No Result
View All Result
PESITM hosts Mock CET 2026 to Strengthen KCET Preparation
English Articles

PESITM hosts Mock CET 2026 to Strengthen KCET Preparation

by ಕಲ್ಪ ನ್ಯೂಸ್
March 31, 2026
0

Kalpa Media House  |  Shivamogga  | PES Institute of Technology and Management #PESITM conducted Mock CET 2026 on March 30...

Read moreDetails
India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

March 30, 2026
SWR to run special trains for Good Friday, Easter rush

SWR to run special trains for Good Friday, Easter rush

March 30, 2026
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಪಿಆರ್‌ಓ ಪ್ರವೀಣ್ ಅಧಿಕಾರ ಸ್ವೀಕಾರ

South Western Railway | Praveen Takes Charge as Hubballi Divisional Public Relations Officer

March 28, 2026
26 ವರ್ಷದ ಯುವಕನಿಗೆ ಮರುಜೀವ ಕೊಟ್ಟ ಮೆಡಿಕವರ್ ಆಸ್ಪತ್ರೆ | ಏನಾಗಿತ್ತು ಯುವಕನಿಗೆ?

Critical Condition Turned Around with Timely Medical Intervention

March 27, 2026
  • Advertise With Us
  • Grievances
  • About Us
  • Contact Us
Tuesday, March 31, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮಂಡ್ಯ

ಮಹದೇವಪುರದ ಅಸ್ಮಿತೆ – ಶ್ರೀ ಕಾಶಿ ವಿಶ್ವನಾಥಸ್ವಾಮಿ ರಥೋತ್ಸವದ ಆಚರಣೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 7, 2023
in ಮಂಡ್ಯ
0
ಮಹದೇವಪುರದ ಅಸ್ಮಿತೆ – ಶ್ರೀ ಕಾಶಿ ವಿಶ್ವನಾಥಸ್ವಾಮಿ ರಥೋತ್ಸವದ ಆಚರಣೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಮಂಡ್ಯ |

ಶೂಟಿಂಗ್ ಮಹದೇವಪುರ ಎಂದೇ ಪ್ರಸಿದ್ಧಿ ಪಡೆದಿರುವ ನಮ್ಮ ಊರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿದೆ. ಕಾವೇರಿ ನದಿ, ರಾಜರಾಜೇಶ್ವರಿ ಅಣೆಕಟ್ಟು, ಶ್ರೀ ಕಾಶಿ ವಿಶ್ವನಾಥಸ್ವಾಮಿ, ವೆಂಕಟೇಶ್ವರ ಸ್ವಾಮಿ, ಸಿದ್ದಪ್ಪಾಜಿ, ಚಿಕ್ಕಮ್ಮ ಚಿಕ್ಕದೇವಿ, ಪಟ್ಟಲದಮ್ಮ, ಮಾರಮ್ಮ, ಕಾವೇರಿ ಬೋರೆ ದೇವರು ಮುಂತಾದ ದೇವರ ದೇವಾಲಯಗಳು, ಐತಿಹಾಸಿಕ ಬಂಗಲೆ, ಹಚ್ಚಹಸಿರಾಗಿ ಕಂಗೊಳಿಸುವ ಕೃಷಿಭೂಮಿ, ರಮ್ಯ ರಮಣೀಯ ಪ್ರಕೃತಿ ಸೌಂದರ್ಯ ಹೀಗೆ ಮುಂತಾದ ವಿಶೇಷತೆಗಳನ್ನು ಒಳಗೊಂಡಿರುವ ನಮ್ಮೂರು ಒಂದು ಅತ್ಯುತ್ತಮ ಪ್ರವಾಸಿ ತಾಣವಾಗಲು ಎಲ್ಲಾ ಅರ್ಹತೆಯನ್ನು ಹೊಂದಿದೆ.

