No Result
View All Result
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್
English Articles

LinkedIn shares Bengaluru’s Top Companies for career growth in 2026

by ಕಲ್ಪ ನ್ಯೂಸ್
May 20, 2026
0

Kalpa Media House  |  India | LinkedIn, the world's largest professional network, today unveiled its 2026 Top Companies list for...

Read moreDetails
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
Ashwini Vaishnaw Flags Off Bengaluru–Mumbai Express; Announces Vande Bharat Sleeper Soon

Ashwini Vaishnaw Flags Off Bengaluru–Mumbai Express; Announces Vande Bharat Sleeper Soon

May 18, 2026
  • Advertise With Us
  • Grievances
  • About Us
  • Contact Us
Thursday, May 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂ. ಗ್ರಾಮಾಂತರ

ಕೇಂದ್ರೀಯ ಪತ್ತೇದಾರಿ ತರಬೇತಿ ಶಾಲೆ ಕಟ್ಟಡಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಶಂಕುಸ್ಥಾಪನೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 31, 2022
in ಬೆಂ. ಗ್ರಾಮಾಂತರ
0
ಕೇಂದ್ರೀಯ ಪತ್ತೇದಾರಿ ತರಬೇತಿ ಶಾಲೆ ಕಟ್ಟಡಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಶಂಕುಸ್ಥಾಪನೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು ಗ್ರಾಮಾಂತರ  |

ಭಯೋತ್ಪಾದನೆ, ಗಡಿ ವ್ಯಾಜ್ಯಗಳು ಸೇರಿದಂತೆ ದೇಶದ ಹಲವು ಸವಾಲುಗಳಿಗೆ ಸಮಂಜಸ ಪರಿಹಾರ ಕಂಡುಕೊಳ್ಳುವುದು. ದೇಶದ ಮಹಾನಗರಗಳ ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸುವುದು ಸೇರಿದಂತೆ ಎಲ್ಲ ಪೊಲೀಸ್ ವಿವಿಧ ದಳಗಳ ನಡುವೆ ಸಮನ್ವಯ ಸಾಧಿಸಿ, ಸಂವಾದ ನಡೆಸಿ ಭದ್ರತೆ ಹೆಚ್ಚಿಸಲು ಪೊಲೀಸ್ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಕೇಂದ್ರ ಗುಪ್ತಚರ ಸಂಸ್ಥೆಯ ತರಬೇತಿ ಶಾಲೆಯು ಮಹತ್ವದ ವೇದಿಕೆಯಾಗಲಿದೆ. ಗಡಿ ಸುರಕ್ಷಾ ದಳಗಳಲ್ಲಿ ಸೇವೆ ನೀಡುವ ಯೋಧರು ಕೇಂದ್ರಸ್ಥಾನಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ವಸತಿ ಸೌಕರ್ಯ ಹೆಚ್ಚಿಸಲಾಗುವುದು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಷಾ Amith Shah ಹೇಳಿದರು.

