ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ದೈವ-ದೇವರುಗಳ ಮೇಲೆ ನಂಬಿಕೆಯಿರುವ ನಮ್ಮ ಈ ದೇಶದಲ್ಲಿ ಹೆಣ್ಣನ್ನು ದೇವರೆಂದು ಪೂಜಿಸಿ, ಆರಾಧಿಸುತ್ತೇವೆ. ಸಂಪತ್ತು – ಐಶ್ವರ್ಯಗಳಿಗೆ ಲಕ್ಷ್ಮೀಯನ್ನು, ಶಕ್ತಿ – ಧೈರ್ಯಕ್ಕೆ ದುರ್ಗೆಯನ್ನು, ವಿದ್ಯಾ ಬುದ್ಧಿಗೆ ಸರಸ್ವತಿಯನ್ನು ಪೂಜಿಸುವ ನಮಗೆ, ಹೆಣ್ಣು ಶಕ್ತಿ – ಸಮೃದ್ಧಿಯ ದ್ಯೋತಕ. ತಾಯಿಯಾಗಿ, ಮಡದಿಯಾಗಿ, ಮಗಳಾಗಿ, ಸಹೋದರಿಯಾಗಿ ಈಗ ರಾಜಕೀಯ ನಾಯಕಿಯಾಗಿ ನಮ್ಮೆಲ್ಲರ ಅಗತ್ಯತೆಗಳನ್ನು ಪೂರೈಸುತ್ತಿದ್ದಾರೆ.
ಲಿಂಗ ತಾರತಮ್ಯವೆನ್ನುವುದು ಈ 21 ನೇ ಶತಮಾನದಲ್ಲಿಯೂ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಗಂಡು ಮಕ್ಕಳಿಗೆ ನೀಡುವ ಸ್ವಾತಂತ್ರ – ಸಹಕಾರ ಹೆಣ್ಣು ಮಕ್ಕಳಿಗೆ ಕೊಡದೆ ಅವರನ್ನು ಮನೆಗೆಲಸಗಳಲ್ಲಿ ತೊಡಗಿಸುತ್ತೇವೆ. ಈ ವಿಷಯದಲ್ಲಿ ಬದಲಾವಣೆ ಈಗ ಅತ್ಯಂತ ಅವಶ್ಯಕವಾಗಿದೆ.
ಜಗತ್ತಿನ ಎಲ್ಲಾ ಕೆಲಸಗಳನ್ನು ಮಾಡುವ ಶಕ್ತಿ – ಯುಕ್ತಿ ಮಹಿಳೆಯರಿಗಿದೆ. ಸ್ತ್ರೀ ಎಂದರೆ ಎಲ್ಲವನ್ನೂ ಉರುಳಿಸಬಲ್ಲ ಪ್ರಳಯವೂ ಹೌದು, ಜೀವ ಉಳಿಸುವ ಜೀವಜಲವೂ ಹೌದು.
ನಾಗಮಣಿ ಜಿಂಕಲ್ ಇವರೇ ಏಕೆ?
2008 ರಲ್ಲಿ ಆದ 108ನೇ ಭಾರತ ಸಂವಿಧಾನ ತಿದ್ದುಪಡಿಯ ಪ್ರಕಾರ ಸಂವಿಧಾನ ಸಭೆಯ ಚುನಾವಣೆಯಲ್ಲಿ ಮೂರನೇ ಒಂದು ಭಾಗದಷ್ಟು (1/3) ಸ್ಥಾನಗಳನ್ನು ಮಹಿಳೆಯರಿಗೆ ಮಿಸಲಾಗಿರಿಸಿದ್ದಾರೆ. (ಆದರೆ ಇಲ್ಲಿಯವರೆಗೂ ಯಾವುದೇ ಎಸ್’ಸಿ ಮೀಸಲು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿಲ್ಲ?)
ಯಾರು ಈ ನಾಗಮಣಿ ಜಿಂಕಲ್?