ಅದರಲ್ಲೂ ಈ ಎಲ್ಲಾ ವಿಶೇಷತೆಗಳ ಮಧ್ಯೆ ಸೂರ್ಯನಂತೆ ಪ್ರಕಾಶಮಾನವಾಗಿ ಕಂಗೊಳಿಸುವುದು ನಮ್ಮ ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನ. 600ಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ದೇವಸ್ಥಾನವು ಹಿಂದೂಗಳ ಅತ್ಯಂತ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಕಾಶಿಗೆ ಪೂರ್ವಾಭಿಮುಖವಾಗಿರುವ ಏಕೈಕ ದೇವಾಲಯ ಎಂದು ಹಿರಿಯರು ಹೇಳುತ್ತಾರೆ. ಹಾಗೆಯೇ ಕಾಶಿಯ ವಿಶ್ವನಾಥಸ್ವಾಮಿಯೇ ನಮ್ಮ ಊರಿನಲ್ಲಿ ಪೂಜಿಸಲ್ಪಡುವುದರಿಂದ ಕಾಶಿಗೂ ಈ ಸ್ಥಳಕ್ಕೂ ಒಂದು ಅವಿನಾಭಾವ ಸಂಬಂಧ ಇದೆ ಎಂಬ ಮಾತು ಚಾಲ್ತಿಯಲ್ಲಿದೆ. ಕಾಶಿಯ ಗಂಗಾ ನದಿಯ ತೀರದಲ್ಲಿ ವಿಶ್ವನಾಥಸ್ವಾಮಿಯ ದೇವಸ್ಥಾನ ಇರುವಂತೆ ನಮ್ಮ ಊರಿನ ಕಾವೇರಿ ನದಿಯ ತೀರದಲ್ಲೂ ವಿಶ್ವನಾಥಸ್ವಾಮಿಯ ದೇವಸ್ಥಾನವಿದೆ. ಇದರ ಕುರಿತು ಹೆಚ್ಚಿನ ಸಂಶೋಧನೆಗಳಾಗಬೇಕಿದೆ.
ಪ್ರತೀ ವರ್ಷವೂ ಜರುಗುವ ಶ್ರೀ ಕಾಶಿ ವಿಶ್ವನಾಥಸ್ವಾಮಿ ರಥೋತ್ಸವವು ನಮ್ಮ ಊರಿನಲ್ಲಿ ನಡೆಯುವ ಬೇರೆಲ್ಲಾ ಹಬ್ಬ, ಮಹೋತ್ಸವಗಳಿಗಿಂತ ಹೆಚ್ಚು ಐತಿಹಾಸಿಕ ಹಾಗೂ ಉತ್ಸಾಹ ಪೂರ್ವಕ. ಈ ರಥೋತ್ಸವಕ್ಕೆ ಸಂಬಂಧಿಸಿದಂತೆ ಅನೇಕ ಉತ್ಸವಗಳು ಜರುಗುತ್ತವೆ. ಅವುಗಳೆಂದರೆ ಪುಣ್ಯಾಹ ಗಣಪತಿ ಪೂಜೆ ಮೂಲದೇವರ ಪ್ರಾರ್ಥನೆ, ಗಿರಿಜಾ ಕಲ್ಯಾಣೋತ್ಸವ, ಬ್ರಹ್ಮ ರಥೋತ್ಸವ ಅನ್ನ ಸಂತರ್ಪಣೆ, ಆಶ್ವಾರೋಹಣೋತ್ಸವ ಶಯನೋತ್ಸವ, ಅವಭೃತ ತೀರ್ಥಸ್ನಾನ, ತೆಪ್ಪೋತ್ಸವ, ಮಹಾಸಂಪ್ರೋಕ್ಷಣ ಕೈಲಾಸ ವಾಹನೋತ್ಸವ, ಮಹಾಭಿಷೇಕ ನಂದಿ ವಾಹನೋತ್ಸವ. ರಥೋತ್ಸವದ ಹಿಂದಿನ ದಿನದ ರಾತ್ರಿ ಗಿರಿಜಾ ಕಲ್ಯಾಣೋತ್ಸವವನ್ನು ಮಾಡಲಾಗುತ್ತದೆ. ಬಾದರಾಯನಪುರ ಪುಣ್ಯಕ್ಷೇತ್ರವಾದ ಮಹದೇವಪುರದಲ್ಲಿ ನೆಲೆಸಿರುವ ಶ್ರೀ ಕಾಶಿ ವಿಶ್ವನಾಥಸ್ವಾಮಿ ಅವರಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಅವರನ್ನು ವಿವಾಹವಾಗುವಂತೆ ಕೇಳಿಕೊಂಡು, ಎಲ್ಲಾ ಹಿಂದೂ ಶಾಸ್ತ್ರಗಳನುಸಾರ ಗಿರಿಜಾ ಕಲ್ಯಾಣೋತ್ಸವವನ್ನು ನೆರವೇರಿಸಲಾಗುತ್ತದೆ. ನಂತರ ಕಲ್ಯಾಣೋತ್ಸವದ ಅಕ್ಷತೆಯನ್ನು ವಿವಾಹವಯಸ್ಕರಾಗಿರುವವರಿಗೆ ನೀಡಿ ಉತ್ತಮ ವಧು/ವರ ಸದೊರೆತು ಶೀಘ್ರವಾಗಿ ವಿವಾಹ ಸಂಪನ್ನವಾಗಲೆಂದು ಆಶೀರ್ವದಿಸಲಾಗುತ್ತದೆ.

