No Result
View All Result
Indian Railway Fine Hike
English Articles

Jan Vishwas Act 2026: Revised Railway Penalty Rules Likely from July 1

by ಕಲ್ಪ ನ್ಯೂಸ್
June 23, 2026
0

Kalpa Media House  | New Delhi | The Indian Railways is set to implement revised penalty provisions under the Jan...

Read moreDetails
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
  • Advertise With Us
  • Grievances
  • About Us
  • Contact Us
Wednesday, June 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Others

ರಾಜಧಾನಿಯ ನಿದ್ದೆಗೆಡಿಸಿದ್ದ ಸರಗಳ್ಳರು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 29, 2017
in Others, ದಕ್ಷ
0
Share on FacebookShare on TwitterShare on WhatsApp

1984

ಬೆಂಗಳೂರಿನಲ್ಲಿ ಇಷ್ಟೊಂದು ಪೊಲೀಸ್ ಆಫೀಸರ್‌ಗಳಿದ್ದೀರಾ…ಆ ಇಬ್ಬರು ದುರ್ಷ್ಮಿಗಳನ್ನು ಮಟ್ಟ ಹಾಕುವ ತಾಕತ್ತು ಇಲ್ಲಿರುವ ಒಬ್ಬರಲ್ಲಿಯೂ ಇಲ್ಲವಾ?..

ನಗರ ಪೊಲೀಸ್‌ ಆಯುಕ್ತರ ಸಭೆ ಮುಗಿಸಿ ಹೊರಬರುವಾಗ ಈ ಮಾತು ನನ್ನನ್ನು ಈಟಿಯಂತೆ ತಿವಿಯಲಾರಂಭಿಸಿತ್ತು. ಅವರು ಬಳಸಿದ ‘ತಾಕತ್ತು’ ಎಂಬ ಪದ ಮರ್ಮಾಘಾತವನ್ನುಂಟುಮಾಡಿತ್ತು. ಹೇಗಾದರೂ ಸರಿ ಆ ಇಬ್ಬರನ್ನು ಆದಷ್ಟು ಬೇಗ ಬಲೆಗೆ ಕೆಡವಲೇಬೇಕು ಎಂಬ ಛಲ ಮನದಲ್ಲಿ ಮೂಡಿತು.

ಇದಕ್ಕೆಲ್ಲ ಮೂಲ, ಸರಣಿ ಅಪಹರಣ ಪ್ರಕರಣ.ಅದು 1983-84ನೇ ಇಸವಿ. ಆಗ  ಬೆಂಗಳೂರು ನಗರದಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಯರು ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುವಾಗ ಮೋಟರ್ ಸೈಕಲ್‌ನಲ್ಲಿ ಬಂದ ಇಬ್ಬರು ಚೋರರು ಮಹಿಳೆಯರ ಕುತ್ತಿಗೆಯಿಂದ ಬೆಲೆಬಾಳುವ ಚಿನ್ನದ ಮಾಂಗಲ್ಯ ಸರ ಹಾಗೂ ಚಿನ್ನದ ಚೈನುಗಳನ್ನು ಬಲಾತ್ಕಾರವಾಗಿ ಕಿತ್ತುಕೊಂಡು ಪರಾರಿಯಾಗುವ ಅಪರಾಧಗಳು ವರದಿಯಾಗಲು ಪ್ರಾರಂಭಿಸಿದವು. ಆಗ ನಗರ ಪೊಲೀಸ್ ಆಯುಕ್ತರಾಗಿದ್ದವರು ಪಿ.ಜಿ. ಹರ್ಲಂಕರ್. ನನ್ನ ಮಟ್ಟಿಗೆ ಅವರು ಬೆಂಗಳೂರು ಮಹಾನಗರ ಕಂಡ ಅತ್ಯಂತ ದಕ್ಷ, ಪ್ರಾಮಾನಿಕ, ಶಿಸ್ತಿನ ಮತ್ತು ಖಡಕ್ ಕಮೀಷನರ್. ಆದರೆ ನಗರದಲ್ಲಿ ನಡೆಯಲಾರಂಭಿಸಿದ್ದ ಚೈನ್‌ಸ್ನ್ಯಾಚಿಂಗ್‌ಕೇಸುಗಳು ಅವರ ನೆಮ್ಮದಿ ಕೆಡಿಸಿದ್ದವು. 30ರಿಂದ 40 ದಿನಗಳ ಅಂತರದಲ್ಲಿ ಇದ್ದಕಿದ್ದಂತೆ ಒಂದು ದಿನ, ಬೈಕ್‌ನಲ್ಲಿ ಆಗಮಿಸುತ್ತಿದ್ದ ದುಷ್ಕರ್ಮಿಗಳಿಬ್ಬರು ಬೆಳಿಗ್ಗೆ 9ರಿಂದ ಸಂಜೆ 5ಗಂಟೆಯೊಳಗೆ ನಾಲ್ಕೈದು ಬಡಾವಣೆಗಳಲ್ಲಿ ಮಿಂಚಿನಂತೆ ಸಂಚರಿಸುತ್ತಾ ಮಹಿಳೆಯರ ಮಾಂಗಲ್ಯ ಕಿತ್ತು ಪರಾರಿಯಾಗುತ್ತಿದ್ದರು.

