ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಪ್ರ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 41ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಹೊಸ ದಾಖಲೆಗೆ ಸಾಕ್ಷಿಯಾಗಿದೆ.
ಬೈಲಾ ತಿದ್ದುಪಡಿ ಪ್ರಸ್ತಾಪಕ್ಕೆ ಅನುಮೋದನೆ ದೊರೆತಿದ್ದು, ಸಭಾದ ಅಧ್ಯಕ್ಷರ ಅಧಿಕಾರ ಅವಧಿ 3 ವರ್ಷದಿಂದ 5 ವರ್ಷಕ್ಕೆ ಏರಿಕೆಯಾಗಿರುವುದು ವಿಶೇಷವಾಗಿದೆ.
ಬಸವನಗುಡಿಯ ಆಚಾರ್ಯ ಪಾಠಶಾಲಾ ಕಾಲೇಜು ಆವರಣದಲ್ಲಿ ಭಾನುವಾರ ನಡೆದ ವಿಶೇಷ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಪ್ರಸ್ತಾಪಿತ ಬೈಲಾ ತಿದ್ದುಪಡಿಗಳಿಗೆ ಅನುಮೋದನೆ ಪಡೆಯಲಾಯಿತು. ಕೆಲ ಸದಸ್ಯರ ವಿರೋಧದ ನಡುವೆಯೂ ಅಧಿಕಾರ ಅವಧಿ ಹೆಚ್ಚಳವನ್ನು ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಈ ಸಂದರ್ಭ ಮಾತನಾಡಿದ ಅಶೋಕ ಹಾರನಹಳ್ಳಿ, ಬೈಲಾ ತಿದ್ದುಪಡಿ ತರುವ ಕುರಿತು ಕಳೆದ ವರ್ಷ ನಡೆದ ಚುನಾವಣೆ ವೇಳೆಯೇ ಭರವಸೆಯನ್ನು ನಾವು ನೀಡಿದ್ದೆವು. ಅದರ ಪ್ರಕಾರವೇ ಕಾರ್ಯಕಾರಿ ಸಮಿತಿಯ ಸಭೆಯಲ್ಲೂ ಚರ್ಚಿಸಿದ್ದೆವು. ಹೀಗಾಗಿ ಸರ್ವ ಸದಸ್ಯರ ವಿಶೇಷ ಸಭೆ ಕರೆದು ಬೈಲಾ ತಿದ್ದುಪಡಿ ಪ್ರಸ್ತಾಪಕ್ಕೆ ಅನುಮೋದನೆ ಪಡೆದಿದ್ದೇವೆ ಎಂದು ವಿವರಿಸಿದರು.
ಶುಲ್ಕ ಏರಿಕೆಯಾಯಿತು
ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಶುಲ್ಕವನ್ನು 10 ಸಾವಿರ ರೂ. ನಿಂದ 50 ಸಾವಿರ ರೂ.ಗೆ ಹೆಚ್ಚಿಸಲು ಇದೇ ಸಂದರ್ಭ ತೀರ್ಮಾನ ತೆಗೆದುಕೊಳ್ಳಲಾಯಿತು. ಇದು ಸರಿಯಲ್ಲ ಎಂಬ ಆಕ್ಷೇಪ ಸಭೆಯಲ್ಲಿ ಹಲವರಿಂದ ವ್ಯಕ್ತವಾಯಿತು. ಯಾವ ವಿರೋಧಗಳನ್ನೂ ಲೆಕ್ಕಿಸದೇ ಶುಲ್ಕ ಹೆಚ್ಚಳಕ್ಕೆ ಅನುಮೋದನೆ ಪಡೆದದ್ದು ಗಮನಾರ್ಹ ಸಂಗತಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post