ನಂತರ ಅದರ ಮುಂದಿನ ದಿನ ನಡೆಯುವ ಶ್ರೀ ಕಾಶಿ ವಿಶ್ವನಾಥಸ್ವಾಮಿಯ ರಥೋತ್ಸವವು ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಮುಂಜಾನೆಯೇ ರಥವನ್ನು ನಾನಾ ಬಗೆಯ ಹೂಗಳಿಂದ ಅಲಂಕರಿಸಿ, ರಥದ ಮೆರವಣಿಗೆಗೆ ಸಾಗಲಿರುವ ಉತ್ಸವ ಮೂರ್ತಿಗಳನ್ನು ಪವಿತ್ರ ಮಂಟಪದಲ್ಲಿರಿಸಿ ಪೂಜೆ ಮಾಡಲಾಗುತ್ತದೆ. ಊರಿನ ಮುಖಂಡರೆಲ್ಲಾ ಪೂಜೆ ಮಾಡಿ ಗ್ರಾಮದ ಒಳಿತಿಗಾಗಿ ಪ್ರಾರ್ಥಿಸುತ್ತಾರೆ. ತಹಶೀಲ್ದಾರ್, ಊರಿನ ಪ್ರಮುಖ ವ್ಯಕ್ತಿಗಳು ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿರುತ್ತಾರೆ.
ಉತ್ಸವ ಮೂರ್ತಿಗಳನ್ನು ಹೊತ್ತು 3 ಬಾರಿ ರಥದ ಸುತ್ತ ಪ್ರದಕ್ಷಿಣೆ ಮಾಡಿ ರಥದ ಮೇಲಕ್ಕೇರಿಸಲಾಗುತ್ತದೆ. ನಂತರ ದೇವಸ್ಥಾನಕ್ಕೆ ಸುತ್ತುವರೆದಿರುವ ಪ್ರಮುಖ ಬೀದಿಗಳಲ್ಲಿ ಈ ರಥವು ಸಾಗುವುದರ ಮೂಲಕ ಗ್ರಾಮಸ್ಥರ ಜೀವನದಲ್ಲಿ ಭಕ್ತಿ, ಶ್ರದ್ದೆ ಮತ್ತು ಉತ್ಸಾಹಗಳನ್ನು ಹೆಚ್ಚಿಸುತ್ತದೆ. ನವ ದಂಪತಿಗಳು ರಥವು ಸಾಗುತ್ತಿರುವಾಗ ಅದರೆಡೆಗೆ ಹಣ್ಣು, ಜವನಗಳನ್ನು ಎಸೆಯುವುದರ ಮೂಲಕ ಮಂಗಳಕರ ಜೀವನಕ್ಕಾಗಿ ಪ್ರಾರ್ಥಿಸುತ್ತಾರೆ. ಈ ರಥೋತ್ಸವವು ಯಾವಾಗಲೂ ನಡೆಯುವುದು ಬೇಸಿಗೆಗಾಲದಲ್ಲಿ ಅದರಲ್ಲೂ 11/12 ಗಂಟೆಯ ಆಸುಪಾಸಿನಲ್ಲೆ. ಆ ಸಮಯದಲ್ಲಿ ಸೂರ್ಯನ ಶಾಖ ಹೆಚ್ಚಿರುವುದರಿಂದ ಭಕ್ತರ ದಣಿವಾರಿಸಲು ಸ್ವಯಂ ಸೇವಕರು ಮಜ್ಜಿಗೆ ಅಥವಾ ಪಾನಕದ ವ್ಯವಸ್ಥೆಯನ್ನು ಮಾಡಿರುತ್ತಾರೆ. ರಥವು ಮೆರವಣಿಗೆಗೆ ಹೋಗಿ ಮತ್ತೆ ಮಂಟಪದ ಬಳಿ ಬಂದ ಮೇಲೆ ಭಕ್ತರೆಲ್ಲರೂ ರಥಕ್ಕೆ ಪೂಜೆ ಸಲ್ಲಿಸುತ್ತಾರೆ. ನಂತರ ಅನ್ನಸಂತರ್ಪಣೆಯಲ್ಲಿ ಪ್ರಸಾದವಾಗಿ ಪಾಯಸ, ಅನ್ನ, ಸಾಂಬಾರು, ಪಲ್ಯಗಳನ್ನು ನೀಡುವುದು ವಾಡಿಕೆ. ಆದರೆ ಈ ಬಾರಿ ನಮ್ಮ ರಾಜ್ಯ ವಿಧಾನಸಭಾ ಚುನಾವಣೆಯ ಸಮೀಪದಲ್ಲೇ ಇರುವುದರಿಂದ ಭಾರಿ ಜನಸಂದಣಿಯೊಂದಿಗೆ ಸಾಗುವ ರಥೋತ್ಸವದ ಅನ್ನಸಂತರ್ಪಣೆಗೆ ಅನುಮತಿಯನ್ನೇ ನಿರಾಕರಿಸಲಾಗಿತ್ತು. ನಂತರ ಗ್ರಾಮದ ಮುಖಂಡರೆಲ್ಲಾ ಚರ್ಚಿಸಿ ಬಾತು, ಮೊಸರನ್ನ, ಲಡ್ಡುವನ್ನಾದರೂ ನೀಡಬೇಕೆಂದು ತೀರ್ಮಾನಿಸಿ ಅದನ್ನು ನೆರವೇರಿಸಿದರು.

