ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಭದ್ರಾವತಿ |
ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ವಿಐಎಸ್’ಎಲ್ VISL ಕಾರ್ಖಾನೆಯನ್ನು ರಾಜ್ಯ ಸರ್ಕಾರದ ಸುಪರ್ದಿಗೆ ಪಡೆದು, ಮರುಸ್ಥಾಪಿಸಬೇಕು ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ MLA Sangameshwar ಅವರು ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕಾರ್ಖಾನೆಯ ಅಭಿವೃದ್ಧಿ, ಉದ್ಯೋಗ ಸೃಷ್ಠಿ ಹಾಗೂ ಸಮಗ್ರ ಭದ್ರತೆಗಾಗಿ ಹಿಂದೆ ಕೇಂದ್ರ ಸರ್ಕಾರಕ್ಕೆ ವಹಿಸಿಕೊಡಲಾಗಿತ್ತು. ಆದರೆ, ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ನಿರ್ಮಿತವಾದ ಈ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಮುಚ್ಚಲು ಮುಂದಾಗಿರುವುದು ಖಂಡನೀಯ ವಿಚಾರ. ಹೀಗಾಗಿ, ಕೇಂದ್ರದ ಮೇಲೆ ಒತ್ತಡ ಹೇರಿ ಕಾರ್ಖಾನೆಯನ್ನು ರಾಜ್ಯ ಸರ್ಕಾರದ ಸುಪರ್ದಿಗೆ ಹಿಂಪಡೆದು, ಬಂಡವಾಳ ತೊಡಗಿಸಬೇಕು ಎಂದು ಒತ್ತಡ ಹೇರಿದರು.
ವಿಐಎಸ್’ಎಲ್ ಕಾರ್ಖಾನೆ ಕೇವಲ ಭದ್ರಾವತಿಯ ಆಸ್ತಿಯಲ್ಲ. ಅದು ಇಡಿಯ ರಾಜ್ಯ ಹಾಗೂ ಸರ್ಕಾರದ ಆಸ್ತಿ. ಹೀಗಾಗಿ, ರಾಜ್ಯ 244 ಶಾಸಕರೂ ಸಹ ಕಾರ್ಖಾನೆಯನ್ನು ಉಳಿಸಲು ಬೆಂಬಲ ನೀಡಬೇಕು. ಒಟ್ಟಾಗಿ ಸೇರಿ ಸರ್ಕಾರದ ಮೂಲಕ ಒಂದು ನಿರ್ಣಯ ಕೈಗೊಂಡು, ಕೇಂದ್ರದ ಮೇಲೆ ಒತ್ತಡ ಹೇರಬೇಕು. ಆ ಮೂಲಕ ಕಾರ್ಖಾನೆಯನ್ನು ಕೇಂದ್ರದಿAದ ರಾಜ್ಯ ಸರ್ಕಾರದ ಸುಪರ್ದಿಗೆ ಪಡೆದು, ಉತ್ಪಾದನೆಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.
Also read: ಆರ್’ಸಿಬಿ ತಂಡಕ್ಕೆ ಮೆಂಟರ್ ಆಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post