ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹೃದಯ ಭಾಗದಲ್ಲಿರುವ ಫ್ರೀಡಂಪಾರ್ಕ್ನಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಮತ್ತು ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿ ಇಂದು ರಾಜ್ಯ ನಾಗರೀಕರ ರಕ್ಷಣಾ ಸಮಿತಿ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಹೃದಯ ಭಾಗದಲ್ಲಿರುವ ಫ್ರೀಡಂ ಪಾರ್ಕ್ನಲ್ಲಿ ಪ್ರತಿನಿತ್ಯ ಸಾವಿರಾರು ಜನ ವಾಕಿಂಗ್ ಮಾಡುತ್ತಾರೆ ಈ ಸಂದರ್ಭದಲ್ಲಿ ಕನಿಷ್ಟ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲದ ವ್ಯವಸ್ಥೆ ಇಲ್ಲ. ನೋಡಲು ಕುಡಿಯುವ ನೀರಿನ ವ್ಯವಸ್ಥೆ ಇದ್ದು ಅದರಲ್ಲಿ ನೀರೆ ಬರುವುದಿಲ್ಲ ಹಾಗೂ ಶೌಚಾಲಯದ ನಿರ್ವಹಣೆ ಮಾಡುವವರು ಸರಿಯಾದ ಸಮಯಕ್ಕೆ ಶೌಚಾಲಯವನ್ನು ಓಪನ್ ಮಾಡುವ ಬದಲಾಗಿ ಇಚ್ಛೆ ಬಂದಾಗ ಮಾಡುತ್ತಾರೆ ಮತ್ತು ಫ್ರೀಡಂ ಪಾರ್ಕ್ಅಲ್ಲಿ ಕಾರ್ಯಕ್ರಮಗಳು ನಡೆದ ನಂತರ ಕನಿಷ್ಟ ಕಾರ್ಯಕ್ರಮವಾದ ಮರುದಿನ ಸ್ವಚ್ಛಗೊಳಿಸಲು ಕಾರ್ಯಕ್ರಮದ ಆಯೋಜಕರಿಗೆ ತಿಳಿಸಬೇಕು.

Also read: ದೇಶದ ಅಭಿವೃದ್ಧಿಗೆ ನಿರ್ವಹಣಾಶಾಸ್ತ್ರ ಜ್ಞಾನ ಅತಿಮುಖ್ಯ: ಶ್ರೀನಿವಾಸ್ ಅಭಿಪ್ರಾಯ
ಈ ಸಂದರ್ಭದಲ್ಲಿ ಸಂಸ್ಥಾಪಕರಾದ ಶಿವಮೊಗ್ಗ ವಿನೋದ್ ಅಧ್ಯಕ್ಷರಾದ ಕೆ ಶೇಖರ್ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪದಾಧಿಕಾರಿಗಳಾದ ಲಕ್ಷ್ಮೀಕಾಂತಪ್ಪ ರಮೇಶ್ ಚಂದನ್ ಹರ್ಷಿತ್ ಲೋಕೇಶ್ ಶರವಣ ಉಪಸ್ಥಿತರಿದ್ದರು.












Discussion about this post