ಕಲ್ಪ ಮೀಡಿಯಾ ಹೌಸ್ | ತಿ. ನರಸೀಪುರ |
ತಾಲೂಕಿನ ಕೆಲವು ಗ್ರಾಮಗಳಲ್ಲಿ ಚಿರತೆ ಕಾಟ ವಿಪರೀತವಾಗಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆಯ ಸೂಚನೆಗಳನ್ನು ನೀಡಿದೆ.
ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗ ಮತ್ತು ತಿ. ನರಸೀಪುರ ಅರಣ್ಯ ವಲಯದ ವತಿಯಿಂದ ಪ್ರಕಟಣೆ ಹೊರಡಿಸಲಾಗಿದ್ದು, ತುರ್ತು ಸಂದರ್ಭದಲ್ಲಿ ಸಹಾಯವಾಣಿ 9845772744, 9945921926 ಹಾಗೂ ಅರಣ್ಯ ಸಹಾಯವಾಣಿ ಸಂಖ್ಯೆ 1926 ಗೆ ಸಂಪರ್ಕಿಸಬಹುದು.

- ಮಕ್ಕಳು, ವೃದ್ಧರು ಮತ್ತು ಮಹಿಳೆಯರು ಯಾವುದೇ ಕಾರಣಕ್ಕೂ ಒಂಟಿಯಾಗಿ ಓಡಾಡತಕ್ಕದ್ದಲ್ಲ. ಸಂಜೆ 6 ಗಂಟೆಯ ಒಳಗೆ ಮನೆಗೆ ಸೇರಬೇಕು.
- ಯಾವುದೇ ಕಾರಣಕ್ಕೂ ಬಯಲು ಬಹಿರ್ದೆಶೆಗೆ ಹೋಗಬಾರದು.
- ಚಿರತೆಯು ಕಂಡಲ್ಲಿ ಯಾವುದೇ ಕಾರಣಕ್ಕೂ ಹೆಚ್ಚು ಜನ ಸೇರಿ ಗದ್ದಲ ಮಾಡಬಾರದು.
- ಸಾಕು ಪ್ರಾಣಿಯನ್ನು ಚಿರತೆ ಹತ್ಯೆ ಮಾಡಿದ್ದಲ್ಲಿ ಅದನ್ನು ಮುಟ್ಟಬಾರದು.
- ಚಿರತೆಯ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಇಲಾಖೆ ನೀಡಿರುವ ಸಂಖ್ಯೆಗೆ ಕೂಡಲೇ ಕರೆ ಮಾಡಿ ಮಾಹಿತಿ ನೀಡಬೇಕು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post