ಕಲ್ಪ ಮೀಡಿಯಾ ಹೌಸ್ | ಸಾಗರ |
ವರದಕ್ಷಿಣೆ ಕಿರುಕುಳ ಹಿನ್ನಲೆಯಲ್ಲಿ ನವವಿವಾಹಿತೆಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂರುವ ಘಟನೆ ಸಾಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತ ಯುವತಿಯ ತಂದೆ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಸೊರಬದ ಹೊಸಬಾಳೆ ಗ್ರಾಮದ ಯವತಿ ಸುಶ್ಮಿತಾ (23) ಮೃತಪಟ್ಟವರಾಗಿದ್ದು, ಕಳೆದ ಏಳು ತಿಂಗಳ ಹಿಂದೆ ಈಕೆಯನ್ನು ಸಾಗರದ ಈಶ್ವರ್‌ಗೆ ಕೊಟ್ಟು ಮದುವೆ ಮಾಡಲಾಗಿತ್ತು.
ಮಗಳ ಸಾವಿಗೆ ಗಂಡನಮನೆಯವರ ವರದಕ್ಷಿಣೆ ಕಿರುಕುಳವೇ ಕಾರಣವೆಂದು ಯುವತಿಯ ತಂದೆ ಹನುಮಂತಪ್ಪ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಗಂಡ ಈಶ್ವರ ಮತ್ತು ತಾಯಿ ಮಂಜಮ್ಮ ಪೀಡಿಸುತ್ತಿದ್ದು ಮಗಳು ಈ ಬಗ್ಗೆ ಹೇಳಿದ್ದಳು ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಗಂಡ ಈಶ್ವರ ಮತ್ತು ಅತ್ತೆ ಮಂಜಮ್ಮನವರನ್ನ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post