ಇಂದಿರಾನಗರದ ಸಿಎಂಎಚ್‌ ರಸ್ತೆಯಲ್ಲಿ ಪತಿಯ ಜೊತೆ ಸ್ಕೂಟರ್‌ನಲ್ಲಿ ತೆರೆಳುತ್ತಿದ್ದ ಮಹಿಳೆಯೊಬ್ಬರು ಸರಗಳ್ಳರದಾಳಿಗೆ ಸಿಲುಕಿ ಕೆಳಗುರುಳಿದ್ದಳು. ತಲೆಗೆ ಏಟಾಗಿ  ತಿಂಗಳುಗಟ್ಟಲೇ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡಬೇಕಾಯಿತು. ಸಾಲದೆಂಬಂತೆ, ಇಂದಿರಾನಗರ ಮತ್ತು ಬಸವನಗುಡಿಯ ಮಹಿಳಾ ಸಂಘದ ಅಧ್ಯಕ್ಷತೆ ಮತ್ತು ಕಾರ್ಯದರ್ಶಿಯ ಸರವನ್ನೇ ಕಿತ್ತುಕೊಂಡು ಹೋಗಿದ್ದು, ಮಾಧ್ಯಮಗಳಲ್ಲಿ ದೊಡ್ಡಗುಲ್ಲಿಗೆ ಕಾರಣವಾಯಿತು. ಆ ದಿನಗಳಲ್ಲಿ ಬೆಂಗಳೂರಿನ ಜನರಿಗೆ ಇದು ಹೊಸಬಗೆಯ ಪಾತಕ ಕೃತ್ಯವಾಗಿತ್ತು. ಪೊಲೀಸರ ವೈಫಲ್ಯದ ವಿರುದ್ಧ ಜನದನಿ ಮೊಳಗಲಾರಂಭಿಸಿತು. ಮಹಿಳೆಯರ ನಿತಯೋಗ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ರಾಜ್ಯಪಾಲ ಅಶೋಕನಾಥ್ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಅಳಲು ತೋಡಿಕೊಂಡಿತು. ಸಿಎಂ ಮತ್ತು ರಾಜ್ಯಪಾಳರು ಪೊಲೀಸ್ ಆಯುಕ್ತರನ್ನು ಕರೆಸಿ, ಈ ಪ್ರಕರಣವನ್ನು ಕೂಡಲೇ ಬೇಧಿಸುವಂತೆ ತಾಕೀತು ಮಾಡಿ ಕಳುಹಿಸಿದ್ದರು. ಇದರಿಂದ ವಿಚಲಿತರಾಗಿದ್ದ ಹರ್ಲಂಕರ್ ಸಾಹೇಬರು ಬೆಂಗಳೂರಿನ ಎಲ್ಲಾ ಹಂತದ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ಕರೆದಿದ್ದರು.

