ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ಪಾನಿಪುರಿ #Panipuri ಮಾರಾಟಗಾರನೊಬ್ಬನ ವಾರ್ಷಿಕ ವಹಿವಾಟು ಕಂಡು ಆದಾಯ ತೆರಿಗೆ ಇಲಾಖೆ #IncomeTaxDepartment ಅಧಿಕಾರಿಗಳು ಹೌಹಾರಿದ್ದು, ಆತನಿಗೆ ತೆರಿಗೆ ನೋಟೀಸ್ ನೀಡಿರುವ ಘಟನೆ ತಮಿಳುನಾಡಿನ #TamilNadu ಚೆನ್ನೈನಲ್ಲಿ ನಡೆದಿದೆ.
ತಮಿಳುನಾಡಿನಲ್ಲಿ ಪಾನಿಪುರಿ ಮಾರಾಟಗಾರನ ವಾರ್ಷಿಕ ವಹಿವಾಟು 40 ಲಕ್ಷ ರೂ. ದಾಟಿದ ಕಾರಣಕ್ಕೇ ಕೇಂದ್ರ ಆದಾಯ ತೆರಿಗೆ ಇಲಾಖೆ ತೆರಿಗೆ ನೋಟಿಸ್ ಜಾರಿ ಮಾಡಿದೆ.
Also Read>> ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಆತ್ಮಹತ್ಯೆ ಭಾಗ್ಯವನ್ನೇ ನೀಡುತ್ತಿದೆ: ಬಿ.ವೈ. ವಿಜಯೇಂದ್ರ
ನೋಟಿಸ್ ನಲ್ಲಿ ಮಾರಾಟಗಾರನು ಜಿಎಸ್’ಟಿ ಕಾಯ್ದೆ #GSTAct ಅಡಿಯಲ್ಲಿ ನಮೂದಿಸಲಾದ ಮಿತಿಯನ್ನು ಮೀರಿದ ಸರಕು ಮತ್ತು ಸೇವೆಗಳ ಹೊರಗಿನ ಪೂರೈಕೆಗಾಗಿ ಪಾವತಿಗಳನ್ನು ಸ್ವೀಕರಿಸಿದ್ದಾನೆ ಎನ್ನುವ ಕಾರಣಕ್ಕೆ ಆತನ ವಹಿವಾಟು ಮೇಲೆ ಜಿಎಸ್’ಟಿ ಹಾಕಲಾಗಿದೆ ಎಂದು ವರದಿಯಾಗಿದೆ.
ವಾರ್ಷಿಕವಾಗಿ ಲಕ್ಷಗಟ್ಟಲೆ ವಹಿವಾಟು ನಡೆಸಿರುವ ಪಾನಿಪುರಿ ಭಯ್ಯಾ…ಯಾವುದೇ ಜಿಎಸ್’ಟಿ ಪಾವತಿಸಿಲ್ಲ, ಜಿಎಸ್’ಟಿ #GST ವ್ಯಾಪ್ತಿಗೂ ತನ್ನ ವ್ಯಾಪಾರವನ್ನು ಒಳಪಡಿಸಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಈ ಪಾನಿಪುರಿ ಮಾರಾಟಗಾರನ ವಿರುದ್ಧ ತಮಿಳುನಾಡು ಸರ್ಕಾರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ #GoodsandServicesTaxAct ಮತ್ತು ಕೇಂದ್ರ ಜಿಎಸ್’ಟಿ ಕಾಯ್ದೆಯ ಸೆಕ್ಷನ್ 70ರ ಅಡಿಯಲ್ಲಿ ನೋಟೀಸ್ ಜಾರಿಗೊಳಿಸಲಾಗಿದೆ.
ಕಳೆದ ಮೂರು ವರ್ಷಗಳಿಗೆ ಸಂಬಂಧಿಸಿದಂತೆ ನೋಟೀಸ್ ಜಾರಿಗೊಳಿಸಲಾಗಿದ್ದು, ಪ್ರಮುಖವಾಗಿ 2023-24ಕ್ಕೆ ಸಂಬಂಧಿಸಿದಂತೆ ವಹಿವಾಟಿನ ಕುರಿತಾಗಿ ಪ್ರತಿಕ್ರಿಯೆ ಕೇಳಲಾಗಿದೆ.ಡಿಜಿಟಲ್ ಪಾವತಿ ಡೇಟಾವನ್ನು ನಿಯಂತ್ರಿಸುವುದು ಹೆಚ್ಚಿನ ವ್ಯವಹಾರಗಳನ್ನು ತೆರಿಗೆ ನಿವ್ವಳ ಅಡಿಯಲ್ಲಿ ತರಲು ಅಂತಹ ಒಂದು ಕ್ರಮವಾಗಿದೆ. ಈಗ ಸದ್ಯ ಈತನಿಗೆ ನೀಡಿರುವ ಜಿಎಸ್’ಟಿ ನೋಟಿಸ್ ಕೇವಲ ಸಮನ್ಸ್ ಆಗಿದೆಯೇ ಹೊರತು ಬೇಡಿಕೆಯ ಆದೇಶವಲ್ಲ. ಈ ಬಗ್ಗೆ ಮಾರಾಟಗಾರನ ಅಹವಾಲನ್ನು ಆಲಿಸಲಾಗುವುದು ಎಂದು ಮೂಲಗಳು ಹೇಳಿವೆ.
ಈ ಪಾನಿಪುರಿ ಮಾರಾಟಗಾರರ ಗಣನೀಯ ವಹಿವಾಟು ಕಂಡು ಸಾಮಾಜಿಕ ಜಾಲತಾಣದಲ್ಲಿ ಜನರು ಅಚ್ಚರಿಪಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post