ಕಲ್ಪ ಮೀಡಿಯಾ ಹೌಸ್ | ಆನವಟ್ಟಿ |
ಇಲ್ಲಿನ ಶಿವಶಕ್ತಿ ಟೇಡರ್ಸ್ ಅಂಗಡಿಗೆ ಬೆಂಕಿ ಬಿದ್ದಿದ್ದು, ಪರಿಣಾಮ ಅಂಗಡಿ ಸಂಪೂರ್ಣ ಭಸ್ಮವಾಗಿದೆ.
ಅಂಗಡಿಯಲ್ಲಿದ್ದ ಟೈರ್, ಪೇಂಟ್, ಆಯಿಲ್, ಕಬ್ಬಿಣ ಮಾರಾಟ ಮಾಡುವ ಅಂಗಡಿ ಇದಾಗಿದೆ. ಕಬ್ಬಿಣ ಕತ್ತರಿಸುವಾಗ ಯಂತ್ರದಿಂದ ಬರುವ ಬೆಂಕಿಕಿಡಿಗಳು ಆಯಿಲ್ ಅಥವಾ ಕೆಮಿಕಲ್‌ಗಳಿಗೆ ತಗುಲಿ ಈ ಬೆಂಕಿ ಅನಾಹುತ ಸಂಭವಿಸಿದೆ.

ಆನವಟ್ಟಿ ಭಾಗದಲ್ಲಿ ಬಹಳಷ್ಟು ಬೆಂಕಿ ಅನಾಹುತಗಳು ಕಾಣಿಕೊಳ್ಳುತ್ತಿವೆ. ಹಲವು ವರ್ಷಗಳಿಂದ ಆನವಟ್ಟಿ ಭಾಗಕ್ಕೆ ಒಂದು ಅಗ್ನಿಶಾಮಕ ದಳ ವಾಹನ ವ್ಯವಸ್ಥೆ ಬೇಕು ಎಂಬ ಕೂಗು ಕೇಳುತ್ತಲೇ ಇದೆ. ಆದರೆ ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರ ಗಮನಹರಿಸಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post