ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ವಿದ್ಯಾರ್ಥಿಗಳಿಗೆ ಶಿಕ್ಷಣವೇ ಒಂದು ಆಸ್ತಿ, ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉನ್ನತ ಪ್ರಜೆಯಾಗಿ ಹೊರಹೊಮ್ಮಬೇಕು ಎಂದು ಗ್ರಾ.ಪಂ ನಿಕಟ ಪೂರ್ವ ಅಧ್ಯಕ್ಷ ಎಂಪಿ ರತ್ನಾಕರ ಹೇಳಿದರು.
ಚಂದ್ರಗುತ್ತಿ ಶೀ ರಂಗನಾಥ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರದಂದು ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಯಾವುದೇ ಒಂದು ಸಾಧನೆ ಮಾಡಬೇಕಾದರೂ ಪರಿಶ್ರಮ ಬಹಳ ಮುಖ್ಯವಾಗಿದ್ದು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ ಗೆ ಒತ್ತು ನೀಡುವುದರ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಶೈಕ್ಷಣಿಕ ಉನ್ನತಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮ ಪಂಚಾಯಿತಿಯಿಂದ ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಸಹಕರಿಸುತ್ತೇವೆ ಎಂದರು.
ಬಿಜೆಪಿ ಮುಖಂಡ ಈಶ್ವರಪ್ಪ ಚನ್ನಪಟ್ಟಣ ಮತನಾಡಿ, ಭಾರತ ದೇಶವು ಇಡೀ ವಿಶ್ವಕ್ಕೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ತಂದುಕೊಟ್ಟಿದ್ದು. ಆಧುನಿಕ ದಿನಗಳಲ್ಲಿ ಪಾಶ್ಚಿಮಾತ್ಯ ದೇಶಗಳ ಕೀಳಿಗೆ ಬಿದ್ದು ನಮ್ಮ ದೇಶದ ಸಂಸ್ಕಾರವನ್ನು ಮರೆಯುತ್ತಿದ್ದೇವೆ. ಬಾಲ್ಯ ಜೀವನದಲ್ಲಿ ಸಂಸ್ಕಾರವನ್ನು ಕಲಿತರೆ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಮುಂದೆ ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ವಿದ್ಯಾಭ್ಯಾಸ ಉದ್ಯೋಗಕ್ಕೆ ಸೀಮತಾಗದೆ ತನ್ನ ಮನೆಯನ್ನು, ಸಮಾಜವನ್ನು, ಮತ್ತು ನಮ್ಮ ದೇಶವನ್ನು ಸುಧಾರಿಸುವಂತಹ ವಿದ್ಯಾಭ್ಯಾಸ ಆಗಬೇಕು ಎಂದರು.
ಗ್ರಾಪಂ ಸದಸ್ಯ ರೇಣುಕಾ ಪ್ರಸಾದ್ ಮಾತನಾಡಿ. ವಿದ್ಯಾರ್ಥಿಗಳು ನಾಗರಿಕತೆ ಜೊತೆಗೆ ಶೈಕ್ಷಣಿಕವಾಗಿ ಮತ್ತು ಸಂಸ್ಕಾರ ಮತ್ತು ಸಂಸ್ಕೃತಿ, ವಿವಿಧ ಸಾಂಸ್ಕೃತಿಕ ಕಲೆ ಸಾಹಿತ್ಯ ಇಂತಹ ಪ್ರತಿಭೆಗಳಲ್ಲಿ ಭಾಗವಹಿಸಿದರೆ ಮನಸ್ಸು ಪ್ರಶಾಂತವಾಗಿ ಇರುತ್ತದೆ. ಯಾವುದೇ ಚಿಂತೆಯತ್ತ ಮನಸ್ಸು ಹೋಗುವುದಿಲ್ಲ ಅದ್ದರಿಂದ ಬಹಳಷ್ಟು ಜನರು ಜೀವನ ಉದ್ಯೋಗ ರೂಪಿಸಿಕೊಂಡು ದೊಡ್ಡ ಕಲಾವಿದರಾಗಿ ಹೆಸರು ಮಾಡಿದ್ದಾರೆ ಎಂದರು.
Also read: ಸ್ಯಾಂಡಲ್‌ವುಡ್ ಹಿರಿಯ ನಟ ಮಂದೀಪ್‌ರಾಯ್ ಇನ್ನಿಲ್ಲ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆ ಕಾರ್ಯಕ್ರಮ ಮುಗಿದ ನಂತರ ವಿದ್ಯಾರ್ಥಿಗಳಿಂದ ಹಾಡು ನೃತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡು, ಪೋಷಕರು ತಮ್ಮ ಮಕ್ಕಳು ಪ್ರದರ್ಶಿಸಿದ ನೃತ್ಯ ಕಣ್ತುಂಬಿಕೊಂಡರು.
ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಿ ಚಂದ್ರಪ್ಪ, ಸದಸ್ಯರಾದ ರೇಣುಕಾ ಪ್ರಸಾದ್, ಶ್ರೀಮತಿ, ಶ್ರೀ ರೇಣುಕಾಂಬ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸನ್ ಶೇಟ್, ಸದಸ್ಯ ನಟರಾಜ್, ಪ್ರಮುಖರಾದ ಪರಮೇಶ್ ಮಣ್ಣತ್ತಿ, ಶಾಲಾ ಆಡಳಿತ ಮಂಡಳಿ ನಿರ್ದೇಶಕ ನೀಲಪ್ಪ ಭೂತಣ್ಣನವರ್, ಸಿ.ಆರ್.ಪಿ ಆನಂದ್, ಸೊರಬ ರಂಗನಾಥ ಶಾಲೆಯ ದೈಹಿಕ ಶಿಕ್ಷಕ ಈಶ್ವರಪ್ಪ, ಮಾಲ್ತೇಶ್, ರೇಣುಕಾಂಬ ಪ್ರೌಢಶಾಲೆ ಮುಖ್ಯ ಶಿಕ್ಷಕ ಆರ್ ಶಶಿಕುಮಾರ್, ರಂಗನಾಥ ಶಾಲೆಯ ಮುಖ್ಯ ಶಿಕ್ಷಕ ಚಂದ್ರಪ್ಪ, ಶಿಕ್ಷಕರಾದ ಮಲ್ಲಿಕಾರ್ಜುನ್ ಜೋಗಳ್ಳಿ, ಪ್ರಶಾಂತ್, ಧನ್ಯ ಡಿ, ಸೇರಿದಂತೆ ಮತ್ತಿತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post