ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ವರ್ಷಿಣಿ ಯೋಗ ಎಜುಕೇಷನ್ ಮತ್ತು ಸ್ಪೋರ್ಟ್‌ರಸ ಟ್ರಸ್ಟ್ ವತಿಯಿಂದ ವಾಸವಿ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಯೋಗ ಪ್ರದರ್ಶನ ಸ್ಪರ್ಧೆಯಲ್ಲಿ ಶ್ರೀ ಕೃಷ್ಣ ಯೋಗ ಮಂದಿರದ ಯೋಗ ಪಟುಗಳು ವಿವಿಧ ಬಹುಮಾನ ಗಳಿಸಿ, ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿವಿಧ ವಿಭಾಗಗಳಲ್ಲಿ ಬಹುಮಾನ ಗಳಿಸಿದ ವಿಕಾಸ ಶಾಲೆಯ ವಿವಾನ್ ಆರ್. ಜಮದಗ್ನಿ, ರಾಘ್ನಿ ಆರ್. ಜಮದಗ್ನಿ, ಜ್ಞಾನದೀಪ ಶಾಲೆಯ ಆಶಿಶ್ ಎಸ್.ಆರ್, ಸಿ.ಆರ್. ಮೋನಿಕಾ, ಪೂಜಾ ಡಾ. ರಾಜೇಶ್ ಅವರು ದುಬೈನಲ್ಲಿ ಮೇ ತಿಂಗಳು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದು, ಸಂಸ್ಥೆಯ ಯೋಗ ಚಿಕಿತ್ಸಕರಾದ ರಾಜಶ್ರೀ ರಘು ಅವರು ಶುಭ ಕೋರಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