ಸುಮಾರು ಒಂದೂವರೆ ವರ್ಷದಿಂದ ನಿಯಮಿತವಾಗಿ ನಡೆಯುತ್ತಿದ್ದ ಸರಗಳವು ಪ್ರಕರಣದ ಬಗ್ಗೆ ಗಂಭೀರವಾಗಿ ಮಾತನಾಡಿದ ಆಯುಕ್ತರು,  ಇಲ್ಲಿ ಕೂತಿರುವ ಇಷ್ಟೊಂದು ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಿಗೂ  ಆ ಪಾತಕಿಗಳನ್ನು ಬಲೆಗೆ ಕೆಡವುವ ತಾಕತ್ತು ಇಲ್ಲವೇ ಎಂದು ವ್ಯಂಗ್ಯಭರಿತ ಆಕ್ರೋಶದಿಂದ ಹೇಳಿದರು. ಎರಡು ಅಥವಾ ಮೂರು ರಸ್ತೆ ಸೇರುವ ಜಂಕ್ಷನ್ ಗುರುತಿಸಿ ಅಲ್ಲಿ ನಿಗಾ ಇಡಲು ಮೂರುರಸ್ತೆಗಳನ್ನು ಗುರುತಿಸಿ, ಅಲ್ಲಿ ನಿಗಾ ಇಡಲು ಎಸ್‌ಐಯಿಂದ ಡಿಸಿಪಿಗಳ ತನಕ ಸ್ಥಳ ನಿಗದಿ ಮಾಡಲಾಯಿತು. ಸರಗಳವಿನ ಕುರಿತು ಸಾರ್ವಜನಿಕರಿಂದ ಮಾಹಿತಿ ಬಂದ ತಕ್ಷಣ ಎಲ್ಲೆಡೆ ವೈರ್‌ಲೆಸ್ ಸಂದೇಶ ರವಾನಿಸಬೇಕು ಮತ್ತು ಎಲ್ಲ ಅಧಿಕಾರಿಗಳು ಆಯಾ ಸ್ಥಳಕ್ಕೆ ದೌಡಾಯಿಸಿ ಸಂಘಟಿತವಾಗಿ ದುಷ್ಕರ್ಮಿಗಳ ಬೇಟೆಗೆ ಇಳಿಯುವ ಕಾರ್ಯತಂತ್ರ ರೂಪಿಸಲಾಯಿತು. ಅಲ್ಲಿಯವರೆಗೆ ಇಂಥ ಪ್ರಕರಣಗಳಲ್ಲಿ ಹಾಕಲಾಗುತ್ತಿದ್ದ ಲಐಪಿಸಿ ಸೆಕ್ಷನ್ 329 (ಕಳವು) ಬದಲಿಗೆ ಐಪಿಸಿ ಸೆಕ್ಷನ್ 392 (ರಾಬರಿ) ದಾಖಲಿಸಲು ತೀರ್ಮಾನಿಸಲಾಯಿತು. ಈ ಕೇಸನ್ನು ಭೇದಿಸಿದವರಿಗೆ ಇಲಾಲಖೆಯಲ್ಲಿನ ಅತ್ಯುನ್ನತ ಪದಕ ನೀಡಿ ಗೌರವಿಸಲಾಗುವುದು ಎಂದೂ ಆಯುಕ್ತರು ಘೋಷಿಸಿದರು. ಆ ಕಾರ್ಯಾಚರಣೆಗೆ ಹರ್ಲಂಕರ್ ಇಟ್ಟ ಹೆಸರು ‘ಆಪರೇಷನ್ ಟೈಗರ್!’

