ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರದ ಅಂಬೇಡ್ಕರ್ ಭವನದಲ್ಲಿ, ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಬೀದಿಬದಿ ವ್ಯಾಪಾರಸ್ಥರ ಕುಟುಂಬ ಹಬ್ಬ ಸ್ವ ನಿಧಿ ಮಹೋತ್ಸವಕ್ಕೆ ಮೇಯರ್ ಎನ್. ಶಿವಕುಮಾರ್, ಹಗ್ಗ ಜಗ್ಗುವುದರ ಮೂಲಕ ಚಾಲನೆ ನೀಡಿದರೆ, ಉಪ ಮೇಯರ್ ಲಕ್ಷ್ಮೀಶಂಕರ್ ನಾಯ್ಕ್, ರಂಗೋಲಿ ಹಾಕುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ದಿ ಇಲಾಖೆಯ ಅಧಿಕಾರಿ ಹೆಚ್.ಎಂ. ಸುರೇಶ್, ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ, ಪಟ್ಟಣ ಮಾರಾಟ ಸಮಿತಿ ಸದಸ್ಯ ಚನ್ನವೀರಪ್ಪ ಗಾಮನಗಟ್ಟಿ, ಚಂದ್ರಕಲಾ, ಚಂದ್ರಮ್ಮ, ನಾರಾಯಣ, ವಿನಾಯಕ, ಡೇ-ನಲ್ಮ್ ಅಧಿಕಾರಿ, ಅನುಪಮ, ಲೋಕೆಶಪ್ಪ, ರತ್ನಾಕರ್, ಗೀತಾ, ರೇಣುಕಾ, ದೇವೇಂದ್ರ ನಾಯ್ಕ್, ಹಾಗೂ ಸಿಬ್ಬಂಧಿ ವರ್ಗದವರು ಮತ್ತು ಬೀದಿಬದಿ ವ್ಯಾಪಾರಸ್ಥರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
Also read: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು: ತಪ್ಪಿದ ಭಾರೀ ಅನಾಹುತ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post