ದೇವನಹಳ್ಳಿ ಸಮೀಪದ ಆವತಿ ಗ್ರಾಮದಲ್ಲಿ, ಕೇಂದ್ರೀಯ ಪತ್ತೇದಾರಿ ತರಬೇತಿ ಶಾಲೆಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ, ಬಳಿಕ ಅನಂತ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತ ಟಿಬೇಟ್ ಗಡಿ ರಕ್ಷಣಾ ದಳ ಬೆಂಗಳೂರು ವಿಭಾಗದ ವಿವಿಧ ಕಟ್ಟಡಗಳನ್ನು ವರ್ಚುವಲ್ ವೇದಿಕೆ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
2023 ರ ಹೊಸ ವರ್ಷದ ಶುಭಾಶಯಗಳ ತಿಳಿಸುವುದರೊಂದಿಗೆ ಭಾಷಣ ಪ್ರಾರಂಭಿಸಿದ ಅವರು, ಕೇಂದ್ರೀಯ ಗುಪ್ತಚರ ತರಬೇತಿ ಸಂಸ್ಥೆಯ ಕಟ್ಟಡಕ್ಕೆ ರಾಜ್ಯ ಸರ್ಕಾರ ಉತ್ತಮ ಪರಿಸರದಲ್ಲಿ ನಿವೇಶನ ಒದಗಿಸಿದೆ‌. ಮುಂಬರುವ ದಿನಗಳಲ್ಲಿ ಬಹಳ ದೇಶದ ಪೊಲೀಸ್ ವ್ಯವಸ್ಥೆಗೆ ಬಹಳ ಪ್ರಯೋಜನಕಾರಿಯಾಗಲಿದೆ. ವಿವಿಧ ಪೊಲೀಸ್ ದಳಗಳನ್ನು ಬಲಪಡಿಸಲು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಸಮಾಜವು ಚಲನಶೀಲವಾಗಿರುತ್ತದೆ ಅದರ ವಿಚಾರ, ಗಮನ, ಧೋರಣೆ, ಸ್ವರೂಪಗಳು ಹಾಗೂ ಪಥ ಬದಲಾಗುತ್ತಿರುತ್ತವೆ. ಅದಕ್ಕೆ ಅನುಗುಣವಾಗಿ ಪೊಲೀಸ್ ಬಲಗಳೂ ಕೂಡ ಬದಲಾವಣೆಗಳನ್ನು ಅಳವಡಿಸಿಕೊಳ್ಳದಿದ್ದರೆ ಅಪ್ರಸ್ತುತವಾಗುತ್ತವೆ. ಸಂಶೋಧನೆ ಆಧರಿಸಿ, ಸುರಕ್ಷತಾ ತಂತ್ರಗಳು, ರಣನೀತಿ ರೂಪಿಸಿಕೊಳ್ಳುವುದು ಮಹತ್ವಪೂರ್ಣವಾಗಿರುತ್ತದೆ. ವಿವಿಧ ಪೊಲೀಸ್ ಸಂಸ್ಥೆಗಳ ನಡುವೆ ಸಹಯೋಗ ತರುವುದು ಮಹತ್ವಪೂರ್ಣ ಕಾರ್ಯವಾಗಿದೆ. ಹೊಸ ಕಲಿಕೆ, ಸವಾಲುಗಳ ವಿನಿಮಯದೊಂದಿಗೆ ಎಲ್ಲ ಪೊಲೀಸ್ ದಳಗಳು ಪರಿಪೂರ್ಣವಾಗಲು ಸಾಧ್ಯ ಎಂದರು.