ಯಥಾಪ್ರಕಾರ ಸರಗಳ್ಳರ ಕೈಚಳಕ ಮುಂದುವರಿಯಿತು. ಪೊಲೀಸ್ ಅಧಿಕಾರಿಗಳೆಲ್ಲ ಆಪರೇಷನ್ ಟೈಗರ್ ಕಾರ್ಯಾಚರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಆಟದರೆ ಪಲಿತಾಂಶ ಮಾತ್ರ ಶೂನ್ಯ. ಮೂರು-ನಾಲ್ಕು ತಿಂಗಳ ಬಳಿಕವೂ ಫಲ ದೊರೆಯಲಿಲ್ಲ. ಟೈಗರ್ ಕಾರ್ಯಾಚರಣೆಯ ಕಾರ್ಯಕ್ಷಮತೆ ಪರೀಕ್ಷಿಸಲು ಪೊಲೀಸ್ ಆಯುಕ್ತು ರಹಸ್ಯವಾಗಿ ಒಂದು ಅಣಕು ಕಾರ್ಯಾಚರಣೆ ರೂಪಿಸಿದರು. ಹಲಸೂರು ಠಾಣೆಯಲ್ಲಿ ಕ್ರೈಂ ಎಸ್‌ಐ ಆಗಿದ್ದು ಚಾಂದಿರಾಂ ಸಿಂಗ್ ಎಂಬುವರಿಗೆ ಪೂರ್ತಿ  ಮುಖ ಮುಚ್ಚುವ ಹೆಲ್ಮೆಟ್ ಹಾಕಿಸಿ ಸರಗಳ್ಳನ ಪಾತ್ರ ವಹಿಸಿದರು. ಚಾಂದಿರಾಂ ಬೆಳಗ್ಗೆ 9.30ಕ್ಕೆ ಅಣಕು ಕಾರ್ಯಾಚರಣೆ ಆರಂಭಿಸಿದರು. ಅಂದಿನ ಡಿಸಿಪಿ ನಾಗರಾಆಜ್ ಅವರು ಕಂಟ್ರೋಲ್ ರೂಮ್‌ಗೆ ಸಾಮಾನ್ಯ ನಾಗರಿಕರಂತೆ ಕರೆ ಮಾಡಿ ‘ಹಲಸೂರು ಕೆರೆಯ ಬಳಿ ಅಪರಿಚಿತರಿಬ್ಬರು ಬೈಕ್‌ನಲ್ಲಿ ಬಂದು ಮಹಿಳೆಯೊಬ್ಬರ ಚಿನ್ನದ ಸರ ಕಿತ್ತುಕೊಂಡು ಫ್ರೇಜರ್‌ಟೌನ್ ಕಡೆಗೆ ಪರಾರಿಯಾಗಿದ್ದಾರೆ. ಅವರ ಬೈಕ್ ನಂ.ಸಿಎಬಿ-9246’ ಎಂದು ಮಾಹಿತಿ ನೀಡಿದರು. ಕ್ಷಣಾರ್ಧದೊಳಗೆ ಎಲ್ಲ ಪೊಲೀಸ್ ಅಧಿಕಾರಿಗಳ ವೈರ್‌ಲೆಸ್‌ಗೆ ಸಂದೇಶ ರವಾನೆಯಾಯಿತು. ಪೊಲೀಸ್ ಆಯುಕ್ತರೂ ಕಂಟ್ರೋಲ್ ರೂಮ್‌ಗೆ  ಬಂದು ಕುಳಿತು ಅವಲೋಕನ ನಡೆಸತೊಡಗಿದರು. ಆಪರೇಷನ್ ಟೈಗರ್ ಚುರುಕಾಯಿತು. ಆಯಕಟ್ಟಿನ ಸ್ಥಳಗಳಲ್ಲಿ ನಾಕಾಬಂದಿ. ಇಷ್ಟಾಗಿಯೂ ‘ಅಣಕು ಸರಗಳ್ಳ’ ಚಾಂದಿರಾಂ ಸಿಂಗ್ ಹಲಸೂರು ಕೆರೆಯಿಂದ ಪ್ರೇಜರ್‌ಟೌನ್‌ಗೆ ಬಂದು, ಅಲ್ಲಿಂದ ಬಾಣಸವಾದಿ, ಜೆ.ಸಿ.ನಗರ ಕಡೆಯಿಂದ ಮೌಂಟ್ ಕಾರ್ಮೆಲ್ ಕಾಲೇಜಿನ ಬಳಿ ಬಂದು, ಸದಾಶಿವನಗರ, ಮಲ್ಲೇಶ್ವರ ಕಡೆಯೆಲ್ಲ ಆರಾಮವಾಗಿ ಸುತ್ತಾಡಿದ್ದರು. ಪೊಲೀಸ್ ಕಾವಲಿರುವ ಕೆಲವು ಜಂಕ್ಷನ್‌ಗಳನ್ನು ಹಾದು ಹೋಗಿದ್ದರು. ಇನ್ನೂ ಕೆಲವು ಸರ್ಕಲ್‌ಗಳನ್ನು ತಪ್ಪಿಸಿ ಒಳ ದಾರಿಯಲ್ಲಿ ಮುಂದೆ ಸಾಗಿದ್ದರು. ಕಂಟ್ರೋಲ್ ರೂಮ್‌ನಲ್ಲಿ ಕುಳಿತು ವೈರ್‌ಲೆಸ್ ಮೂಲಕ ಪೊಲೀಸರನ್ನು ಹುರಿದುಮಬಿಸುತ್ತಿದ್ದ ಪೊಲೀಸ್ ಕಮೀಷನರ್‌ಗೆ ಸಿಬ್ಬಂದಿಯ ವೈಫಲ್ಯ ಎದ್ದು ಕಾಣುತ್ತಿತ್ತು. ಪೊಲೀಸರ ಮುಂದೆಯೇ ನಿರಾಯಾಸವಾಗಿ ಹಾದು ಹೋಗುತ್ತ ಮಧ್ಯಾಹ್ನದ ಹೊತ್ತಿಗೆ ಚಾಂದಿರಾಂ ಚಾಮರಾಜಪೇಟೆ ತಲುಪಿದರು. ಅಲ್ಲಿ ಅವರು, ಎಸ್‌ಐ ಆಗಿದ್ದ ಪುರುಷೋತ್ತಮ್ ಎಂಬುವರ ಕಣ್ಣಿಗೆ ಬಿದ್ದರು. ಅವರು ಹಳೆಯ ಸ್ಕೂಟರ್‌ವೊಂದನ್ನು ಏರಿ ಚಾಂದಿರಾಂರ ಬೈಕ್‌ನ್ನು ಅಟ್ಟಿಸಿಕೊಂಡು ಹೋದರು. ಕೊನೆಗೂ ಟಿ.ಆರ್. ಮಿಲ್ ಬಳಿಯ ಡೆಡ್‌ಎಂಡ್ ರಸ್ತೆಯಲ್ಲಿ ಸೆರೆ ಹಿಡಿಯಲು ಯಶಸ್ವಿಯಾದರು. ಜನ ಮುತ್ತಿಗೆ ಹಾಕಿದ್ದು ನೋಡಿ, ಚಾಂದಿರಾಂ ಜತೆ ಇದ್ದ ಕಾನ್‌ಸ್ಟೇಬಲ್ ಪೇರಿ ಕಿತ್ತಿದ್ದ.

