ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಲಿ-ಕಲಿ ಕ್ರಿಯಾಶೀಲ ತಾರೆಯರ ತಂಡದ ಸಹಕಾರದಲ್ಲಿ ಜಿಲ್ಲೆಯ ಆರು ಸರ್ಕಾರಿ ಶಾಲೆಗಳಿಗೆ ಟೇಬಲ್ ಮತ್ತು ನಲಿ-ಕಲಿ ಪರಿಕರಗಳನ್ನು ನೀಡಲಾಯಿತು.
ಬಿ.ಬಿ. ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೆಂಗಳೂರಿನ ಅಲೇಜಿಯನ್ ಸಂಸ್ಥೆಯವರು ಆರ್.ಕೆ. ಫೌಂಡೇಷನ್ ಮೂಲಕ ಸೀಗೇಹಟ್ಟಿ, ಕಾನಗೋಡು, ಜನತಾ ಕಾಲೋನಿ, ಉಳ್ಳೂರು, ಗುತ್ಯಪ್ಪ ಕಾಲೋನಿ ಶಾಲೆಗಳಿಗೆ ಟೇಬಲ್ ಮತ್ತು ಮಕ್ಕಳಿಗೆ ಕುಳಿತುಕೊಳ್ಳಲು ಮ್ಯಾಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ, ನಲಿ-ಕಲಿ ಕ್ರಿಯಾಶೀಲ ತಾರೆಯರ ತಂಡದ ಎಂ. ಭಾಗೀರಥಿ, ಪವಿತ್ರ, ಫೌಜಿಯಾ ಶರಾವತ್ ಮಾತನಾಡಿ, ಸರ್ಕಾರಿ ಶಾಲೆಗಳು ಮತ್ತಷ್ಟು ಬಲವರ್ಧನೆಯಾಗಬೇಕು. ಸಂಘ-ಸಂಸ್ಥೆ ಮತ್ತು ಸರ್ಕಾರ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ನಲಿ-ಕಲಿ ತಂಡ ದಾನಿಗಳ ಮೂಲಕ ಫೌಂಡೇಷನ್‌ಗಳ ಮೂಲಕ ಶಾಲೆಗಳಿಗೆ ಕಲಿಕಾ ಪರಿಕರಗಳನ್ನು ಕೊಡಿಸುವ ಕೆಲಸವನ್ನು ಮಾಡುತ್ತದೆ. ಈ ಸಾಮಗ್ರಿಗಳನ್ನು ನೀಡಿದ ಆರ್.ಕೆ. ಫೌಂಡೇಷನ್‌ಗೆ ನಮ್ಮ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಮತ್ತಷ್ಟು ಸರ್ಕಾರಿ ಶಾಲೆಗಳಿಗೆ ಫಲಾನುಭವ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಬೇಬಿ ಷಡಕ್ಷರಿ, ಎಸ್‌ಡಿಎಂಸಿ ಅಧ್ಯಕ್ಷ ಅಮೀರ್ ಪಾಶ ಮುಂತಾದವರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















