ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವಿಐಎಸ್‌ಎಲ್ ಕಾರ್ಖಾನೆ ಮುಚ್ಚಲು ದಿನಗಳು ಹತ್ತಿರವಾಗುತ್ತಿದ್ದು, ಮಾರ್ಚ್ ೩೧ ಉಕ್ಕು ಉತ್ಪಾದನಾ ಕಾರ್ಯವನ್ನು ಸ್ಥಗಿತಗೊಳಿಸಲು ಆದೇಶಿಸಲಾಗಿದೆ ಎಂದು ತಿಳಿದುಬಂದಿದೆ.
ವಿಐಎಸ್‌ಎಲ್ ಇವಿಇಡಿ ಹಾಗೂ ಸಿಜಿಎಮ್ ಸಭೆ ನಡೆದಿದ್ದು, ಇದರ ಮಾಹಿತಿಯಂತೆ ಮಾರ್ಚ್ ೩೧ರಂದು ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಲು ಈಗಾಗಲೇ ಸೂಚನೆ ಬಂದಿದ್ದು, ಮುಂದುವರೆಸುವ ಕುರಿತಾಗಿ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಲಾಗಿದೆ.
ಸಭೆ ಕುರಿತಂತೆ ಇಡಿ ಹಾಗೂ ಸಿಜಿಎಮ್ ನೀಡಿರುವ ಪ್ರಮುಖ ಅಂಶಗಳು ಇಂತಿವೆ:
- ಇಡಿ ಅವರು ಉಲ್ಲೇಖಿಸಿರುವಂತೆ ಕಾರ್ಖಾನೆಯನ್ನು ಸ್ಥಗಿತಗೊಳಿಸುವುದೇ ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿದೆ.
- ಕೇಂದ್ರ ಸರ್ಕಾರದ ಆದೇಶದಂತೆ ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚಲು ಜನವರಿ 16ರಂದು ಅಂತಿಮವಾಗಿ ನಡೆದ ಎಫ್‌ಎಐಎಲ್ ಬೋರ್ಡ್ ಮೀಟಿಂಗ್‌ನಲ್ಲಿ ತೀರ್ಮಾನಿಸಲಾಗಿದೆ.
- ಕಳೆದ ನವೆಂಬರ್‌ನಲ್ಲಿ ಕೇಂದ್ರ ಉಕ್ಕು ಸಚಿವರು, ಎಸ್‌ಎಐಎಲ್ ನಿರ್ದೇಶಕರು ಹಾಗೂ ವಿಎಸ್‌ಐಎಲ್ ಇಡ ಅವರೊಂದಿಗೆ ಸಭೆ ನಡೆಸಿ, ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚಲು ಬೇಕಾದ ಕ್ರಮ ಕೈಗೊಳ್ಳಲು ಸೂಚಿಸಿದ್ದರು.
- ಎಸ್‌ಎಐಎಲ್ ಹಾಗೂ ವಿಐಎಸ್‌ಎಲ್ ಆಡಳಿತ ಮಂಡಳಿಯವರು ಖಾಯಂ ಹಾಗೂ ಗುತ್ತಿಗೆ ಸಿಬ್ಬಂದಿಗಳ ಹಿತ ಕಾಯುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಉಕ್ಕು ಸಚಿವರಿಂದ ಸೂಚನೆ.
- ವಿಐಎಸ್‌ಎಲ್ ಆಡಳಿತ ಮಂಡಳಿಗೆ ಈಗಾಗಲೇ ಜನರಲ್ ಕ್ಲೋಸರ್ ಗೈಡ್‌ಲೈನ್ಸ್ ಬಿಡುಗಡೆ ಮಾರ್ಚ್ 31ರಂದು ಮೊದಲ ಘಟಕ ಸ್ಥಗಿತಕ್ಕೆ ದಿನಾಂಕ ನಿಗಧಿ.
- ಮಾರ್ಚ್ 31ರ ನಂತರ ಗುತ್ತಿಗೆ ವಿಸ್ತರಣೆಯ ಅಗತ್ಯವಿರುವ ಅನುದಾನಕ್ಕೆ ಎಸ್‌ಎಐಎಲ್‌ಗೆ ಮನವಿ.
Also read: ಕೆಎಸ್‌ಆರ್‌ಟಿಸಿ ಬಸ್ – ಕಾರು ನಡುವೆ ಮುಖಾಮುಖಿ ಢಿಕ್ಕಿ : ನಾಲ್ವರು ಗಂಭೀರ
ಕಾರ್ಖಾನೆ ಉಳಿಸಲು ಶೇ.1ರಷ್ಟು ಏಕೈಕ ಮಾರ್ಗ
ಸಭೆಯಲ್ಲಿ ಚರ್ಚೆಗೊಂಡಂತೆ ಕಾರ್ಖಾನೆಯನ್ನು ಉಳಿಸಿಕೊಳ್ಳುವ ಶೇ.1ರಷ್ಟಿರುವ ಏಕೈಕ ಮಾರ್ಗ ಎಂದರೆ ಅದು ರಾಜಕೀಯ ಒತ್ತಡ ಮಾತ್ರ. ಸ್ಥಳೀಯ ಮಟ್ಟದಿಂದ ಕೇಂದ್ರದವರೆಗೂ ಉನ್ನತ ಮಟ್ಟದಲ್ಲಿ ರಾಜಕೀಯ ಒತ್ತಡವನ್ನು ಕೇಂದ್ರ ಸರ್ಕಾರದ ಮೇಲೆ ಹೇರಿ ಕಾರ್ಖಾನೆಯನ್ನು ಉಳಿಸುವಂತೆ ಮನವೊಲಿಸುವ ಏಕೈಕ ಮಾರ್ಗ ಮಾತ್ರ ಉಳಿದಿದೆ. ಅದರ ಹೊರತಾಗಿ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಇನ್ನಾವುದೇ ಮಾರ್ಗಗಳಿಲ್ಲ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















