ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಬ್ರಾಹ್ಮಣ ಮಹಾಸಭಾದ (ಪ್ರಾಯೋಜಿತ) ವತಿಯಿಂದ ಎನ್.ಆರ್.ಪುರ ರಸ್ತೆಯ ಮಂಡೇನಕೊಪ್ಪದಲ್ಲಿ ಸುರಭಿ ಗೋಶಾಲಾ ವಿಸ್ತರಣಾ ಕಟ್ಟಡದ ಪ್ರವೇಶೋತ್ಸವವನ್ನು ಮಾ.26ರ ಸಂಜೆ 6ಗಂಟೆಗೆ ಆಯೋಜಿಸಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಸಿ. ನಟರಾಜ ಭಾಗವತ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋಶಾಲೆಯಲ್ಲಿ ಹಸುಗಳ ಸಂಖ್ಯೆ ಹೆಚ್ಚುತ್ತಿದೆ. ಸುಮಾರು 150ರಷ್ಟು ಹಸುಗಳು ಈಗಿವೆ. ಇದರಿಂದ ವಿಸ್ತೃತ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದರು.
ಜಿಲ್ಲಾ ಬ್ರಾಹ್ಮಣ ಮಹಾಸಭಾದ ವತಿಯಿಂದ ಗೋವುಗಳ ರಕ್ಷಣೆ ಕಾರ್ಯ ನಡೆಯುತ್ತಿದೆ. ಈಗಾಗಲೇ ಗೋಶಾಲೆಯಲ್ಲಿ ಹಲವು ಗೋವುಗಳನ್ನು ಸಂರಕ್ಷಿಸಿ ಕಾಪಾಡಲಾಗುತ್ತಿದೆ. ಮುಂದುವರಿದ ಭಾಗವಾಗಿ ಗೋಶಾಲೆ ವತಿಯಿಂದ ಗೋ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇವುಗಳನ್ನು ಕರೀದಿಸಿ ಗೋ ಶಾಲೆಗೆ ಬೆಂಬಲ ನೀಡಬೇಕು. ರಾಜ್ಯ ಸರ್ಕಾರ ಕೂಡ ಕೆಲವು ಮಾದಕ ವಸ್ತುಗಳ ಮೇಲೆ ವಿಧಿಸಿದ ತೆರಿಗೆಯ ಸ್ವಲ್ಪ ಹಣವನ್ನು ಗೋಶಾಲೆಗಳಿಗೆ ನೀಡಿ ಪ್ರೋತ್ಸಾಹಿಸಬೇಕು ಎಂದರು.
ಸುರಭಿ ಗೋಶಾಲಾ ವಿಸ್ತರಣಾ ಕಟ್ಟಡದ ಉದ್ಘಾಟನೆಯನ್ನು ಮಾ.26ರ ಸಂಜೆ 6 ಗಂಟೆಗೆ ಗೃಹಸಚಿವ ಆರಗ ಜ್ಞಾನೇಂದ್ರ, ಶಾಸಕ ಕೆ.ಎಸ್. ಈಶ್ವರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ನೆರವೇರಿಸುವರು. ಕಾರ್ಯಕ್ರಮದಲ್ಲಿ ಶಾಸಕರುಗಳಾದ ಆಯನೂರು ಮಂಜುನಾಥ್, ರುದ್ರೇಗೌಡ, ಡಿ.ಎಸ್. ಅರುಣ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಗೋರಕ್ಷಣಾ ನ್ಯಾಸ ಸಮಿತಿಯ ಎಂ.ಬಿ. ಭಾನುಪ್ರಕಾಶ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಮುಂತಾದವರು ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವೆಂಕಟೇಶ್ ಮೂರ್ತಿ, ಕೇಶವಮೂರ್ತಿ, ಶಂಕರನಾರಾಯಣ, ಕುಮಾರ ಶಾಸ್ತ್ರಿ, ಸೂರ್ಯನಾರಾಯಣ, ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















