ಕಲ್ಪ ಮೀಡಿಯಾ ಹೌಸ್ | ಪಂಜಾಬ್ |
ಪಂಜಾಬ್’ನ ತರ್ನ್ ತರಣ್ ಜಿಲ್ಲೆಯಲ್ಲಿರುವ ಭಾರತ ಹಾಗೂ ಪಾಕಿಸ್ಥಾನದ ಗಡಿ ಪ್ರದೇಶದಲ್ಲಿ 5 ಕೆಜಿ ಹೆರಾಯಿನ್ ಹೊತ್ತಿದ್ದ ಬೃಹತ್ ಗಾತ್ರದ ಡ್ರೋಣ್’ವೊಂದನ್ನು Drone ಭದ್ರತಾ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.
ಪಂಜಾಬ್ ಪೊಲೀಸರು ಮತ್ತು ಗಡಿ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಆರು ರೋಟರ್’ಗಳನ್ನು ಹೊಂದಿರುವ ಮಾನವರಹಿತ ವೈಮಾನಿಕ ವಾಹನ ಹೆಕ್ಸಾಕಾಪ್ಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

Also read: ಮುಂದಿನ ಮಾರ್ಚ್ ಒಳಗೆ ಎಲ್ಲ ವಿವಿಗಳು ಕನಿಷ್ಠ ಒಂದು ಆನ್’ಲೈನ್ ಕೋರ್ಸ್ ಆರಂಭಿಸಿ
ನ.28 ರಂದು ಅಮೃತಸರ ಮತ್ತು ತರ್ನ್ ತರಣ್ ಜಿಲ್ಲೆಗಳಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಎರಡು ಪಾಕಿಸ್ತಾನಿ ಡ್ರೋಣ್’ಗಳನ್ನು ಬಿಎಸ್’ಎಫ್ ಯೋಧರು ಹೊಡೆದುರುಳಿಸಿದ್ದಾರೆ.
ಎರಡು ಹೆಕ್ಸಾಕಾಪ್ಟರ್’ಗಳು ಸುಮಾರು 10 ಕೆಜಿ ಹೆರಾಯಿನ್ ಅನ್ನು ಸಾಗಿಸುತ್ತಿದ್ದ ವೇಳೆ ಬಿಎಸ್’ಎಫ್ ಪಡೆಗಳು ವಶಪಡಿಸಿಕೊಂಡಿವೆ.












Discussion about this post