ಭಾರತದಂತಹ ದೊಡ್ಡ ದೇಶದಲ್ಲಿ ಹಲವು ಸಂಸ್ಕೃತಿ,ಆಚರಣೆಗಳಿವೆ ಅದಕ್ಕೆ ಅನುಗುಣವಾಗಿ ದೇಶದ ಆಂತರಿಕ ಕಾನೂನು ಮತ್ತು ಸುವ್ಯವಸ್ಥೆ ವಿಷಯವನ್ನು ಸಂವಿಧಾನದ ರಾಜ್ಯಪಟ್ಟಿಯಲ್ಲಿರಿಸಲಾಗಿದೆ. ಕಾಲಾಂತರದಲ್ಲಿ ಹೆಚ್ಚಿದ ಭಯೋತ್ಪಾದನೆ,ಆತಂಕವಾದ,ಗಡಿ ವಿವಾದಗಳು ಹೊಸ ಸವಾಲುಗಳನ್ನು ಒಡ್ಡಿವೆ.ಬಿಪಿಆರ್ ಆ್ಯಂಡ್ ಡಿ ಇಂತಹ ಸವಾಲುಗಳಿಗೆ ಪರಿಹಾರ ಅನ್ವೇಷಿಸುತ್ತದೆ.ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ.ದೇಶದ ಮಹಾನಗರಗಳಲ್ಲಿ ಬಹು ಭಾಷಿಕರು ನೆಲೆಸುತ್ತಿದ್ದಾರೆ ಬರುವ ದಿನಗಳಲ್ಲಿ ಅಲ್ಲಿನ ಪೊಲೀಸ್ ಕಾರ್ಯವೈಖರಿಗೆ ಅದು ಸವಾಲಾಗುತ್ತದೆ.ಮಹಾನಗರಗಳ ಸುರಕ್ಷತೆಗೂ ಸಂಶೋಧನೆ,ಅಧ್ಯಯನಗಳು ಇಲ್ಲಿ ನಡೆಯಲಿವೆ ಎಂದರು.
ಕಲ್ಕತ್ತಾ, ಹೈದರಾಬಾದ್, ಗಾಜಿಯಾಬಾದ್, ರಾಜಸ್ಥಾನ ಮತ್ತಿತರ ಕಡೆಗಳಲ್ಲಿರುವ ಸಿಡಿಐಟಿ ಸಂಸ್ಥೆಯು ಉತ್ತಮ ಕೊಡುಗೆಗಳನ್ನು ನೀಡುತ್ತಿವೆ.ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆಯುವ ಅಧ್ಯಯನಗಳು ಕರ್ನಾಟಕ ಹಾಗೂ ನೆರೆಯ ರಾಜ್ಯಗಳ ಪೊಲೀಸ್ ತನಿಖೆಗಳಿಗೆ ನೆರವಾಗಲಿವೆ.ಬಿಪಿಆರ್ ಮತ್ತು ಡಿ ಸಂಸ್ಥೆಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಯೋಗ ,ಪ್ರೋತ್ಸಾಹ ನೀಡಲಿದೆ ಎಂದು ಭರವಸೆ ನೀಡಿದರು.

ದೇಶದ ಗಡಿರಕ್ಷಣೆಗೆ ಹಗಲಿರುಳು ದುಡಿಯುತ್ತಿರುವ ಸೈನಿಕರು ತಮ್ಮ ಕುಟುಂಬಗಳೊಂದಿಗೆ ನೆಮ್ಮದಿಯ ಬದುಕು ನಡೆಸುವಂತಾಗಲು ಗಡಿ ಸುರಕ್ಷಾ ದಳಗಳ ಕೇಂದ್ರ ಸ್ಥಾನಗಳಲ್ಲಿ ವಸತಿ ನಿರ್ಮಾಣ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆದ್ಯತೆ ನೀಡಿದ್ದಾರೆ. ಇ-ಆವಾಸ್ ಪೋರ್ಟಲ್ ಮೂಲಕ ವಸತಿ ಸೌಕರ್ಯಗಳ ಸುಧಾರಣೆಯಾಗುತ್ತಿವೆ.ದೇಶದ ಗಡಿ ಸುರಕ್ಷಾ ದಳಗಳಲ್ಲಿಯೇ ಐಟಿಬಿಪಿಯು ಬಹಳ ದುರ್ಗಮ ಮತ್ತು ವಿಷಮ ವಾತಾವರಣದಲ್ಲಿ ಉತ್ಕೃಷ್ಟ ದೇಶಭಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.ಭಾರತದ ಒಂದಿಂಚೂ ಜಮೀನು ಅತಿಕ್ರಮಣವಾಗದಂತೆ ಎಚ್ಚರಿಕೆಯ ದೇಶಸೇವೆ ಮಾಡುತ್ತಿದ್ದಾರೆ.ಐಟಿಬಿಪಿ ಯೋಧರು ಭೀಮವೀರರಾಗಿದ್ದಾರೆ.ಆಯುಷ್ಮಾನ್ ಆರೋಗ್ಯ ಯೋಜನೆ ಮೂಲಕ ಸೈನಿಕರ ಮತ್ತು ಅವರ ಕುಟುಂಬದ ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.
ಬೆಂಗಳೂರಿನ ಐಟಿಬಿಪಿ ಕಟ್ಟಡಗಳ ಸಮುಚ್ಛಯದಿಂದ ವರ್ಚುವಲ್ ಆಗಿ ಯೋಧರು ಮತ್ತು ಕುಟುಂಬದ ಸದಸ್ಯರು ಮಾತನಾಡಿ, ವಸತಿ ಸೌಕರ್ಯಗಳ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸಿದರು.

