ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೂತನ ವಿಮಾನ ನಿಲ್ದಾಣದ ಲೋಕಾರ್ಪಣೆಗಾಗಿ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು, ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಅವರ ಭದ್ರತಾಪಡೆಗಳು ಆಗಮಿಸಿವೆ.
ಇಂದು ಮಧ್ಯಾಹ್ನದ ವೇಳೆಗೆ ಭಾರತೀಯ ವಾಯುಪಡೆಯ ಇಲ್ಯೂಷನ್ 76 ವಿಶೇಷ ವಿಮಾನವನ್ನು ನೂತನ ರನ್ ವೇನಲ್ಲಿ ಇಳಿಸುವ ಮೂಲಕ ರನ್ ವೇ ಪರೀಕ್ಷೆಯನ್ನು ನಡೆಸಲಾಯಿತು.
ವಾಯುಸೇನೆಯ ಈ ಕ್ಯಾರಿಯರ್ ವಿಮಾನದಲ್ಲಿ ಪ್ರಧಾನಿಯವರು ಕುಳಿತುಕೊಳ್ಳುವ ಕಾರು ಸೇರಿದಂತೆ ಒಟ್ಟು ನಾಲ್ಕು ಕಾರುಗಳು ಆಗಮಿಸಿವೆ. ಅಲ್ಲದೆ, ಪ್ರಧಾನಿಯವರ ಭದ್ರತಾ ಹೊಣೆ ಹೊತ್ತಿರುವ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್ಪಿಜಿ) SPG ಹಾಗೂ ಅಧಿಕಾರಿ ಸಿಬ್ಬಂದಿಗಳು ಸಹ ಆಗಮಿಸಿದ್ದು, ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಪ್ರಧಾನಿಯವರು ವೀಕ್ಷಿಸುವ ನೂತನ ಟರ್ಮಿನಲ್ನನ್ನು ಪರಿಶೀಲಿಸಿದ ಭದ್ರತಾ ಪಡೆ ವಿಮಾನ ನಿಲ್ದಾಣದತ್ತ ಕೈಗೊಳ್ಳಲಾಗಿರುವ ಭದ್ರತಾ ವ್ಯವಸ್ಥೆಯನ್ನು ಸಹ ಪರಿಶೀಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post