ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರಾಗಿ ನೇಮಕಗೊಂಡಿರುವ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ.ಎಸ್. ಸೆಲ್ವಕುಮಾರ್ ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಾರಾಂಶ ಪರಿಷ್ಕರಣೆ ಕುರಿತು ಸಭೆ ನಡೆಸಿದರು.
ವೀಕ್ಷಕರಾಗಿ ನೇಮಕಗೊಂಡ ನಂತರದ ಮೂರನೆಯ ಭೇಟಿಯ ಈ ಸಭೆಯಲ್ಲಿ ರಾಜಕೀಯ ಪಕ್ಷದ ಮುಖಂಡರು ಮತ್ತು ಅಧಿಕಾರಿಗಳೊಂದಿಗೆ ಮತದಾರರ ಪಟ್ಟಿಯ ವಿಶೇಷ ಸಾರಾಂಶ ಪರಿಷ್ಕರಣೆ ಕುರಿತು ಚರ್ಚಿಸಿ, ಪ್ರತಿ ಮತಗಟ್ಟೆಯ ಮತಗಟ್ಟೆ ಅಧಿಕಾರಿಗಳು ವಿಚಕ್ಷಣೆಯಿಂದ ಕಾರ್ಯ ನಿರ್ವಹಿಸಬೇಕು. ಪಕ್ಷಗಳ ಬೂತ್ ಮಟ್ಟದ ಏಜೆಂಟರ್‌ಗಳು ಸಹ ತಮ್ಮ ವ್ಯಾಪ್ತಿಯಲ್ಲಿ ಹೊಸ ಸೇರ್ಪಡೆ, ಮರಣ ಇತರೆ ಕಾರಣಗಳಿಗೆ ಹೆಸರನ್ನು ಪಟ್ಟಿಯಿಂದ ತೆಗೆಸುವ ಬಗ್ಗೆ ಮಾಹಿತಿಯನ್ನು ನೀಡಬೇಕು. ಬಿಎಲ್‌ಓ ಗಳು ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವರು ಎಂದರು.

ನಮೂನೆ 7 ರಲ್ಲಿ 1,43,575 ಅರ್ಜಿಗಳು ಬಂದಿದ್ದು 3341 ತಿರಸ್ಕೃತವಾಗಿ 140227 ಅರ್ಜಿಗಳು ಅನುಮೋದನೆಯಾಗಿವೆ. ನಮೂನೆ 8 ರಲ್ಲಿ ಹೆಸರು, ಸಂಬAಧ ಬದಲಾವಣೆ, ತಪ್ಪು ವಯಸ್ಸು ತಿದ್ದುಪಡಿ ಇತರೆ ಒಟ್ಟು 91,434 ಅರ್ಜಿಗಳು ಬಂದಿದ್ದು, 4259 ತಿರಸ್ಕೃತವಾಗಿ 87,173 ಅರ್ಜಿಗಳನ್ನು ಅಪ್‌ಡೇಟ್ ಮಾಡಲಾಗಿದೆ.

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮಾತನಾಡಿ, ಮತದಾರರ ಪರಿಷ್ಕರಣೆ ಸಂಬAಧ ಇರುವ ದೂರು ಉಸ್ತುವಾರಿ ವ್ಯವಸ್ಥೆ(ಕಂಪ್ಲೆÊAಟ್ ಮಾನಿಟರಿಂಗ್ ಸಿಸ್ಟಂ)ಯಡಿ ಇದುವರೆಗೆ 533 ದೂರುಗಳನ್ನು ಸ್ವೀಕರಿಸಿ ಉತ್ತರಿಸಲಾಗಿದೆ. ಇದುವರೆಗೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ನಮೂನೆ 6(ಹೊಸ ಸೇರ್ಪಡೆ), 6ಎ, 7 ಮತ್ತು 8 (ತಿದ್ದುಪಡಿ, ವರ್ಗಾವಣೆ, ಮರಣ ಇತರೆ ಕಾರಣಗಳಿಂದ ಪಟ್ಟಿಯಿಂದ ಹೆಸರು ರದ್ದತಿ, ಕ್ಷೇತ್ರ ಬದಲಾವಣೆ, ಇತರೆ) ಸೇರಿದಂತೆ ಒಟ್ಟು 3,98,178 ಅರ್ಜಿಗಳು ಬಂದಿದ್ದು, ಪರಿಶೀಲನೆಗೊಳಪಡಿಸಿ, ಈ ಪೈಕಿ 14,008 ಜನರ ಹೆಸರನ್ನು ತೆಗೆಯಲಾಗಿದೆ. 3,80,375 ಅರ್ಜಿಗಳು ಅಪ್‌ಡೇಟ್ ಆಗಿದ್ದು 1016 ಅರ್ಜಿಗಳು ಬಾಕಿ ಇವೆ. ಬಿಎಲ್‌ಎ ಗಳಿಗೆ ಬೂತ್‌ವಾರು ಪಟ್ಟಿ ನೀಡಲಾಗುವುದು ಈ ಕುರಿತು ಅವರು ಪರಿಶೀಲನೆ ನಡೆಸಬಹುದು ಎಂದರು.












Discussion about this post