ಕೂಡ್ಲಿಗಿಯಲ್ಲಿ ಜನಿಸಿ, ಆಡಿ ಬೆಳೆದ ಇವರು ಇಲ್ಲಿಯೇ ತಮ್ಮ ಪದವಿ ವಿದ್ಯಾಭ್ಯಾಸವನ್ನೂ ಕೂಡ ಮಾಡಿದರು. ಇಲ್ಲಿಯ ರಸ್ತೆಗಳೂ ಕೂಡ ಇವರಿಗೆ ತಿಳಿದಿದೆ.
1996 ರಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಏನೆಲ್ಲಾ ಸೇವೆ ಮಾಡಿದ್ದಾರೆ?
- ಶ್ರೀ ವಾಸವೀ ಹಿರಿಯ ಪ್ರಾಥಮಿಕ ಶಾಲೆಯ ಮೂಲಕ ಎಷ್ಟೋ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ತಮ್ಮ ವಿದ್ಯಾಸಂಸ್ಥೆಯಿಂದ ಯಾವುದೇ ಪ್ರತಿಫಲ ಅಪೇಕ್ಷಿಸದೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಅತ್ಯಂತ ಕಡಿಮ ವೆಚ್ಚದಲ್ಲಿ ದೊರೆಯುವಂತೆ ಮಾಡಿದ್ದಾರೆ.
- ತಮ್ಮ ಬಳಿಗೆ ಸಹಾಯಹಸ್ತವನ್ನು ಚಾಚಿದ ಎಲ್ಲರನ್ನೂ ಸಹಾನುಭೂತಿಯಿಂದ ಸಂತೈಸುವ ಮಾತೃಗುಣ ಹೊಂದಿದ್ದಾರೆ.
- ಚುನಾವಣೆಯ ಸಂದರ್ಭದಲ್ಲಿ ಇತರ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆರ್ಥಿಕವಾಗಿ – ಸಾಮಾಜಿಕವಾಗಿ ಬೆನ್ನುಬಾಗಿದ್ದು ಸ್ಪರ್ಧೆಯಲ್ಲಿ ಜಯಗಳಿಸಲು ಅನುವಾಗಿದ್ದಾರೆ.
- ಕೋವಿಡ್ ಸಂದರ್ಭದಲ್ಲಿ ರಿಕ್ಷಾ ಚಾಲಕರು, ಪೈಂಟರುಗಳು, ಕೆಎಸ್’ಅರ್’ಟಿಸಿ ಕೆಲಸಗಾರರು, ಮುನಿಸಿಪಾಲಿಟಿ ಕೆಲಸಗಾರರಿಗೆ ಪ್ರಿ ಕಿಟ್, ಸಾನಿಟೈಸರ್, ಮಾಸ್ಕ್, ಮಾತ್ರೆಗಳನ್ನೊಳಗೊಂಡ ಉಚಿತ ಮೆಡಿಕಲ್ ಕಿಟ್ ಮತ್ತು ಅಕ್ಕಿ, ಬೆಳೆ, ಕಾಳು, ಎಣ್ಣೆ, ತರಕಾರಿ, ಸೋಪು, ಶ್ಯಾಂಪೂಗಳನ್ನು ಒಳಗೊಂಡ ರೇಷನ್ ಕಿಟ್’ಳನ್ನು ಉಚಿತವಾಗಿ ವಿತರಿಸಿದ್ದಾರೆ.
- ಕೋವಿಡ್ ಸಮಯದಲ್ಲಿ ಮನೆಮನೆಗೆ ಹಾಲು ಪೂರೈಕೆಯಾಗುವ ವ್ಯವಸ್ಥೆಯನ್ನು ಕೂಡ ಮಾಡಿದ್ದನ್ನು ಸ್ಥಳೀಯರು ಎಂದಿಗೂ ಮರೆಯುವಂತಿಲ್ಲ.
- ಕೆಪಿಪಿಸಿಯಿಂದ ಆಯೋಜಿತವಾದ ಎಲ್ಲಾ ಜನೋಪಯೋಗಿ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಕೂಡ್ಲಿಗಿ ಜನರ ಸೇವೆಯಲ್ಲಿನಿರತರಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post