Also read: ರಾಷ್ಟ್ರೀಯ ಯುವಜನೋತ್ಸವ ಶಿಸ್ತುಬದ್ದ ಆಯೋಜನೆಗೆ ಭರದ ಸಿದ್ಧತೆ: ಡಿಸಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಹ್ಲಾದ ಜೋಷಿ,ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ,ಆರೋಗ್ಯ,ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್,ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮಹಾನಿರ್ದೇಶಕ ಬಾಲಾಜಿ ಶ್ರೀವಾಸ್ತವ,ಭಾರತ ಟಿಬೇಟ್ ಗಡಿ ಪೊಲೀಸ್ ದಳದ ಮಹಾನಿರ್ದೇಶಕ ಅನೀಶ್ ದಯಾಳ್, ಹೆಚ್ಚುವರಿ ಮಹಾನಿರ್ದೇಶಕ ನೀರಜ್ ಸಿನ್ಹಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೇಂದ್ರ ಪತ್ತೇದಾರಿ ತರಬೇತಿ ಸಂಸ್ಥೆ ಶಿಲಾನ್ಯಾಸ
ಬ್ಯೂರೋ ಆಫ್ ಪೊಲೀಸ್ ರೀಸರ್ಚ್ ಅಂಡ್ ಡೆವಲಪ್‌ಮೆಂಟ್ (ಬಿ.ಪಿ.ಆರ್.ಡಿ.)ಸಂಸ್ಥೆಯಡಿ ಕಾರ್ಯನಿರ್ವಹಿಸುವ ಕೇಂದ್ರಿಯ ಪತ್ತೇದಾರಿ ತರಬೇತಿ ಸಂಸ್ಥೆಯನ್ನು ಅರ್ಬನ್ ಪೊಲೀಸಿಂಗ್ (ಸ್ಮಾರ್ಟ್ ಸಿಟಿ ಪೊಲೀಸಿಂಗ್) ಹಾಗೂ ಬ್ಲಾಕ್ ಚೈನ್ ತಂತ್ರಜ್ಞಾನದ ಉತ್ಕೃಷ್ಟತಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು.ಈ ಕೇಂದ್ರದಲ್ಲಿ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಸಿಪಿಓಗಳು ಹಾಗೂ ಸಿಎಪಿಎಫ್‌ಗಳ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕೋರ್ಸ್‌ಗಳನ್ನು ನೀಡಲಾಗುವುದು.

ಪೊಲೀಸ್ ಅಧಿಕಾರಿಗಳ ತನಿಖಾ ಗುಣಮಟ್ಟವನ್ನು ಸುಧಾರಿಸುವುದು ಈ ಕೇಂದ್ರದ ಪ್ರಮುಖ ಉದ್ದೇಶವಾಗಿದೆ. ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮದಲ್ಲಿ ಈ ಕೇಂದ್ರಕ್ಕಾಗಿ ರಾಜ್ಯ ಸರ್ಕಾರ 35 ಎಕರೆ ಭೂಮಿಯನ್ನು ಒದಗಿಸಿದೆ.
ಐಟಿಬಿಪಿ ಕಟ್ಟಡಗಳ ಉದ್ಘಾಟನೆ
ಬೆಂಗಳೂರಿನಲ್ಲಿರುವ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪ್ರಾದೇಶಿಕ ಪ್ರಧಾನ ಕಛೇರಿಯ ಹಲವು ಯೋಜನೆಗಳ ಉದ್ಘಾಟಿಸುವರು.120 ಸೈನಿಕರ ಬ್ಯಾರಕ್‌ಗಳು, 42 ವಸತಿ ಕಟ್ಟಡಗಳು, ಜಂಟಿ ಆಡಳಿತಾತ್ಮಕ ಕಟ್ಟಡಗಳು ಹಾಗೂ ಅಧಿಕಾರಿಗಳ ಹಾಗೂ ಅಧೀನ ಅಧಿಕಾರಿಗಳ ಮೆಸ್ ಕಟ್ಟಡಗಳನ್ನು ಆನ್‌ಲೈನ್ ಮೂಲಕ ಉದ್ಘಾಟನೆಗೊಳಿಸಲಾಯಿತು.

