ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಎಮ್‌ಪಿಎಮ್ ಹಾಗೂ ವಿಐಎಸ್‌ಎಲ್ ಕಾರ್ಖಾನೆಗಳನ್ನು ಶಾಶ್ವತವಾಗಿ ಮುಚ್ಚುವ ನಿರ್ಧಾರಕ್ಕೆ ಬಂದಿರುವ ಕೇಂದ್ರ ಸರ್ಕಾರದ ವಿರುದ್ಧ ಶಾಸಕ ಸಂಗಮೇಶ್ವರ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ನೀಡಿದ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಹೀಗಾಗಿ ಜನ ಬಿಜೆಪಿಗೆ ಮತ ನೀಡಲು ಹಿಂಜರಿಯುತ್ತಾರೆ ಎಂದರು.
ಎಮ್‌ಪಿಎಮ್ ಹಾಗೂ ವಿಐಎಸ್‌ಎಲ್ ಭದ್ರಾವತಿಯ ಜೀವನಾಡಿಗಳು. ಕಾಗದ ಕಾರ್ಖಾನೆಯನ್ನು ಈಗಾಗಲೇ ನಿಲ್ಲಿಸಲಾಗಿದೆ. ವಿಐಎಸ್‌ಎಲ್ ಅನ್ನು ಸಹ ಮುಚ್ಚುವ ನಿರ್ಧಾರ ಕೈಗೊಳ್ಳುವ ಮೂಲಕ ಬಿಜೆಪಿ ಸರ್ಕಾರ ನಗರದ ಜನತೆಗೆ ವಂಚನೆ ಮಾಡಿದೆ. ಯಾವುದೇ ಕಾರಣಕ್ಕೂ ಮುಚ್ಚದೆ ಎರಡೂ ಕಾರ್ಖಾನೆಗಳನ್ನು ಸರ್ಕಾರ ಬಂಡವಾಳ ತೊಡಗಿಸಿ ಉಳಿಸಬೇಕು ಎಂದರು.
ವಿಐಎಸ್‌ಎಲ್ ಮತ್ತು ಎಮ್‌ಪಿಎಮ್ ಕಾರ್ಖಾನೆಗಳನ್ನು ಉಳಿಸುವ ಉದ್ದೇಶದಿಂದ ನಾಳೆ ನಾವು ನಗರದಲ್ಲಿ ಹೋರಾಟದ ಉದ್ದೇಶವಾಗಿ ಸಭೆ ಕರೆಯಲಾಗಿದೆ. ಪ್ರತಿಯೊಬ್ಬರೂ ಸಭೆಯಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡುವ ಮೂಲಕ ನಮ್ಮೂರ ಕಾರ್ಖಾನೆಗಳನ್ನು ಉಳಿಸಲು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















