ಕಲ್ಪ ಮೀಡಿಯಾ ಹೌಸ್ | ಹಾವೇರಿ |
ಕನ್ನಡ ಸಾಹಿತ್ಯ ಪರಿಷತ್ತು ಹಾವೇರಿಯಲ್ಲಿ ನಡೆಯುತ್ತಿರುವ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನಕದಾಸ, ಸಂತ ಶಿಶುನಾಳ ಶರೀಫ ಮತ್ತು ಕ್ರಾಂತಿಕವಿ ಸರ್ವಜ್ಞರ ಕೀರ್ತನೆ, ತತ್ವಪದ, ತ್ರಿಪದಿಗಳ ಗಾಯನ ಹಾಗೂ ನೃತ್ಯದ ವಿಶೇಷ ಕಾರ್ಯಕ್ರಮ ಸಾಮರಸ್ಯದ ಭಾವ ಕನ್ನಡದ ಜೀವ ಎನ್ನುವ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಡಿ.17 ಮತ್ತು 18ರಂದು ಧ್ವನಿ ಪರೀಕ್ಷೆ ಮತ್ತು ನೃತ್ಯ ಪರೀಕ್ಷೆಯನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ Nadoja Dr. Mahesh Joshi ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತನ್ನು ಜನ ಸಾಮಾನ್ಯರ ಪರಿಷತ್ತನ್ನಾಗಿಸುವ ಮಹತ್ವಾಕಾಂಕ್ಷೆಯಲ್ಲಿ ಬೆಳಕಿಗೆ ಬಾರದ, ಕ್ಯಾಮರಾವನ್ನೇ ಎಂದೂ ಎದುರಿಸಿದ, ಅವಕಾಶವಂಚಿತರಾದ ಪ್ರತಿಭಾವಂತ ಗಾಯಕ ಮತ್ತು ನೃತ್ಯ ತಂಡಗಳಿಗೆ ಅವಕಾಶ ನೀಡುವ ಹಿನ್ನೆಲೆಯಲ್ಲಿ ಹಾವೇರಿಯ ಹೈಟೆಕ್ ಕಲಾಭವನ, ಗೂಗಿಕಟ್ಟಿ ನಗರಸಭೆ ಮಳಿಗೆ, ಜೆ.ಪಿ. ಸರ್ಕಲ್ ಹತ್ತಿರ, ವಿನಾಯಕ ಹೊಟೇಲ್ ಹಿಂಭಾಗ, ಇಲ್ಲಿ ಧ್ವನಿ ಪರೀಕ್ಷೆಗೆ ಡಿ.17ರ ಶನಿವಾರ ಮತ್ತು ನೃತ್ಯ ಪರೀಕ್ಷೆಗೆ ಡಿ.18ರ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ನೊಂದಣಿ ಪ್ರಾರಂಭವಾಗಲಿದೆ. ನೊಂದಾಯಿತ ತಂಡಗಳಿಗೆ ಮತ್ತು ವ್ಯಕ್ತಿಗಳಿಗೆ ನೊಂದಣಿ ಸಂಖ್ಯೆಗೆ ಅನುಗುಣವಾಗಿ ಧ್ವನಿ ಮತ್ತು ನೃತ್ಯ ಪರೀಕ್ಷೆಯಲ್ಲಿ ಭಾಗವಹಿಸುವ ಅವಕಾಶ ದೊರಕಲಿದೆ.
ಸೂಚನೆಗಳು :
- ನೊಂದಣಿಯು ಡಿ.17 ಮತ್ತು 18ರಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಲಿದ್ದು, ನೊಂದಣಿ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಪ್ರತಿಯೊಬ್ಬರಿಗೂ ನೋಂದಣಿ ಕ್ರಮಸಂಖ್ಯೆ ನೀಡಲಾಗುವುದು.
- ಹಾಡು ಮತ್ತು ನೃತ್ಯದ ಆಯ್ಕೆಯನ್ನು ಹಾಡುಗಾರರು ಮತ್ತು ತಂಡಗಳೇ ಮಾಡಿ ಕೊಳ್ಳಬೇಕು. ಇವು ಕನಕದಾಸ, ಶರೀಫ ಮತ್ತು ಸರ್ವಜ್ಞರ ರಚನೆಗಳೇ ಆಗಿರಬೇಕು. ಬೇರೆ ಯಾರದೇ, ಯಾವುದೇ ರಚನೆಗಳಿಗೆ ಅವಕಾಶ ಇರುವುದಿಲ್ಲ.
- ತಮ್ಮ ಸರದಿ ಬಂದ ಕೂಡಲೇ ಪ್ರದರ್ಶನ ನೀಡಲು ಸಿದ್ಧರಿರಬೇಕು, ಯಾವುದೇ ಪೂರ್ವ ತರಬೇತಿಗೆ ಅವಕಾಶ ಇಲ್ಲ.
- ಹಾಡುಗಾರರು ಸಂಗೀತ ವಾದ್ಯಗಳನ್ನು ತರುವ ಅವಶ್ಯಕತೆ ಇರುವುದಿಲ್ಲ. ವಾದ್ಯಗಳನ್ನು ಸಂಘಟಕರೇ ವ್ಯವಸ್ಥೆ ಮಾಡುತ್ತಾರೆ. ಜನಪದ ಗಾಯಕರು ಯಾವುದಾದರೂ ವಿಶಿಷ್ಟ ವಾದ್ಯಗಳನ್ನು ಬಳಸುವುದಾದರೆ, ಅವನ್ನು ಮಾತ್ರ ತರಬೇಕು.
- ನೃತ್ಯ ತಂಡದವರು ಅಗತ್ಯವಾದ ಹಾಡುಗಳನ್ನು ಸಿಡಿ ಅಥವಾ ಪೆನ್ ಡ್ರೈವ್ ಮೂಲಕ ತರಬೇಕು.
- ತೀರ್ಪುಗಾರರ ತೀರ್ಮಾನಗಳೇ ಅಂತಿಮವಾಗಿದ್ದು ಈ ಕುರಿತು ಯಾವುದೇ ಚರ್ಚೆಗೆ ಅವಕಾಶವಿರುವುದಿಲ್ಲ.
- ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆಯಲಿದ್ದು ಹೊಸ ಪ್ರತಿಭಾವಂತರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು. ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು.
- ಆಯ್ಕೆ ಪ್ರಕ್ರಿಯೆಗೆ ಬಂದು ಹೋಗಲು ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ
- ಊಟ, ವಸತಿ ಇನ್ನಿತರ ಯಾವುದೇ ಸೌಲಭ್ಯವನ್ನು ಕಲ್ಪಿಸಲಾಗುವುದಿಲ್ಲ.
- ಸಮ್ಮೇಳನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಯ್ಕೆಯಾದವರಿಗೆ ಸಮ್ಮೇಳನದ ವೇದಿಕೆಯಲ್ಲಿ ಪ್ರದರ್ಶನ ನೀಡುವ ಸುವರ್ಣ ಅವಕಾಶ ದೊರಕಲಿದ್ದು, ಸಮ್ಮೇಳನದ ನಿಯಮಗಳಿಗೆ ಅನುಗುಣವಾಗಿ ಭತ್ಯೆ, ವಸತಿ, ಇತರ ಸೌಲಭ್ಯಗಳು ದೊರಕಲಿವೆ.
ಹೆಚ್ಚಿನ ವಿವರಗಳಿಗೆ ಈ ಕೆಳಗಿನವರನ್ನು ಸಂಪರ್ಕಿಸಿ:
ಲಿಂಗಯ್ಯ ಹಿರೇಮಠ, ಜಿಲ್ಲಾ ಕಸಾಪ ಅಧ್ಯಕ್ಷರು – 9902768704, ಮುಚ್ಚಂಡಿ ಕೆ.ಎಸ್. – 9448873992, ಗೂಳಪ್ಪ ಅರಳಿಕಟ್ಟಿ, ಹಾವೇರಿ – 9341443662, ಪರಮೇಶ್, ಬೆಂಗಳೂರು – 9845701411
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post