ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಾದ್ಯಂತ ಇಂದು 7 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.
ಕೂಡ್ಲಿಗೆರೆಯ 31 ವರ್ಷದ ಪುರುಷ, ಗಾಂಧಿನಗರದ 43 ವರ್ಷದ ಪುರುಷ, ಹಳೇ ಬುಳ್ಳಾಪುರ 34 ವರ್ಷದ ಪುರುಷ, ಮಾಚೇನಹಳ್ಳಿಯ 35 ವರ್ಷದ ಪುರುಷ, ಹೊಸಮನೆ ವಿಜಯನಗರ 30 ವರ್ಷದ ಪುರುಷ, ಹುತ್ತಾದ ಅರಣ್ಯ ವಸತಿಗೃಹದ 36 ವರ್ಷದ ಪುರುಷ, ಕಲ್ಲಿಹಾಳ್’ನ 30 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಸೋಂಕಿತರ ನಿವಾಸದ ಸ್ಥಳಗಳಿಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ನಗರಸಭೆ ಆಯುಕ್ತ ಮನೋಹರ್, ಆರೋಗ್ಯ ಹಿರಿಯ ನಿರೀಕ್ಷಕ ನೀಲೇಶ್ ರಾಜ್ ಮುಂತಾದವರು ಭೇಟಿ ನೀಡಿದ್ದಾರೆ.
Get In Touch With Us info@kalpa.news Whatsapp: 9481252093















