ಕಲ್ಪ ಮೀಡಿಯಾ ಹೌಸ್ | ಕ್ಯಾಲಿಫೋರ್ನಿಯಾ |
ಅಮೆರಿಕಾದಲ್ಲಿ ಸಿಖ್ಖರ ಧಾರ್ಮಿಕ ಸ್ಥಳವೆನಿಸಿದ ಗುರುದ್ವಾರದಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಕೌಂಟಿಯಲ್ಲಿರುವ ಗುರುದ್ವಾರ ಸ್ಯಾಕ್ರಮೆಂಟೊ ಸಿಖ್ ಸೊಸೈಟಿಯಲ್ಲಿ ಭಾನುವಾರ ಮಧ್ಯಾಹ್ನ 2:30ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಇದು ದ್ವೇಷಕ್ಕೆ ಸಂಬಂಧಿಸಿ ನಡೆದ ದಾಳಿಯಲ್ಲ. ಇದು ಒಬ್ಬರಿಗೊಬ್ಬರು ತಿಳಿದಿರುವ ವ್ಯಕ್ತಿಗಳ ಮಧ್ಯೆ ನಡೆದ ಗುಂಡಿನ ಚಕಮಕಿ ಎಂದು ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ ಎಂದು ಸ್ಥಳಿಯ ಸುದ್ಧಿ ಸಂಸ್ಥೆ ವರದಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post