ಕಲ್ಪ ಮೀಡಿಯಾ ಹೌಸ್ | ಸೊರಬ |
ಮಕ್ಕಳ ಕಲಿಕಾ ಹಬ್ಬಕ್ಕೆ ತಾಲ್ಲೂಕಿನಾದ್ಯಂತ ಮಕ್ಕಳು, ಪೋಷಕರು, ಶಿಕ್ಷಕರಾದಿಯಾಗಿ ಉತ್ಸಾಹ ತೋರಿಸಿದ್ದು, ಗ್ರಾಮಾಂತರ ಪ್ರದೇಶಗಳ ಮೂಲ ಸೊಗಡನ್ನು ನೆನಪಿಸಿದ್ದಾರೆ. ಮೂಲ ಸಂಸ್ಕೃತಿಯ ಅಭಿಮಾನವನ್ನು ಈ ಮೂಲಕ ಜಾಗೃತಿಗೊಳಿಸಿದ್ದು ಸಂತಸದ ಸಂಗತಿ ಎಂದು ಕ್ಷೇತ್ರ ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್ ಪ್ರಶಂಸಿದರು.
ಚಂದ್ರಗುತ್ತಿ ಹೋಬಳಿ ಕಡಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹೊಸಬಾಳೆ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
ಗೋಡೆಗಳ ಮಧ್ಯೆ ಒತ್ತಡದ ಶಿಕ್ಷಣವನ್ನು ತುರುಕುವ ಬದಲಿಗೆ ಆಟವಾಡಿಸುತ್ತ, ಹಬ್ಬದಂತೆ ಸಂಭ್ರಮದ ನಡುವೆ ನೀಡುವ ಜ್ಞಾನ ಮಕ್ಕಳ ವಿಕಸನಕ್ಕೆ ಪೂರಕವಾಗಿರುತ್ತದೆ ಎಂದು ಹೇಳಿದರು.
Also read: ದೇಶವೆಂದರೆ ಕೇವಲ ಅಭಿವೃದ್ಧಿಯಲ್ಲ, ಅದೊಂದು ಭಾವನೆ: ಆಯನೂರು ಮಂಜುನಾಥ್ ಅಭಿಮತ
ಕ್ಲಸ್ಟರ್ ನ 120 ಮಕ್ಕಳಿಗೆ ಹಾಡಿನ ಮೂಲಕ, ಊರು ಸುತ್ತೋಣದಲ್ಲಿ ಜೀವವೈವಿಧ್ಯ ದ, ಕುಲಕಸುಬುಗಳ ಪರಿಚಯ, ಸರಳ ಪ್ರಯೋಗಗಳು, ಮಾದರಿ ತಯಾರಿ ಮೂಲಕ ಕಲಿಕಾ ತರಬೇತಿ ನೀಡಲಾಯಿತು.
ನೋಡಲ್ ಅಧಿಕಾರಿ ಹರಿಹರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಎಸ್ಡಿಎಂಸಿ ಅಧ್ಯಕ್ಷ ಮರಿಯಪ್ಪ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಡಿ.ಮಂಜಪ್ಪ ಪಾಲ್ಗೊಂಡರು. ಕೆರೆಸ್ವಾಮಿಗೌಡ, ಎಸ್.ಮಂಜಪ್ಪ ಮುಟಗುಪ್ಪೆ, ಕೆ.ಹೊಳೆಯಪ್ಪ ಹೊಸಬಾಳೆ, ರಾಜು ಬಿ.ಸಂಕಣ್ಣೇರ್, ಸಂಪನ್ಮೂಲ ಶಿಕ್ಷಕರು, ಶಾಲಾ ಮಕ್ಕಳು, ಶಿಕ್ಷಕರು, ಶಾಲಾ ಸಮಿತಿಯವರು, ಪೋಷಕರು ಇದ್ದರು.
ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ಗುರುರಾಜ್ ಪ್ರಾಸ್ತಾವಿಕ ಮಾತನಾಡಿದರು. ಎನ್.ಬಿ.ಶಶಿಕಲಾ ನಿರೂಪಿಸಿದರು.
(ವರದಿ: ಮಧುರಾಮ್, ಸೊರಬ)


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















