ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದಲ್ಲಿ Kumvempu University ಫೆ. 23ರಂದು ಡಿಜಿಟಲ್ ಪತ್ರಿಕೋದ್ಯಮದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಇತ್ತೀಚೆಗೆ ವಯೋನಿವೃತ್ತಿ ಹೊಂದಿದ ಪ್ರೊ. ಡಿ.ಎಸ್. ಪೂರ್ಣಾನಂದ ಅವರ ಗೌರವಾರ್ಥವಾಗಿ ವಿಭಾಗ ಮತ್ತು ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘಗಳು ಜಂಟಿಯಾಗಿ ಫೆ. 23ರಂದು ‘ಡಿಜಿಟಲ್ ಪತ್ರಿಕೋದ್ಯಮ: ಸವಾಲುಗಳು ಮತ್ತು ನಿರೀಕ್ಷೆಗಳು’ ವಿಷಯ ಕುರಿತು ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಿವೆ. ವಿಚಾರ ಸಂಕಿರಣದ ದಿಕ್ಸೂಚಿ ಭಾಷಣವನ್ನು ತಮಿಳುನಾಡಿನ ಗುಂಡಿಯಲ್ಲಿರುವ ಎಂಜಿನಿಯರಿಂಗ್ ಕಾಲೇಜಿನ ವಿದ್ಯುನ್ಮಾನ ಮತ್ತು ಬಹುಮಾಧ್ಯಮ ಸಂಶೋಧನ ಕೇಂದ್ರದ (ಇ.ಎಂ.ಆರ್.ಸಿ.) ನಿರ್ದೇಶಕ ಡಾ. ಅರುಲ್‌ಚೆಲ್ವನ್ ಶ್ರೀರಾಮ್ ಮಾಡಲಿದ್ದಾರೆ ಎಂದು ವಿಭಾಗದ ಪ್ರಕಟಣೆ ತಿಳಿಸಿದೆ.

ವಿಚಾರ ಸಂಕಿರಣಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುವ ಇ.ಎಂ.ಆರ್.ಸಿ. ನಿರ್ದೇಶಕ ಪ್ರೊ. ಅರುಲ್‌ಚೆಲ್ವನ್ ಶ್ರೀರಾಮ್ ‘ಪ್ರಾದೇಶಿಕ ಭಾಷೆಗಳಲ್ಲಿನ ಡಿಜಿಟಲ್ ಪತ್ರಿಕೋದ್ಯಮದ ಸ್ಥಿತಿಗತಿಗಳು’ ಹಾಗೂ ಈದಿನ ಸುದ್ದಿತಾಣದ ಮುಖ್ಯಸಂಪಾದಕರಾದ ಅಶೋಕ್ ರಾಮ್ ಡಿ. ಆರ್. ‘ಡಿಜಿಟಲ್ ಪತ್ರಿಕೋದ್ಯಮ ಕಲಿಕೆಯ ಸವಾಲುಗಳು’ ವಿಷಯ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ.












Discussion about this post