ಕಲ್ಪ ಮೀಡಿಯಾ ಹೌಸ್ | ತಿರುಪ್ಪೂನರ್(ತಮಿಳುನಾಡು) |
ತನ್ನ ಇಚ್ಚೆಗೆ ವಿರುದ್ಧವಾಗಿ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾದ ಯುವಕನನ್ನು ಹಾಗೂ ಇದನ್ನುಬೆಂಬಲಿಸಿದ ತಾಯಿಯನ್ನೇ ವ್ಯಕ್ತಿಯೊಬ್ಬ ಅತ್ಯಂತ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಇಲ್ಲಿನ ಕೃಷ್ಣಗಿರಿಯ ತಿರುಪ್ಪೂನರ್’ನಲ್ಲಿ ಘಟನೆ ನಡೆದಿದ್ದು, ಹತ್ಯೆಯಾದವರನ್ನು ಸುಭಾಷ್(23) ಹಾಗೂ ಕನ್ನಮ್ಮಾಳ್ ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆಯೇನು?
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸುಭಾಷ್ ತನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಅನ್ಯ ಜಾತಿಯ ಅನುಸೂಯ ಎನ್ನುವವರು ಪರಸ್ಪರ ಪ್ರತಿಸುತ್ತಿದ್ದರು. ಈ ವಿಚಾರ ತಿಳಿದ ಸುಭಾಷ್ ತಂದೆ ದಂಡಪಾಣಿ ಆಕೆಯನ್ನು ಬಿಟ್ಟುಬಿಡುವಂತೆ ಬೆದರಿಕೆ ಹಾಕಿದ್ದಾರೆ. ಆದರೆ, ಇದಕ್ಕೆ ತಲೆಕೆಡಿಸಿಕೊಳ್ಳದ ಆತ 15 ದಿನಗಳ ಹಿಂದೆ ಅನುಸೂಯಳನ್ನು ಮದುವೆಯಾಗಿದ್ದರು. ಆದರೆ, ತನ್ನ ಮನೆಗೆ ಬಂದಿರಲಿಲ್ಲ.
ಸುಭಾಷ್ ಹಾಗೂ ಅನುಸೂಯ ದಂಪತಿಗಳನ್ನು ಆತನ ಅಜ್ಜಿ ಕನ್ನಮ್ಮಾಳ್ ಅವರು ತಮಿಳು ಹೊಸ ವರ್ಷದ ದಿನ ಮನೆಗೆ ಆಹ್ವಾನಿಸಿದ್ದರು. ಈ ವಿಷಯ ತಿಳಿದ ದಂಡಪಾಣಿ ಅಲ್ಲಿಗೆ ಬಂದು ಸಿಟ್ಟಿನಿಂದ ಪುತ್ರ ಸುಭಾಷ್’ನನ್ನು ಕೊಲೆ ಮಾಡಿದ್ದಾನೆ. ಇದನ್ನು ತಡೆಯಲು ಬಂದ ತಾಯಿ ಕನ್ನಮ್ಮಾಳ್’ರನ್ನೂ ಸಹ ಆತ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
Also read: ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ಅತಿ ಹೆಚ್ಚು ಆದಾಯ ಗಳಿಸುವ ದೇಗುಲ: ಈ ವರ್ಷ ಎಷ್ಟು ಸಂಗ್ರಹ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post