ಕಲ್ಪ ಮೀಡಿಯಾ ಹೌಸ್ | ಸೊರಬ |
ರೈತರ ತಾಳ್ಮೆ ಕೆಡಿಸಬೇಡಿ, ಅನ್ನ ನೀಡುವ ದಾತಾರರನ್ನು ಅಸಡ್ಡೆ ಮಾಡಬೇಡಿ ಎಂದು ಸಮಾಜಸೇವಕ ಡಾ.ಜ್ಞಾನೇಶ್ ಹೇಳಿದರು.
ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ತಾಲೂಕು ಯಲಸಿ, ಕಕ್ಕರಸಿ ಗ್ರಾಮಸ್ಥರೊಂದಿಗೆ ವಿದ್ಯುತ್ ಅಸಮರ್ಪಕತೆ ಬಗ್ಗೆ ಮೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಪ್ರಸ್ತುತ ರೈತರಿಗೆ ನೀರು, ನೀರಿಗೆ ಪೂರಕವಾಗಿ ವಿದ್ಯುತ್ ತೀರಾ ಅವಶ್ಯವಿರುತ್ತದೆ. ಈಗಾಗಲೇ ನಿಮಗೆ ನಾನು ನೂರಾರು ಬಾರಿ ದೂರವಾಣಿ ಮೂಲಕ ಸರಿಪಡಿಸುವಂತೆ ಕೋರಿದ್ದರೂ ಸುಧಾರಣೆ ಕಂಡಿಲ್ಲ. ತ್ವರಿತವಾಗಿ ಸಮಸ್ಯೆ ಬಗೆಹರಿಸಿ, ಗ್ರಾಮಸ್ಥರು ರೊಚ್ಚಿಗೆದ್ದು ಕಛೇರಿಗೆ ಮುತ್ತಿಗೆ ಹಾಕುವುದನ್ನು ಕಾಯಬೇಡಿ ಎಂದು ತಾಕೀತು ಮಾಡಿದರು.
ನಿರಂತರ ತಿಂಗಳಿಂದ ತ್ರೀಫೇಸ್ ಒಂದು ಗಂಟೆಯೂ ದೊರಕುತ್ತಿಲ್ಲ, ಬೆಳೆದ ಬೆಳೆಗಳು ನಾಶಗೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಏರ್ಪಟ್ಟಿದೆ ಮುಂತಾದ ವಿದ್ಯುತ್ ಅವ್ಯವಸ್ಥೆ ಬಗ್ಗೆ ಗ್ರಾಮಸ್ಥರು ತಮ್ಮ ಅಳಲು, ಹತಾಶೆ ವ್ಯಕ್ತಪಡಿಸಿದರು.
ಯಲಸಿ, ಕಕ್ಕರಸಿ ಗ್ರಾಮ ಅಧ್ಯಕ್ಷರು, ಗ್ರಾಮ ಪ್ರಮುಖರು, ಗ್ರಾಮಸ್ಥರು ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















