ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ರಾಜಧಾನಿಯ ಬಹುನಿರೀಕ್ಷಿತ ಕೆಆರ್ ಪುರಂ – ವೈಟ್ ಫೀಲ್ಡ್ ನಡುವಿನ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ವಿದ್ಯಾರ್ಥಿಗಳೊಂದಿಗೆ ಸಂಚಾರ ಮಾಡಿ, ಮಾತುಕತೆ ನಡೆಸಿದರು.
ರೈಲು ಉದ್ಘಾಟಿಸಿದ ನಂತರ ನಾಲ್ಕು ಕಿಮೀವರೆಗೂ ಮೆಟ್ರೋದಲ್ಲಿ ಪ್ರಯಾಣ ಮಾಡಿದರು. ಮೆಟ್ರೋ ರೈಲು ಸಂಚಾರದ ವೇಳೆ ಮೋದಿಯವರು ಮೆಟ್ರೋ ಸಿಬ್ಬಂದಿಗಳು, ಮಕ್ಕಳು, ವಿದ್ಯಾರ್ಥಿಗಳ ಜೊತೆಗೆ ಮಾತುಕತೆ ನಡೆಸಿದರು.
ಮೆಟ್ರೋ ರೈಲು ಸಂಚಾರಕ್ಕೆ ಉದ್ಘಾಟನೆ ಬಳಿಕ ನಿಲ್ದಾಣದಲ್ಲಿದ್ದ ಗ್ಯಾಲರಿಗೆ ತೆರಳಿದ ಸುತ್ತಲೂ ಓಡಾಡಿ ಅಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿದರು. ಬಳಿಕ ಟಿಕೆಟ್ ಕೌಂಟರ್’ಗೆ ಟೋಕನ್ ಖರೀದಿಸಿದರು. ಈ ವೇಳೆ ಭಾರತಿ ಎಸ್. ಅಯ್ಯರ್ ಅವರು ಮೋದಿಯವರಿಗೆ ಟಿಕೆಟ್ ಹಸ್ತಾಂತರಿಸಿದರು.
Also read: ಪಂಚಗವ್ಯ ಚಿಕಿತ್ಸೆಯಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ: ಡಾ. ರಮೇಶ್
ಕಾಡುಗೋಡಿಯಿಂದ ಸತ್ಯ ಸಾಯಿ ಆಸ್ಪತ್ರೆಗೆ ತೆರಳಲು ಮೋದಿಯವರು ಮಧ್ಯಾಹ್ನ 1 ಗಂಟೆ ಸುಮಾರಿಗೆ ರೈಲು ಹತ್ತಿದರು. ಈ ವೇಳೆ ರೈಲನ್ನು ಮಹಿಳಾ ಲೋಕೋ ಪೈಲಟ್ ಪಿ. ಪ್ರಿಯಾಂಕಾ ಅವರು ಚಲಾಯಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post