ವರ್ಷ ಪೂರ್ತಿ ಇಂತಹ ಹಲವಾರು ಆಚರಣೆಗಳನ್ನು ನಡೆಸಿಕೊಂಡು ಬರುವ ನಮ್ಮ ಊರಿನಲ್ಲಿ ಸದಾ ಜೀವನೋತ್ಸಾಹ ಜೀವಂತವಾಗಿರುತ್ತದೆ. ನಮ್ಮ ಊರಾದ ಮಹದೇವಪುರ ಎಂಬ ಹೆಸರಲ್ಲೇ ಆ ಮಹಾದೇವ, ದೇವಾದಿದೇವ ಶಿವನಿದ್ದಾನೆ. ನಮ್ಮ ಹಿಂದೂ ಧರ್ಮದ ಪ್ರಕಾರ ತ್ರಿಮೂರ್ತಿಗಳಲ್ಲಿ ಸಂಹಾರಕನಾದ ಶಿವನೇ ನಮ್ಮನ್ನು ಇಹಬಂಧನದಿಂದ ಬಿಡುಗಡೆಗೊಳಿಸಿ ಮುಕ್ತಿ ನೀಡುವವನು. ಆದ್ದರಿಂದ ಯಾವುದೇ ಮನುಷ್ಯನಾದರೂ ಶಿವನ ಮೇಲೆ ವಿಶೇಷವಾದ ಶ್ರದ್ಧಾಭಕ್ತಿಗಳನ್ನು ಹೊಂದಿರುತ್ತಾನೆ. ಇಂತಹ ಐತಿಹಾಸಿಕ ಕಾಶಿ ವಿಶ್ವನಾಥಸ್ವಾಮಿಯ ದೇವಸ್ಥಾನವನ್ನು ಮತ್ತಷ್ಟು ಮಗದಷ್ಟು ಅಭಿವೃದ್ಧಿ ಮಾಡುತ್ತಾ, ಅದರ ಸಂಬಂಧಿತ ಮಹೋತ್ಸವಗಳನ್ನು ಆಚರಿಸುತ್ತಾ ಅದನ್ನು ಒಂದು ಶ್ರೇಷ್ಠ ಸನಾತನ ಪರಂಪರೆಯ ಧಾರ್ಮಿಕ ಕ್ಷೇತ್ರವನ್ನಾಗಿ ಮಾಡಬೇಕು ಎಂಬುದೇ ಗ್ರಾಮಸ್ಥರಾದ ನಮ್ಮ ವಿನಂತಿ.

