ಕಲ್ಪ ಮೀಡಿಯಾ ಹೌಸ್ | ಕಾಕಿನಾಡ(ಆಂಧ್ರಪ್ರದೇಶ) |
30-40ನೇ ವಯಸ್ಸಿನಲ್ಲೇ ದೈಹಿಕ ಉತ್ಸಾಹ ಕಳೆದುಕೊಳ್ಳುವ ಈ ಕಾಲದಲ್ಲಿ ಆಂಧ್ರಪ್ರದೇಶದ 52 ವರ್ಷದ ಮಹಿಳೆಯೊಬ್ಬರೂ ಸಮುದ್ರದಲ್ಲಿ 150 ಕಿಲೋ ಮೀಟರ್ ಈಜುವ ಮೂಲಕ ವಿಶ್ವವೇ ನಿಬ್ಬೆರಗಾಗುವಂತಹ ದಾಖಲೆ ಬರೆದಿದ್ದಾರೆ.
ಆಂಧ್ರಪ್ರದೇಶದ #Andrapradesh ಕಾಕಿನಾಡ ಮೂಲದ 52 ವಯಸ್ಸಿನ ಗೋಲಿ ಶ್ಯಾಮಲಾ #GoliShyamala ಎಂಬ ಮಹಿಳೆಯೇ ಈ ಸಾಧಕಿ.
ಬಂಗಾಳ ಕೊಲ್ಲಿ #BayofBengal ಎಂದು ಹೆಸರು ಕೇಳಿದರೇ ಬಹಳಷ್ಟು ಮಂದಿ ಹೆದರುವಂತಹ ಅಲೆಗಳ ಅಬ್ಬರ ಇರುತ್ತದೆ. ಆದರೆ, ಅಂತಹ ಸಮುದ್ರದಲ್ಲಿ ಈಜುವ ಮೂಲಕ ಯುವಕರಿಗೆ ಶ್ಯಾಮಲಾ ಅವರು ಮಾದರಿಯಾಗಿದ್ದಾರೆ.
Also Read>> UPI Effect | ಈ ಪಾನಿಪುರಿ ಮಾರಾಟಗಾರದ ಆದಾಯ ಕಂಡು ಹೌಹಾರಿದ ಆದಾಯ ತೆರಿಗೆ ಇಲಾಖೆ
ವಿಶಾಖಪಟ್ಟಣಂನಿಂದ #Visakhapatnam ಕಾಕಿನಾಡದವರೆಗೂ ಅಂದರೆ ಬರೋಬ್ಬರಿ 150 ಕಿಲೋ ಮೀಟರ್ ಸಮುದ್ರದಲ್ಲಿ ಈಜಿದ್ದಾರೆ.
ಐದು ದಿನಗಳಲ್ಲಿ ಪೂರ್ಣಗೊಂಡ ಈ ಅಸಾಮಾನ್ಯ ಸಾಧನೆಯು ಅನುಭವಿ ಸಹಿಷ್ಣುತೆಯ ಈಜುಗಾರ್ತಿ ಶ್ಯಾಮಲಾ ಅವರ ವೈಯಕ್ತಿಕ ವಿಜಯವಲ್ಲ. ಬದಲಾಗಿ, ಎಲ್ಲ ವಯಸ್ಸಿನ ಜನರಿಗೂ ಮಾದರಿಯಾದ ಸಾಧನೆಯಾಗಿದೆ.
ಕೋರಮಂಡಲ್ ಒಡಿಸ್ಸಿ ಸಾಗರ ಈಜು ಸಂಸ್ಥೆಯ ಆಶ್ರಯದಲ್ಲಿ ಕಳೆದ ತಿಂಗಳು 28ರಂದು ವಿಶಾಖಪಟ್ಟಣಂ ಕರಾವಳಿಯಿಂದ ಕಾಕಿನಾಡ ಕರಾವಳಿವರೆಗೆ ಯಾತ್ರೆ ಆರಂಭಿಸಲಾಗಿತ್ತು.
ಈ ಯಾತ್ರೆಯಲ್ಲಿ ಶಾಮಲಾ ಅವರು 2024ರ ಡಿ.28ರಂದು ತಮ್ಮ ಈಜಿನ ಜರ್ನಿಯನ್ನು ವಿಶಾಖಪಟ್ಟಣಂನ ಆರ್.ಕೆ. ಬೀಚ್’ನಲ್ಲಿ ಆರಂಭಿಸಿದ್ದರು. ಸಮುದ್ರದಲ್ಲಿ ದಿನಕ್ಕೆ 30 ಕಿಮೀನಂತೆ 150 ಕಿಮೀ ದೂರ ಈಜಿ ಜನವರಿ 4ರಂದು ಆಂಧ್ರ ಪ್ರದೇಶದ ಕಾಕಿನಾಡದ ಸೂರ್ಯರಾವ್ ಬೀಚ್ ತಲುಪಿದ್ದಾರೆ. ಅಚ್ಚರಿ ಎಂದರೆ ಶಾಮಲಾ ಅವರು ಸಮುದ್ರದಲ್ಲಿ ಈಜುತ್ತಾ ಹೊಸ ವರ್ಷಾಚರಣೆ ಮಾಡಿದ್ದು ವಿಶೇಷ.
ಇನ್ನೂ ವಿಶೇಷ ಎಂದರೆ, ಭಾರೀ ಅಲೆಗಳ ಅಬ್ಬರ ಇರುವ ಅರಬ್ಬೀ ಸಮುದ್ರದಲ್ಲಿ ಈಜುವುದು ಸಾಮಾನ್ಯದ ಸಾಧನೆಯಲ್ಲ. ಆದರೆ, ಬೃಹತ್ ಅಲೆಗಳಿಗೆ ಎದುರಾಗಿ, ಯಾವುದನ್ನೂ ಲೆಕ್ಕಿಸದೇ, ಪಟ್ಟುಬಿಡದೇ ತಮ್ಮ ಗುರಿಯೆಡೆಗೆ ಮಾತ್ರ ಈಜಿ ಗಮ್ಯವನ್ನು ತಲುಪಿದ ಈ ಮಹಿಳೆಯ ಸಾಧನೆ ಅಸಾಮಾನ್ಯವಾದುದು.
ಅಲ್ಲದೇ, ಶ್ಯಾಮಲಾ ಅವರೊಂದಿಗೆ ವೈದ್ಯಕೀಯ ಸಿಬ್ಬಂದಿ ಮತ್ತು ಸ್ಕೂಬಾ ಡೈವರ್’ಗಳು ಸೇರಿದಂತೆ 14 ಸಿಬ್ಬಂದಿಗಳ ತಂಡವು ಪ್ರಯಾಸಕರವಾದ ಈ ಈಜು ಸಾಹಸದೊಂದಿಗೆ ಸಾಗಿದ್ದರು.
ಇನ್ನು ತಮ್ಮ ಹುಟ್ಟೂರು ಕಾಕಿನಾಡಕ್ಕೆ ಈಜಿನ ಮೂಲಕ ಬಂದ ಶಾಮಲಾ ಅವರನ್ನು ಸ್ಥಳೀಯರು ಅದ್ಧೂರಿಯಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾಕಿನಾಡ ಸೀಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಿಇಒ ಮುರಳೀಧರ್, ಸ್ಥಳೀಯ ಶಾಸಕ ಚಿನ್ನರಾಜಪ್ಪ, ಕಾಕಿನಾಡ ಆಯುಕ್ತೆ ಭಾವನಾ ಮತ್ತಿತರರು ಉಪಸ್ಥಿತರಿದ್ದು ಶಾಮಲಾ ಅವರಿಗೆ ಅಭಿನಂದನೆ ಸಲ್ಲಿಸಿದರು.
ಇನ್ನು ಶಾಮಲಾ ಅವರ ಈಜಿನ ಸಾಹಸಕ್ಕೆ ಸ್ವತಃ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಕೂಡ ಫಿದಾ ಆಗಿದ್ದಾರೆ.
ಈ ಕುರಿತಂತೆ ವಿಡಿಯೋ ಸಹಿತ ಟ್ವೀಟ್ ಮಾಡಿರುವ ಅವರು, `52ನೇ ವಯಸ್ಸಿನಲ್ಲಿ, ಗೋಲಿ ಶ್ಯಾಮಲಾ ಅವರು ವಿಶಾಖಪಟ್ಟಣಂನಿಂದ ಕಾಕಿನಾಡಕ್ಕೆ 150 ಕಿಮೀ ಈಜಿರುವುದು ಅಸಾಧಾರಣ ಧೈರ್ಯ ಮತ್ತು ದೃಢಸಂಕಲ್ಪದ ಕಥೆಯಾಗಿದೆ. ಆರು ದಿನಗಳಲ್ಲಿ, ಆಂಧ್ರ ಪ್ರದೇಶದ ಈ ಮಗಳು ತನ್ನ ಪ್ರಯಾಣದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಅಂತಿಮವಾಗಿ ಧೈರ್ಯದಿಂದ ಜಯಗಳಿಸಿದ್ದಾರೆ. ಅವರ ಪ್ರಯಾಣವು ನಾರಿ ಶಕ್ತಿಯ ಉಜ್ವಲ ಉದಾಹರಣೆಯಷ್ಟೇ ಅಲ್ಲ, ಮಾನವ ಚೈತನ್ಯದ ಶಕ್ತಿಯ ಪ್ರತಿಬಿಂಬವಾಗಿದೆ. ತಮ್ಮ ಈ ಸಾಹಸದ ಮೂಲಕ ಅಮೂಲ್ಯ ಸಮುದ್ರ ಜೀವಿಗಳನ್ನು ರಕ್ಷಿಸುವ ಅಗತ್ಯವನ್ನು ಅವರು ಒತ್ತಿಹೇಳಿದ್ದಾರೆ. ಅವರ ಶ್ಲಾಘನೀಯ ಸಾಧನೆಯ ಮೂಲಕ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ್ದಾರೆ. ಅಭಿನಂದನೆಗಳು ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post