ವರದಿ: ಡಿ.ಎಲ್. ಹರೀಶ್, ಬೆಂಗಳೂರು    

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Amith ShahBangalore ruralKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaಅಮಿತ್ ಷಾಬೆಂಗಳೂರು: ಗ್ರಾಮಾಂತರ
Share197Tweet123Send
Previous Post

ರಾಷ್ಟ್ರೀಯ ಯುವಜನೋತ್ಸವ ಶಿಸ್ತುಬದ್ದ ಆಯೋಜನೆಗೆ ಭರದ ಸಿದ್ಧತೆ: ಡಿಸಿ

Next Post

ಶಿವಮೊಗ್ಗ ಜಿಲ್ಲೆಯ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಪ್ರಮೋಷನ್: ಯಾರು ಅವರು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಿವಮೊಗ್ಗ ಜಿಲ್ಲೆಯ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಪ್ರಮೋಷನ್: ಯಾರು ಅವರು?

ಶಿವಮೊಗ್ಗ ಜಿಲ್ಲೆಯ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಪ್ರಮೋಷನ್: ಯಾರು ಅವರು?

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

2026ರಲ್ಲಿ ವೃತ್ತಿಜೀವನದ ಬೆಳವಣಿಗೆಗೆ ನೆರವಾಗುವ ಬೆಂಗಳೂರಿನ ಪ್ರಮುಖ 10 ಕಂಪನಿಗಳ ಪಟ್ಟಿ ಪ್ರಕಟಿಸಿದ ಲಿಂಕ್ಡ್‌ ಇನ್

May 20, 2026
“ಮೆಲೋಡಿ” ಮೀಮ್ ಪರಿಣಾಮ: ದಲಾಲ್ ಸ್ಟ್ರೀಟ್‌ನಲ್ಲಿ ಅಚ್ಚರಿ ಷೇರು ಏರಿಕೆ

“ಮೆಲೋಡಿ” ಮೀಮ್ ಪರಿಣಾಮ: ದಲಾಲ್ ಸ್ಟ್ರೀಟ್‌ನಲ್ಲಿ ಅಚ್ಚರಿ ಷೇರು ಏರಿಕೆ

May 20, 2026
GE Aerospace to Invest ₹100 Crore in Pune Facility, Boosting India Manufacturing

ಪುಣೆಯ 100 ಕೋಟಿ ಹೂಡಿಕೆಯೊಂದಿಗೆ ಭಾರತದಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ವೇಗಗೊಳಿಸಲು ಮುಂದಾಗಿರುವ GE ಏರೋಸ್ಪೇಸ್

May 20, 2026
ಅಕ್ರಮ ಮರಳು ಸಾಗಣೆ ವಿರುದ್ಧ ದಾಳಿ : 150 ಟನ್‌ಗೂ ಅಧಿಕ ಮರಳು ಜಪ್ತಿ

ಅಕ್ರಮ ಮರಳು ಸಾಗಣೆ ವಿರುದ್ಧ ದಾಳಿ : 150 ಟನ್‌ಗೂ ಅಧಿಕ ಮರಳು ಜಪ್ತಿ

May 20, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL