ಕಲ್ಪ ಮೀಡಿಯಾ ಹೌಸ್ | ಸೊರಬ |
1990 ರಿಂದ ಈವರೆಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಿವಿಧ ಹಂತದಲ್ಲಿ ಹಲವು ವರ್ಷಗಳಿಂದ ಮಾಜಿ ಸೈನಿಕರ ಕೋಟಾದಡಿ ಕೃಷಿ ಭೂಮಿ ಮಂಜೂರು ಮಾಡಿ ಕೊಡುವಂತೆ ಹಲವಾರು ಬಾರಿ ಅರ್ಜಿಸಲ್ಲಿಸಿದ್ದರೂ ಈವರೆಗೂ ಯಾವುದೇ ಜಮೀನು ಮಂಜೂರಾತಿ ಆಗದೆ ಇರುವುದು ಬೇಸರದ ಸಂಗತಿ ಎಂದು ಮಾಜಿ ಯೋಧರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಹೆಚ್. ತಿಳಿಸಿದರು.
ಅವರು ಇಂದು ತಾಲ್ಲೂಕು ಕಛೇರಿಯಲ್ಲಿ ತಹಶೀಲ್ದಾರ್‌ರವರಿಗೆ ಮನವಿ ಅರ್ಪಿಸಿ ಮಾಧ್ಯಮದ ರೊಂದಿಗೆ ಮಾತನಾಡಿದರು. ಭಾರತದ ಗಡಿ ಭಾಗಗಳಲ್ಲಿ ಹವಾಮಾನ ವೈಪರೀತ್ಯದ ನಡುವೆಯೂ ಸೇವೆಸಲ್ಲಿಸಿದ ನಮಗೆ ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಕೂಡಾ ಜಮೀನು ಮಂಜೂರಾತಿ ಮಾಡದೇ ಇರುವುದು ಛೇದಕರ ಸಂಗತಿ. ಸಂಬಂಧವಿಲ್ಲದ ವಿಷಯ ಮುಂದಿಟ್ಟು ವಿಳಂಬ ನೀತಿ ಅನುಸರಿಸುತ್ತಿರುವುದು ದೇಶದ ಕಾವಲುಗಾರರಾಗಿ ಸೇವೆ ಸಲ್ಲಿಸಿದ ನಮಗೆ ಅವಮಾನ ಮಾಡಿದಂತಾಗಿದೆ ಎಂದರು.
ತಾಲ್ಲೂಕು ಆಡಳಿತ ಈ ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ ಸರ್ಕಾರದ ಆದೇಶದಂತೆ ಈ ಕೂಡಲೆ ನಿವೃತ್ತ ಯೋಧರಿಗೆ ಜಮೀನು ಮಂಜೂರಾತಿ ಮಾಡಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಖಜಾಂಚಿ ಅಲೆಕ್ಸಾಂಡರ್ ಡಿಸೋಜ, ಸದಸ್ಯರು ಗಳಾದ ಜಗದೀಶ್, ಕಾಂತೇಶ್ ಮತ್ತಿತರರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















