ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಗರ ರಸ್ತೆಯ ಡಾ. ಪಂಡಿತ ಪುಟ್ಟರಾಜಕವಿ ಗವಾಯಿಗಳವರ ಕುರುಡು ಮಕ್ಕಳ ಸಂಗೀತ ವಿದ್ಯಾಲಯ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮ ಉಚಿತ ಸಂಸ್ಕೃತ ಪಾಠಶಾಲೆಯಲ್ಲಿ ಜ. 21ರ ನಾಳೆ ಸಂಜೆ 6:30ಕ್ಕೆ ಗಾನಲಹರಿ 84ನೇ ಅಮಾವಾಸ್ಯೆ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ಗವಾಯಿಗಳಾದ ಪಂ. ಆರ್.ಬಿ. ಸಂಗಮೇಶ್ವರ ಅಧ್ಯಕ್ಷತೆ ವಹಿಸುವರು. ಶಿಕ್ಷಕಿ ಸೌಮ್ಯ ಎಸ್. ಮಾರುತಿ ಅತಿಥಿಗಳಾಗಿ ಆಗಮಿಸಲಿದ್ದು, ವಿನೋಬನಗರದ ಪ್ರತಿಮಾ ಉಡುಪ ಸಂಗಡಿಗರಿಂದ ಭಜನೆ ನಡೆಯಲಿದೆ.
ರಾಮಣ್ಣ ಭಜಂತ್ರಿ ಶಹನಾಯಿ, ವೀರಭದ್ರಯ್ಯ ಶಾಸ್ತ್ರಿ ವೇದಘೊಷ, ತುಕಾರಾಮ್ ರಂಗಧೋಳ್, ವಿನಾಯಕ್ ಭಟ್ ತಬಲ ಹಾಗೂ ಶಿವರಾಜಪ್ಪ, ಸಿದ್ದಣ್ಣ ಬಡಿಗೇರ್, ವೀರಣ್ಣ ಮಾಳೇನಹಳ್ಳಿ ಹಾರ್‍ಮೋನಿಯಂ ನುಡಿಸಲಿದ್ದಾರೆ. ಶ್ರೀಗೌರಿ ಪ್ರಾರ್ಥನೆ, ಉಸ್ತಾದ್ ಹುಮಾಯೂನ್ ಹರ್ಲಾಪುರ್ ನಿರೂಪಿಸಲಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















