ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚುನಾವಣೆಗೂ ಮುನ್ನ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಲಿಂಗಾಯತ ಸಮುದಾಯಕ್ಕೆ ಶೇ.7ರಷ್ಟು ಹಾಗೂ ದಲಿತರಿಗೆ ಒಳಮೀಸಲಾತಿ ನೀಡುವ ಘೋಷಣೆ ಮಾಡಿದೆ.
ಈ ಕುರಿತಂತೆ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai, ಆರ್ಟಿಕಲ್ 341 ಅನ್ವಯದಲ್ಲಿ ವರ್ಗೀಕರಣ ಮಾಡಿದ ಹಿಂದುಗಳಿದ ವರ್ಗಗಳಿಗೆ ಮೀಸಲಾತಿ ಘೋಷಣೆ ಮಾಡಲಾಗಿದೆ ಎಂದರು.
ಪ್ರಮುಖವಾಗಿ ಮುಸ್ಲೀಮರಿಗಿದ್ದ 2ಬಿ ಅಡಿ ಶೇ.4ರಷ್ಟಿದ್ದ ಮೀಸಲಾತಿಯನ್ನು ರದ್ದುಪಡಿಸಲಾಗಿದ್ದು, ಇವರನ್ನು ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಸೇರಿಸಲಾಗಿದೆ. ಇದೇ ವೇಳೆ ದಲಿತ ಸಮುದಾಯದ 102 ಒಳ ಪಂಗಡಗಳಿಗೆ ಮೀಸಲಾತಿ ನೀಡಲಾಗಿದೆ.
ಯಾರಿಗೆ ಎಷ್ಟು ಮೀಸಲಾತಿ?
ಲಿಂಗಾಯತ ಸಮುದಾಯಕ್ಕೆ ಶೇ. 7
ಒಕ್ಕಲಿಗೆ ಸಮುದಾಯಕ್ಕೆ ಶೇ.6
ದಲಿತ ಬಲ ಸಮುದಾಯಕ್ಕೆ ಶೇ.5.5
ದಲಿತ ಎಡ ಸಮುದಾಯಕ್ಕೆ ಶೇ.6
ದಲಿತ ಅಲೆಮಾರಿ ಸಮುದಾಯಕ್ಕೆ ಶೇ.1
ಆರ್ಥಿಕ ಹಿಂದುಳಿದ ಸಮುದಾಯಕ್ಕೆ ಶೇ.10
ಆರ್ಥಿಕ ಹಿಂದುಳಿದ ವರ್ಗಗಳಿಗೆ ಮುಸ್ಲೀಮರ ಸೇರ್ಪಡೆ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