ಸಿಂಚನ ಎಂ.ಕೆ., ಮಂಡ್ಯ
Kalahamsa Infotech private limitedಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaMandyaNewsinKannadaNewsKannadaಮಂಡ್ಯ
Share209Tweet123Send
Previous Post

ಗಾಂಜಾ ಮಾರಾಟ ಹಿನ್ನೆಲೆ: ಮೂವರ ಬಂಧನ

Next Post

ಚಿತ್ರ ಪೂರ್ಣಿಮೆ ಪ್ರಯುಕ್ತ ಸುಣ್ಣದ ಹಳ್ಳಿಯಲ್ಲಿ ಪವಮಾನ ಹೋಮ, ರಥೋತ್ಸವ ಸಂಪನ್ನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಚಿತ್ರ ಪೂರ್ಣಿಮೆ ಪ್ರಯುಕ್ತ ಸುಣ್ಣದ ಹಳ್ಳಿಯಲ್ಲಿ ಪವಮಾನ ಹೋಮ, ರಥೋತ್ಸವ ಸಂಪನ್ನ

ಚಿತ್ರ ಪೂರ್ಣಿಮೆ ಪ್ರಯುಕ್ತ ಸುಣ್ಣದ ಹಳ್ಳಿಯಲ್ಲಿ ಪವಮಾನ ಹೋಮ, ರಥೋತ್ಸವ ಸಂಪನ್ನ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ತಾಯಿಯ ಕೈಜಾರಿ ಬಾವಿಗೆ ಬಿದ್ದ ಒಂದೂವರೆ ವರ್ಷದ ಮಗು ಸಾವು

ಘೋರ ಘಟನೆ | ಶಿವಮೊಗ್ಗದಲ್ಲಿ ಶಾಲಾ ಬಸ್ ಡಿಕ್ಕಿ ಹೊಡೆದು ಒಂದೂವರೆ ವರ್ಷದ ಮಗು ದಾರುಣ ಸಾವು

March 31, 2026
ಪ್ರಶಸ್ತಿಗಳು ಸಾಧಕರಿಗೆ ಗೌರವ ಇತರರಿಗೆ ಸ್ಪೂರ್ತಿ | ಡಾ. ಗಿರಿಧರ ಕಜೆ

ಪ್ರಶಸ್ತಿಗಳು ಸಾಧಕರಿಗೆ ಗೌರವ ಇತರರಿಗೆ ಸ್ಪೂರ್ತಿ | ಡಾ. ಗಿರಿಧರ ಕಜೆ

March 31, 2026
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಚನಾತ್ಮಕ ಸಿದ್ಧತೆ ಮುಖ್ಯ | ಡಾ.ಸ್ವಾಮಿ ಕರೆ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಚನಾತ್ಮಕ ಸಿದ್ಧತೆ ಮುಖ್ಯ | ಡಾ.ಸ್ವಾಮಿ ಕರೆ

March 31, 2026
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯ, ಅಭಿವೃದ್ಧಿ ಶೂನ್ಯ: ಶಾಸಕ ಚನ್ನಬಸಪ್ಪ ವಾಗ್ದಾಳಿ

ಶಿವಮೊಗ್ಗದ ಸಾಂಸ್ಕೃತಿಕ ವೈಭವ, ಅಭಿವೃದ್ಧಿ ಕಾರ್ಯಗಳನ್ನು ಜಗತ್ತಿಗೆ ಪರಿಚಯಿಸಿ: ಶಾಸಕ ಚನ್ನಬಸಪ್ಪ

March 31, 2026
ಶಿವಮೊಗ್ಗದಲ್ಲಿ ಸರಣಿ ಅಪಘಾತ | ಕಾರು-ಬಸ್ ನಡುವೆ ಸಿಲುಕಿದ ಆಟೋ ನಜ್ಜುಗುಜ್ಜು | ಘಟನೆ ನಡೆದಿದ್ದು ಹೇಗೆ?

ಶಿವಮೊಗ್ಗದಲ್ಲಿ ಸರಣಿ ಅಪಘಾತ | ಕಾರು-ಬಸ್ ನಡುವೆ ಸಿಲುಕಿದ ಆಟೋ ನಜ್ಜುಗುಜ್ಜು | ಘಟನೆ ನಡೆದಿದ್ದು ಹೇಗೆ?

March 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL