ಕಲ್ಪ ಮೀಡಿಯಾ ಹೌಸ್ | ರಿಪ್ಪನ್‌ಪೇಟೆ |
ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ರೈತನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹರತಾಳು ಗ್ರಾಪಂ ವ್ಯಾಪ್ತಿಯ ನಂಜವಳ್ಳಿ ಗ್ರಾಮದ ರೈತ ಶೇಷಗಿರಿ (45) ಮೃತ ದುರ್ದೈವಿಯಾಗಿದ್ದು ಬೆಳಗ್ಗೆ ಹೂ ಕೀಳಲು ಹೋದಾಗ ಈ ಘಟನೆ ನಡೆದಿದೆ.
ಮೂಲತಃ ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಗ್ರಾಮದ ಒಡ್ಡಿನಬೈಲು ನಿವಾಸಿಯಾದ ಈತ ಈಚೆಗೆ ಜಮೀನು ಖರೀದಿಸಿ ನಂಜವಳ್ಳಿಯಲ್ಲಿ ವಾಸಿಸುತ್ತಿದ್ದರು.
ಇಂದು ಬೆಳಗ್ಗೆ ಮನೆಯ ಬಳಿ ಶೇಷಗಿರಿಯವರ ಪತ್ನಿ ಹೂ ಕೀಳಲು ಹೋದಾಗ ಅವರಿಗೆ ವಿದ್ಯುತ್ ಸ್ಪರ್ಶಿಸಿದೆ ಪತ್ನಿ ಜೋರಾಗಿ ಕೂಗಿದ್ದಾರೆ ಕೂಡಲೇ ಅವರನ್ನು ರಕ್ಷಿಸಲು ಹೋದ ಶೇಷಗಿರಿ ರವರು ಪಾದರಕ್ಷೆ ಧರಿಸದೆ ವಿದ್ಯುತ್ ತಂತಿಯನ್ನು ತುಳಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿದ್ಯುತ್ ತಂತಿ ತುಂಡಾಗಿ ಐಬಿಎಕ್ಸ್ ತಂತಿ ಬೇಲಿ ಮೇಲೆ ಬಿದ್ದಿರುವ ಬಗ್ಗೆ ಮೃತರು ವಿದ್ಯುತ್ ಇಲಾಖೆಗೆ ಮೂರು ಬಾರಿ ದೂರು ಸಲ್ಲಿಸಿದ್ದರು ಎನ್ನಲಾಗುತ್ತಿದ್ದು ಇಲಾಖೆಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಸೈಕ್ಲೋನ್ ಎಫೆಕ್ಟ್ ನಿಂದ ಹೊಸನಗರ ತಾಲೂಕಿನಾದ್ಯಂತ ನಿನ್ನೆ ಮಧ್ಯಾಹ್ನದಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಹಲವೆಡೆ ಮರಗಳು ಧರಾಶಾಹಿಯಾಗುತ್ತಿದ್ದು ವಿದ್ಯುತ್ ಕಂಬಗಳು ನೆಲಕ್ಕುರುಳುತ್ತಿವೆ. ವಿದ್ಯುತ್ ಸರಬರಾಜುವಿನಲ್ಲು ವ್ಯತ್ಯಯವಾಗುತ್ತಿದೆ.
ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post