ವಾದ್ರಾ: ಮಹಾರಾಷ್ಟ್ರದ ಪುಲ್ಗಾಂವ್ ಸೇನಾ ಡಿಪೋದಲ್ಲಿ ಇಂದು ಮುಂಜಾನೆ ಸಂಭವಿಸಿದ ಭಾರೀ ಸ್ಫೋಟದಲ್ಲಿ 6 ಮಂದಿ ಬಲಿಯಾಗಿದ್ದು, 10ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಇಲ್ಲಿನ ಸೇನಾ ಡಿಪೋದಲ್ಲಿರುವ ಶಸ್ತ್ರಾಸ್ತ್ರ ನಿರ್ಮಾಣ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದ್ದು, ಮೃತರಲ್ಲಿ ಓರ್ವ ಅಧಿಕಾರಿ ಹಾಗೂ ಐವರು ಕಾರ್ಮಿಕರು ಸೇರಿದ್ದಾರೆ. ಸ್ಫೋಟದ ಭೀಕರತೆಗೆ ಸ್ಥಳದಲ್ಲೇ ನಾಲ್ವರು ಬಲಿಯಾದರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವರದಿಗಳ ಮಾಹಿತಿಯಮತೆ 23 ಎಂಎಂ ಫಿರಂಗಿಯನ್ನು ವಿಲೇವಾರಿಗಾಗಿ ಕೆಳಗಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಫಿರಂಗಿಯನ್ನು ನಾಗ್ಪುರದಿಂದ 80 ಕಿಮೀ ದೂರದ ಪುಲ್ ಗಾಂವ್ ಸೇನಾ ಡಿಪೋದಿಂದ ವಿಶಾಲ ಮೈದಾನಕ್ಕೆ ಕೊಂಡೊಯ್ಯಲಾಗಿತ್ತು. ಈ ವೇಳೆ ಅವಧಿ ಮುಗಿದ ಶೆಲ್ ಸ್ಛೋಟಗೊಂಡಿದೆ ಎಂದು ಹೇಳಲಾಗಿದೆ.
Hero Motocorp Launches Glamour x With Integrated-ABS
Kalpa Media House | Bengaluru | Hero MotoCorp, the world's largest manufacturer of motorcycles and scooters, today announced the launch...
Read moreDetails






