ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಂಗಗಳನ್ನು ದಾನ ಮಾಡಲು ಆತನ ಕುಟುಂಬದವರು ಮುಂದಾಗಿದ್ದು, ಈ ಮಹತ್ಕಾರ್ಯದಿಂದ ಏಳು ಮಂದಿಗೆ ವರದಾನವಾಗಿದೆ.
ಭದ್ರಾವತಿ ತಾಲೂಕು ಕೆಂಚನಹಳ್ಳಿ ಗ್ರಾಮದ ನೀರಗುಂಡಿ ರಾಜಪ್ಪ ಎಂಬುವವರ ಮಗ ಆರ್. ಉಲ್ಲಾಸ್ (21) ಏ.22ರಂದು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಆತನನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಉಲ್ಲಾಸ್ ಅವರ ಮಿದುಳು ನಿಷ್ಕ್ರಿಯಗೊಂಡಿತ್ತು. ಈ ಹಿನ್ನೆಲೆ ಕುಟುಂಬದವರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು.
ಹೃದಯ, ಶ್ವಾಸಕೋಶ, ಮೂತ್ರಪಿಂಡಗಳು, ಯಕೃತ್ ಮತ್ತು ಎರಡು ಕಾರ್ನಿಯಾಗಳನ್ನು ದಾನ ಮಾಡಲಾಗಿದೆ. ಶ್ವಾಸಕೋಶವನ್ನು ಚೆನ್ನೈ ಅಪೋಲೊ ಆಸ್ಪತ್ರೆ, ಯಕೃತ್ ಅನ್ನು ಬೆಂಗಳೂರು ಅಸ್ಟರ್ ಸಿಎಂಐ ಆಸ್ಪತ್ರೆ, ಮೂತ್ರಪಿಂಡವನ್ನು ಮಂಗಳೂರಿನ ಎ.ಜೆ.ಆಸ್ಪತ್ರೆ, ಎರಡು ಕಾರ್ನಿಯ ಮತ್ತು ಒಂದು ಮೂತ್ರಪಿಂಡವನ್ನು ಮಣಿಪಾಲದ ನೋಂದಾಯಿತ ರೋಗಿಗಳಿಗೆ ಅಳವಡಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post