ತಾವು ಕ್ರೈಂ ಪಿಎಸ್‌ಐ, ಇದು ಅಣಕು ಪ್ರದರ್ಶನ ಎಂದು ಪರಿಪರಿಯಾಗಿ ಕೇಳಿಕೊಂಡರೂ ಯಾರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಅವರನ್ನು ಚಾಮರಾಜ ಪೇಟೆ ಠಾಣೆಗೆ ಎಳೆದು ತರಲಾಯಿತು. ಸರಗಳ್ಳ ಸೆರೆ ಸಿಕ್ಕ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಠಾಣೆಗೆ ಧಾವಿಸಿ ಬಂದ ಅಂದಿನ ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಂ. ಕುಶಾಲಪ್ಪ ಅವರು, ದಯನೀಯ ಸ್ಥಿತಿಯಲ್ಲಿದ್ದ ಚಾಂದಿರಾಂರ ಗುರುತು ಹಿಡಿದರು. ಇನ್ನೇನು ತಾವು ಬಚಾವ್ ಎಂದುಕೊಳ್ಳುತ್ತಿರುವಾಗಲೇ, ‘ನಿನಗೇಕೋ ಬಂದು ಈ ದುರ್ಬುದ್ಧಿ? ಇನ್ನು ನಿನ್ನ ಕತೆ ಮುಗೀತು’ ಎಂದು ಕುಶಾಲಪ್ಪ ಇನ್ನಷ್ಟು ಬೈದು ಹೋದರು! ಅಷ್ಟರಲ್ಲಿ ಪೊಲೀಸ್ ಆಯುಕ್ತ ಹರ್ಲಂಕರ್ ಮತ್ತು ಡಿಸಿಪಿ ನಾಗರಾಜ್ ವೈರ್‌ಲೆಸ್ ಸಂದೇಶದಲ್ಲಿ ವಾಸ್ತವ ಸಿಳಿಸಿ, ಕೂಡಲೇ ಚಾಂದಿರಾಂರನ್ನು ಬಿಡುಗಡೆ ಮಾಡುವಂತೆ ಸೂಚಿಸಿದರು. ಅವರನ್ನು ಕಚೇರಿಗೆ ಕರೆಸಿಕೊಂಡ ಆಯುಕ್ತರು. ಯಾವ ಯಾವ ಜಂಕ್ಷನ್‌ನಲ್ಲಿ ಪೊಲೀಸ್ ಅಧಿಕಾರಿಗಳು ಬೇಜವಾಬ್ದಾರಿಯಿಂದಿದ್ದರು ಎಂಬ ಮಾಹಿತಿ ಪಡೆದರು. ಆಪರೇಷನ್ ಟೈಗರ್‌ನ ದುರ್ಬಲ ಅಂಶಗಳನ್ನು ನೋಟ್ ಮಾಡಿಕೊಂಡರು. ಜತೆಗೆ ದಿಟ್ಟತನ ತೋರಿಸಿದ ಎಸ್‌ಐ ಪುರುಷೋತ್ತಮ್‌ಗೆ ಬಹುಮಾನ ಘೋಷಿಸಿದರು.

