ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಯಧುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಇಂದು ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರು ಮೈಸೂರು ಮಹಾಸಂಸ್ಥಾನದ ರಾಜರು ಮತ್ತು ದೇವಾಲಯದ ಸಂಬಂಧವನ್ನು ಸ್ಮರಿಸಿದರು.
ಡಿವಿಎಸ್ ಉಪಾಧ್ಯಕ್ಷ ಎಸ್.ಪಿ. ದಿನೇಶ್, ಡಾ. ಶ್ರೀಧರ್, ಕಾರ್ಯದರ್ಶಿ ಎಸ್. ರಾಜ್‌ಶೇಖರ್, ಪಾಲಿಕೆ ಸದಸ್ಯ ಪ್ರಭಾಕರ್, ನಗರಸಭಾ ಮಾಜಿ ಸದಸ್ಯೆ ನಿರ್ಮಲ ಕಾಶಿ, ಅರ್ಚಕರಾದ ರಾಮ್‌ಪ್ರಸಾದ್ ಮತ್ತಿತರರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















