ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮಾರ್ಚ್ ತಿಂಗಳಿನಲ್ಲೇ ಬೇಸಿಗೆಯ ಬಿಸಿಗೆ ಬಳಲಿದ್ದ ಉಕ್ಕಿನ ನಗರಿಗೆ ಮಳೆರಾಯ ಇಂದು ತಂಪನೆರೆದಿದ್ದಾನೆ.
ಇಂದು ಸಂಜೆ 5.20 ರಿಂದ ಸುಮಾರು ಅರ್ಧ ಗಂಟೆ ಕಾಲ ನಗರದಲ್ಲಿ ಮಳೆ ಸುರಿದಿದೆ. ಕಾದ ಭೂಮಿಯ ಮೇಲೆ ಬಿದ್ದ ಮಳೆನೀರು ಸುವಾಸನೆ ಸೂಸುತ್ತಿತ್ತು.
ನಗರ ಹಾಗೂ ಗ್ರಾಮಾಂತರ ಭಾಗದ ಹಲವು ಕಡೆ ಸಂಜೆ ಮಳೆ ಸುರಿದಿದೆ. ನಿನ್ನೆಯೇ ನಗರದಲ್ಲಿ ಮೋಡ ಮುಸುಕಿ ಮಳೆಯ ವಾತಾವರಣ ಇತ್ತು. ಆದರೆ ಇಂದು ಮಳೆಯಾಗಿದೆ.
ಕೊಡಗು, ಹಾಸನದ ಕೆಲವು ಭಾಗ ಸೇರಿದಂತೆ ರಾಜ್ಯದ ಹಲವು ಕಡೆ ನಿನ್ನೆ ಮಳೆಯಾಗಿತ್ತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















