ಕಲ್ಪ ಮೀಡಿಯಾ ಹೌಸ್ | ಗಾಜಿಯಾಬಾದ್ |
ಗೀಸರ್’ನಿಂದ ಗ್ಯಾಸ್ ಸೋರಿಕೆಯಾದ ಪರಿಣಾಮ ದಂಪತಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಮೃತರನ್ನು ದೀಪಕ್ ಗೋಯಲ್ ಹಾಗೂ ಶಿಲ್ಪ ಎಂದು ಗುರುತಿಸಲಾಗಿದೆ.
ಈ ದಂಪತಿ ಇಲ್ಲಿನ ಅಗ್ರಸೇನ್ ಮಾರುಕಟ್ಟೆ ಪ್ರದೇಶದಲ್ಲಿ ವಾಸವಿದ್ದರು. ಹೋಳಿ ಹಬ್ಬದ ಸಂಭ್ರಮದಲ್ಲಿ ಆಡಿದ್ದ ದಂಪತಿ ಸ್ನಾನಕ್ಕೆ ತೆರಳಿ ಗೀಸರ್ ಆನ್ ಮಾಡಿದ್ದಾರೆ. ಈ ವೇಳೆ ಗ್ಯಾಸ್ ಲೀಕ್ ಆದ ಪರಿಣಾಮ ಉಸಿರುಗಟ್ಟಿ ದಂಪತಿ ಸಾವನ್ನಪ್ಪಿದ್ದಾರೆ.
ಸ್ನಾನಕ್ಕೆ ಹೋದ ತಂದೆ ತಾಯಿ ಬಹಳ ವೇಳೆಯಾದರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಮಕ್ಕಳು ಗಾಬರಿಗೊಂಡು ಕೂಗಿಕೊಂಡಿದ್ದಾರೆ. ವಿಷಯ ತಿಳಿದ ಅಕ್ಕಪಕ್ಕದವರು ಹಾಗೂ ಕುಟುಂಬಸ್ಥರು ಬಂದು ಪರಿಶೀಲಿಸಿದಾಗ ಗೀಸರ್ ಆನ್ ಆಗಿದ್ದು, ಇಬ್ಬರೂ ಉಸಿರುಗಟ್ಟಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
Also read: ಅಯ್ಯೋ ದೇವರೇ! ಹೊತ್ತಿ ಉರಿದ ಬಿಎಂಟಿಸಿ ಬಸ್: ಕಂಡಕ್ಟರ್ ಸಜೀವ ದಹನ
ತತಕ್ಷಣ ದಂಪತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ವೇಳೆಗಾಗಲೇ ಇಬ್ಬರೂ ಮೃತಪಟ್ಟಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















