ಕಲ್ಪ ಮೀಡಿಯಾ ಹೌಸ್ | ಬಂಟ್ವಾಳ |
ಬೈಕ್’ವೊಂದಕ್ಕೆ ಕಾರು ಹಿಂಬದಿಯಿಂದದ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿಗೆ ಸಮೀಪದ ರಾಯಿ ಎಂಬಲ್ಲಿ ನಡೆದಿದೆ.
ಸಿದ್ದಕಟ್ಟೆಯಿಂದ ಬಂಟ್ವಾಳ ಕಡೆ ಬರುತ್ತಿದ್ದ ವೇಳೆ ವೇಳೆಗೆ ರಾಯಿ ಎಂಬಲ್ಲಿ ಹಿಂಬದಿಯಿAದ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳಿತಿದ್ದ ಸವಾರ ಚಂದ್ರಶೇಖರ ಅವರು ರಸ್ತೆಗೆ ಹಾರಿ ಬಿದ್ದು ಸಾವನ್ನಪ್ಪಿದ್ದಾರೆ.

Also read: ನೀರನ್ನು ಉಳಿಸಲು ಕೆರೆ ಕಟ್ಟೆಗಳು ಅಭಿವೃದ್ಧಿ ಅತಿ ಮುಖ್ಯ: ಡಾ. ಧನಂಜಯ ಸರ್ಜಿ
ಕಾರು ಚಾಲಕನ ಅತಿ ವೇಗದ ಚಾಲನೆಯೇ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.











Discussion about this post