Tags: 1984BangaloreChain SnatchersTiger BB Ashok Kumar
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಉತ್ತರ ಕೊರಿಯಾ ಎಂಬ ನರಕ-3

Next Post

ಚೋರರ ಸೆರೆಗೆ ಸಿನಿಮೀಯ ಚೇಸ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಚೋರರ ಸೆರೆಗೆ ಸಿನಿಮೀಯ ಚೇಸ್

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ | ಕಾರಣವೇನು?

ತುಮಕೂರು: 30 ಲಕ್ಷದ ಎಲ್‌ಐಸಿ ಹಣಕ್ಕಾಗಿ ತಮ್ಮನನ್ನೇ ಕೊಲೆ | ಅಪಘಾತ ನಾಟಕ ಬಯಲು

June 24, 2026
33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ!, ಏನಿದು ಕೇಸ್?

ಲಿವ್-ಇನ್ ಸಂಬಂಧಕ್ಕೆ ಅಡ್ಡಿ: ಟೆಕ್ಕಿ ಯುವತಿ ಬಂಧನ, ಕುಟುಂಬದ ಮೂವರ ಹತ್ಯೆ ಪ್ರಕರಣ

June 24, 2026
accessible-toilet-for-special-needs-children-in-shivamogga

ನಾರಾಯಣ ಹೆಲ್ತ್ ಸಂಸ್ಥೆಯಿಂದ ವಿಶೇಷ ಮಕ್ಕಳಿಗಾಗಿ ಸುಲಭ ಶೌಚಾಲಯ ಉದ್ಘಾಟನೆ

June 24, 2026
ಸಚಿವ ಸತೀಶ್ ಜಾರಕಿಹೊಳಿ ಭಾವನ ನಿವಾಸದ ಮೇಲೆ ಇಡಿ ದಾಳಿ

ಸಚಿವ ಸತೀಶ್ ಜಾರಕಿಹೊಳಿ ಭಾವನ ನಿವಾಸದ ಮೇಲೆ ಇಡಿ ದಾಳಿ

June 24, 2026
Bomb Threat to Shivamogga Court | Bomb Squad Conducts Intensive Search

ಶಿವಮೊಗ್ಗ ಕೋರ್ಟ್‌ಗೆ ಬಾಂಬ್ ಬೆದರಿಕೆ | ಬಾಂಬ್ ನಿಷ್ಕ್ರಿಯ ದಳ ತಪಾಸಣೆ

June 24, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL