ಚಳ್ಳಕೆರೆ: ಪಾವಗಡ ರಸ್ತೆಯಲ್ಲಿರುವ ಪರಿಶಿಷ್ಟ ವರ್ಗಗಳ ಮುರಾರ್ಜಿ ವಸತಿ ಶಾಲೆಗೆ ಕಳೆದ ಮಾರ್ಚ್, ಎಪ್ರಿಲ್ ತಿಂಗಳಲ್ಲಿ ನಡೆಸಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.97.7ರಷ್ಟು ಫಲಿತಾಂಶ ಲಭ್ಯವಾಗಿದೆ.
ಪರೀಕ್ಷೆ ಬರೆದ ವಿದ್ಯಾರ್ಥಿಗಳು ಒಟ್ಟು 44 ವಿದ್ಯಾರ್ಥಿಗಳು ಒಟ್ಟು 44 ಉತ್ತೀರ್ಣರಾಗಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 6, ಪ್ರಥಮ ದರ್ಜೆ 32 ಹಾಗೂ ದ್ವಿತೀಯ ದರ್ಜೆಯಲ್ಲಿ 5 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಇವರಲ್ಲಿ ಎಚ್. ಅಮೃತ(527)91.52%, ಆರ್. ವಿದ್ಯಾಶ್ರೀ(564)90.24%, ಎಂ. ಮನುಶ್ರೀ(555)88.80%, ಎಸ್. ನವೀನ್ (554)88.64%, ಲಕ್ಷ್ಮೀ(532)85.12%, ಎಂ. ತೇಜಸ್ವಿನಿ (543)86.88 ರಷ್ಟು ಹೆಚ್ಚಿನ ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಮುರಾರ್ಜಿ ವಸತಿ ಶಾಲೆಯ ಪ್ರಾಶುಂಪಾಲ, ಶಾಲಾ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.
(ವರದಿ: ಸುರೇಶ್ ಬೆಳಗೆರೆ)
Discussion about this post