, ಸ್ಮರಣಿಕೆ ಸಹಿತ ಅಭಿನಂದಿಸಲಾಯಿತು. ಪ್ರಥಮ ಸಭೆಯಲ್ಲಿಯೇ ದಕ್ಷಿಣ ಭಾರತೀಯರ ಸತ್ಕಾರಗುಣವನ್ನು ಎತ್ತಿಹಿಡಿದು ಎಲ್ಲರ ಮನಗೆದ್ದಿದ್ದಾರೆ.
ಸಭೆಯಲ್ಲಿ ಮಂದಿರ ನಿರ್ಮಾಣದ ಹೊಣೆಗಾರಿಕೆಯನ್ನು ನೃಪೇಂದ್ರ ಶಮಾ ಅವರಿಗೆ ಸರ್ವಾನುಮತದಿಂದ ವಹಿಸಲಾಯಿತು. ಅಲ್ಲದೇ ಟ್ರಸ್ಟ್’ನ ವಿಶ್ವಸ್ಥರಾಗಿ ಪದ ಸ್ವೀಕರಿಸಿದ ವಿಶ್ವಪ್ರಸನ್ನ ತೀರ್ಥರು ಟ್ರಸ್ಟ್’ನ ಅತಿ ಕಿರಿಯ ಸದಸ್ಯರಾಗಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post