Read - < 1 minute
ಮುಂಬೈ: ಸೆ;13; ಇದೇ 22ರಂದು ಭಾರತ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಕಾನ್ಪುರದಲ್ಲಿ ಆಡುವುದರೊಂದಿಗೆ 500ನೇ ಟೆಸ್ಟ್ ಪಂದ್ಯದ ಸಂಭ್ರಮಾಚರಣೆಯ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಈ ಮೂಲಕ ಇತಿಹಾಸದ ಮೈಲಿಗಲ್ಲನ್ನು ಭಾರತ ಸೃಷ್ಟಿಸಲಿದೆ.
500ನೇ ಸಂಭ್ರಮಾಚರಣೆ ಉತ್ತರಪ್ರದೇಶದ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರಾಜೀವ್ಶುಕ್ಲಾ ನೇತೃತ್ವದಲ್ಲಿ ನಡೆಯಲಿದೆ.
ಈ ಐತಿಹಾಸಿಕ ಕ್ಷಣಗಣನೆಗೆ ಬಿಸಿಸಿಐ ಉನ್ನತಾಧಿಕಾರಿಗಳು ಭಾಗವಹಿಸಲಿದ್ದು, ಐಸಿಸಿ ವಿರುದ್ಧ ಮುನಿಸಿಕೊಂಡಿರುವ ಬಿಸಿಸಿಐ ಯಾವುದೇ ಐಸಿಸಿ ಅಧಿಕಾರಿಗಳನ್ನು ಅಧಿಕೃತವಾಗಿ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ.
ನ್ಯೂಜಿಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳಿದ್ದು, ಇದೇ 22ರಂದು ಮೊದಲ ಪಂದ್ಯ ಕಾನ್ಪುರದಲ್ಲಿ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ 500ನೇ ಸಂಭ್ರಮಾಚರಣೆಯನ್ನು ಆಚರಿಸುವಂತೆ ರಾಜೀವ್ಶುಕ್ಲಾ ಅಧಿಕೃತವಾಗಿ ಘೋಷಿಸಿದ್ದಾರೆ.
Discussion about this post